ಕಾಸರಗೋಡು : ಇಲ್ಲಿನ ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಮತ್ತು ಗ್ರಂಥಾಲಯದ ಸ್ಥಾಪಕ ಅಧ್ಯಕ್ಷ ಡಾ. ವಾಮನ್ ರಾವ್ ಬೇಕಲ್ ಅವರ ಸ್ಥಾಪಕ ಸಂಚಾಲಕತ್ವದ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ಜಿಲ್ಲಾ ಘಟಕದ ಆಶ್ರಯದಲ್ಲಿ ನಡೆದ ಕಾಸರಗೋಡು ಜಿಲ್ಲಾ ಮಟ್ಟದ ಚುಟುಕು ರಚನಾ ಸ್ಪರ್ಧೆಯ ವಿಜೇತರನ್ನು ಘೋಷಿಸಲಾಗಿದೆ.
ಅವನಿ ಎಂ. ಬೆಳ್ಳೂರು, ಪೂಜ ಸಿ. ಹೆಚ್. ದೇಲಂಪಾಡಿ, ಕಾವ್ಯ ರಾವ್ ಕಾಸರಗೋಡು, ಗಾಯತ್ರಿ ಹೆಚ್. ಪಳ್ಳತ್ತಡ್ಕ ಹಾಗೂ ವೈಶಾಲಿನಿ ಟಿ. ಇವರು ‘ಕಾಸರಗೋಡು ಜಿಲ್ಲಾ ಚುಟುಕು ಕಾವ್ಯ ಪ್ರಶಸ್ತಿ-2025’ ಕ್ಕೆ ಆಯ್ಕೆಯಾಗಿದ್ದಾರೆ. ಈ ಸ್ಪರ್ಧೆಯಲ್ಲಿ ಜಿಲ್ಲೆಯ 34 ಮಂದಿ ಕವಿಗಳು ಭಾಗವಹಿಸಿದ್ದರು. 27 ಏಪ್ರಿಲ್ 2025ರಂದು ಅಪರಾಹ್ನ ಘಂಟೆ 2.00ರಿಂದ ಕಾಸರಗೋಡಿನ ನುಳ್ಳಿಪ್ಪಾಡಿಯ ಕನ್ನಡ ಭವನದಲ್ಲಿ ನಡೆಯುವ ಬೇಕಲ ರಾಮ ನಾಯಕ ಅವರ ಸ್ಮರಣಾಂಜಲಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಕಾಸರಗೋಡು ಜಿಲ್ಲಾ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿರಾಜ್ ಅಡೂರು ತಿಳಿಸಿದ್ದಾರೆ.
ಅವನಿ ಎಂ.
ಪೂಜಾ ಸಿ. ಹೆಚ್
ಗಾಯತ್ರಿ ಪಳ್ಳತ್ತಡ್ಕ
ವೈಶಾಲಿ ಟಿ.
ಕಾವ್ಯ ರಾವ್
1 Comment
Okk