Subscribe to Updates

    Get the latest creative news from FooBar about art, design and business.

    What's Hot

    ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ 52ನೇ ವಿವೇಕ ವಾಣಿ ಸರಣಿ ಉಪನ್ಯಾಸ

    February 14, 2026

    ಪ್ರೊ. ಬಿ.ಎ. ವಿವೇಕ ರೈಯವರ ‘ಪಡುವಣ ತೀರದ ಕನ್ನಡ ನಾಡಿನ’ ಕೃತಿ ಲೋಕಾರ್ಪಣೆ

    February 14, 2026

    ಮುಂಬೈಯಲ್ಲಿ ಪಯಣ ಪ್ರಸ್ತುತ ಪಡಿಸುವ ‘ತಲ್ಕಿ’ ನಾಟಕ | ಫೆಬ್ರವರಿ 16

    February 14, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ವಿದ್ವಾನ್ ಕೆರೆಕೈ ಉಮಾಕಾಂತ ಭಟ್ಟರಿಗೆ ಕೀರಿಕ್ಕಾಡು ಪ್ರಶಸ್ತಿ | 31 ಆಗಸ್ಟ್
    Awards

    ವಿದ್ವಾನ್ ಕೆರೆಕೈ ಉಮಾಕಾಂತ ಭಟ್ಟರಿಗೆ ಕೀರಿಕ್ಕಾಡು ಪ್ರಶಸ್ತಿ | 31 ಆಗಸ್ಟ್

    August 21, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಾಸರಗೋಡು : ಎಂಭತ್ತರ ಸಂಭ್ರಮದಲ್ಲಿರುವ ಬನಾರಿ ಶ್ರೀಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಸಂಸ್ಥಾಪಕಾಧ್ಯಕ್ಷ, ಯಕ್ಷಗಾನ ಗುರುಕುಲದ ರೂವಾರಿ, ಕವಿ, ಅರ್ಥಧಾರಿ, ಕೀರಿಕ್ಕಾಡು ಮಾಸ್ತರ್ ಎಂದೇ ಪ್ರಸಿದ್ಧರಾಗಿದ್ದ ವಿಷ್ಣುಭಟ್ಟರ ಸಂಸ್ಮರಣೆಯೊಂದಿಗೆ ನೀಡಲಾಗುತ್ತಿರುವ 2024ರ ಸಾಲಿನ ಪ್ರತಿಷ್ಠಿತ ಕೀರಿಕ್ಕಾಡು ಪ್ರಶಸ್ತಿಗೆ ವಿದ್ವಾನ್ ಕೆರೆಕೈ ಉಮಾಕಾಂತ ಭಟ್ಟ ಆಯ್ಕೆಯಾಗಿದ್ದಾರೆ.
    ವಿದ್ವಾನ್ ಉಮಾಕಾಂತ ಭಟ್ಟರು ಖ್ಯಾತ ಯಕ್ಷಗಾನ ಅರ್ಥಧಾರಿಯಾಗಿ, ಪ್ರವಚನಕಾರರಾಗಿ, ಉಪನ್ಯಾಸಕರಾಗಿ ಹಾಗೂ ಕವಿಯಾಗಿ ನಾಡಿನ ಉದ್ದಗಲಗಳಲ್ಲೂ ಪ್ರಸಿದ್ಧರಾದವರು‌‌. ನ್ಯಾಯಶಾಸ್ತ್ರ ಪಂಡಿತರಾಗಿ, ಪ್ರಾಚಾರ್ಯರಾಗಿ ಮೇಲುಕೋಟೆಯ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಸುದೀರ್ಘ ಕಾಲ ಸೇವೆಯನ್ನು ಸಲ್ಲಿಸಿದ ಉಮಾಕಾಂತ ಭಟ್ಟರು ಬಹುಮಾನ್ಯರು ಮತ್ತು ಬಹುಶ್ರುತ ವಿದ್ವಾಂಸರು‌.
    31 ಆಗಸ್ಟ್ 2024ರಂದು ದಿನಪೂರ್ತಿ ನಡೆಯಲಿರುವ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಎಂಭತ್ತರ ಸಂಭ್ರಮದ ಕಲೋತ್ಸವದಲ್ಲಿ ಪ್ರೊ‌. ಶ್ರೀಪತಿ ಕಲ್ಲೂರಾಯ ಅವರ ಅಧ್ಯಕ್ಷತೆಯಲ್ಲಿ, ಸನ್ಮಾನ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಗೌರವ ಉಪಸ್ಥಿತಿಯೊಂದಿಗೆ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ನಡುವೆ ಕೀರಿಕ್ಕಾಡು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು.

    Share. Facebook Twitter Pinterest LinkedIn Tumblr WhatsApp Email
    Previous Articleಸುಳ್ಯದಲ್ಲಿ ‘ವಾಹಿನಿ ಸಾಹಿತ್ಯ ಸೌರಭ 2024’ | ಆಗಸ್ಟ್ 25
    Next Article ಅಸ್ಸಾಂನಲ್ಲಿ ವಿದ್ವಾನ್ ಮಂಜುನಾಥ ಎನ್. ಪುತ್ತೂರು ಹಾಗೂ ಎನ್. ದೆಬಾಶಿಷ್ ಇವರಿಂದ ನೃತ್ಯ ಪ್ರದರ್ಶನ ಮತ್ತು ಕಾರ್ಯಾಗಾರ 
    roovari

    Comments are closed.

    Related Posts

    ಬೆಂಗಳೂರು ವಿ.ವಿ.ಯಲ್ಲಿ ‘ಕಾವ್ಯ ಶಿವರಾತ್ರಿ’ ಅಹೋರಾತ್ರಿ ಕಾವ್ಯ ಗಾಯನ | ಫೆಬ್ರವರಿ 15

    February 14, 2026

    ಕಲಾವಿದ ಲಕ್ಷ್ಮಣ ಶೆಟ್ಟಿ ತಾರೆಮಾರ್ ಇವರಿಗೆ ‘ಬೊಂಡಾಲ ಪ್ರಶಸ್ತಿ’ ಪ್ರದಾನ | ಫೆಬ್ರವರಿ 19 ಮತ್ತು 20

    February 13, 2026

    ಸಂಘಟಕ, ಪತ್ರಕರ್ತ, ಸಾಹಿತಿ ಜಯಾನಂದ ಪೆರಾಜೆಗೆ ‘ಕವಿಕಾವ್ಯ ವಿಭೂಷಣ ಪ್ರಶಸ್ತಿ’

    February 13, 2026

    ತೊಕ್ಕೊಟ್ಟು ಒಳಪೇಟೆಯಲ್ಲಿ ‘ವೀರರಾಣಿ ಅಬ್ಬಕ್ಕ ಉತ್ಸವ 2025-2026’ | ಫೆಬ್ರವರಿ 14

    February 12, 2026

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.