ಕಾಸರಗೋಡು : ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ಕನ್ನಡ ಭವನ ಪ್ರಕಾಶನ ಹಾಗೂ ಬಿ. ಶಿವಕುಮಾರ್ ಕೋಲಾರ ಸಾರತ್ಯದ ಸ್ವರ್ಣಭೂಮಿ ಫೌಂಡೇಷನ್ ಕೋಲಾರ ಜಂಟಿಯಾಗಿ ನಡೆಸಲಿರುವ ‘ಕೇರಳ -ಕರ್ನಾಟಕ ಗಡಿನಾಡು ಕನ್ನಡ ಸಾಂಸ್ಕೃತಿಕ ಉತ್ಸವ 2024’ವು ದಿನಾಂಕ 11-04-2024ರ ಗುರುವಾರ ಮಧ್ಯಾಹ್ನ 2 ಗಂಟೆಗೆ ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನ ಬಯಲು ರಂಗ ಮಂಟಪದಲ್ಲಿ ನಡೆಯಲಿದೆ.
ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಶ್ರೀ ರವಿ ನಾಯ್ಕಾಪು ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ. ಡಾ. ಶರಣಪ್ಪ ಗಬ್ಬೂರು ಕೋಲಾರ ಇವರು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈಯುವರು. ಶ್ರೀ ವಿ.ಬಿ. ಕುಳಮರ್ವ, ಶ್ರೀ ಎ.ಆರ್. ಸುಬ್ಬಯ್ಯಕಟ್ಟೆ, ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಶ್ರೀ ರಾಧಾಕೃಷ್ಣ ಕೆ. ಉಳಿಯತಡ್ಕ, ಪ್ರೊ. ಎ. ಶ್ರೀನಾಥ್, ಶ್ರೀ ವಿಶಾಲಾಕ್ಷ ಪುತ್ರಕಳ ಮುಖ್ಯ ಅಥಿತಿಗಳಾಗಿ ಭಾಗವಹಿಸಲಿದ್ದು, ಕನ್ನಡ ಭವನ ಅಧ್ಯಕ್ಷ ಶ್ರೀ ವಾಮನ್ ರಾವ್ ಬೇಕಲ್ ಸ್ವಾಗತಿಸಿ, ಸ್ವರ್ಣಭೂಮಿ ಫೌಂಡೇಶನ್ ಅಧ್ಯಕ್ಷರಾದ ಶ್ರೀ ಬಿ. ಶಿವಕುಮಾರ್ ಪ್ರಸ್ತಾವಿಕ ಭಾಷಣ ಮಾಡಲಿರುವರು.
ಸ್ವರ್ಣಭೂಮಿ ಫೌಂಡೇಷನ್ ಕೋಲಾರದ ಪ್ರತಿಷ್ಠಿತ ಪ್ರಶಸ್ತಿ ‘ಶತಶೃಂಗ ಪ್ರಶಸ್ತಿ’ಯನ್ನು ಶ್ರೀ ವಿ.ಬಿ. ಕುಳಮರ್ವ, ಡಾ. ಕೊಳ್ಚಪ್ಪೆ ಗೋವಿಂದ ಭಟ್, ಡಾ ಅನುರಾಧಾ ಕುರುಂಜಿ, ಶ್ರೀ ವೆಂಕಟ್ ಭಟ್ ಎಡನೀರು, ಪತ್ರಕರ್ತ ಪ್ರದೀಪ್ ಬೇಕಲ್, ಶ್ರೀಮತಿ ಸೀತಾಲಕ್ಷ್ಮೀ ವರ್ಮ ಇವರಿಗೆ ನೀಡಲಿದ್ದಾರೆ. ಕನ್ನಡ ಭವನದ ಗೌರವದ ಪ್ರಶಸ್ತಿಗಳಾದ ‘ರಾಷ್ಟ್ರಕವಿ ಗೋವಿಂದ ಪೈ ರಾಷ್ಟ್ರೀಯ ಪ್ರಶಸ್ತಿ’ಗೆ ಕೋಲಾರದ ಸಾಹಿತಿ ಸಂಘಟಕ ಶ್ರೀ ಬಿ. ಶಿವಕುಮಾರ್, ‘ನಾಡೋಜ ಡಾ. ಕಯ್ಯಾರ ರಾಷ್ಟ್ರೀಯ ಪ್ರಶಸ್ತಿ 2024’ಗೆ ಸರ್ವತೋಮುಖ ಸಾಧಕ ಕಲ್ಕೂರ ಪ್ರತಿಷ್ಠಾನದ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ, “ಶ್ರೀಮಾನ್ ಪಂಜೆ ಮಂಗೇಶರಾಯ ರಾಷ್ಟ್ರೀಯ ಪ್ರಶಸ್ತಿ 2024’ಗೆ ಮೈಸೂರಿನ ಸಾಹಿತಿ ಸಂಘಟಕ ಡಾ. ತ್ಯಾಗರಾಜ್ ಟಿ. ಹಾಗೂ ‘ಸಮಾಜ ಸೇವಾರತ್ನ ಪ್ರಶಸ್ತಿ ಗೆ ಧಾರ್ಮಿಕ, ಸಾಮಾಜಿಕ ಮುಂದಾಳು ಶ್ರೀ ಅರಿಬೈಲ್ ಗೋಪಾಲ್ ಶೆಟ್ಟಿ ಮತ್ತು ಶ್ರೀ ಶ್ರೀಧರ್ ಶೆಟ್ಟಿ ಮುಟ್ಟಮ್ ಮಂಗಲ್ಪಾಡಿ ಇವರುಗಳು ಆಯ್ಕೆಯಾಗಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸ್ವರ್ಣಭೂಮಿ ಫೌಂಡೇಶನ್ ಕೊಡಮಾಡುವ ‘ಸೇವಾ ರತ್ನ ಪ್ರಶಸ್ತಿ’ ಹಾಗೂ ಕನ್ನಡ ಭವನದ ಪ್ರತಿಷ್ಠಿತ ಪ್ರಶಸ್ತಿಯಾದ ‘ಕನ್ನಡ ಪಯಸ್ವಿನಿ ಪ್ರಶಸ್ತಿ 2024’ ಪ್ರದಾನ ನಡೆಯಲಿದೆ. ಸ್ವರ್ಣಭೂಮಿ ಸೇವಾ ರತ್ನ ಪ್ರಶಸ್ತಿಗೆ ಡಾ ರವೀಂದ್ರ ಜೆಪ್ಪು -ಸಮಾಜ ಸೇವೆ, ಶ್ರೀ ಪಿ.ವಿ. ಪ್ರದೀಪ್ ಕುಮಾರ್ – ಲೇಖಕ, ಪ್ರಕಾಶಕ, ಸಂಘಟನೆ, ಶ್ರೀ ವೀಜಿ ಕಾಸರಗೋಡು -ಪತ್ರಿಕೋದ್ಯಮ, ಯಕ್ಷಗಾನ, ಶ್ರೀ ವಸಂತ ಭಾರಡ್ಕ – ಕಲೆ, ಗಾಯಕ, ಸಂಘಟಕ, ಶ್ರೀಮತಿ ರೇಖಾ ರೋಷನ್ – ಕವಯತ್ರಿ ಸಂಘಟನೆ ಹಾಗೂ ಕನ್ನಡ ಭವನದ ಪ್ರತಿಷ್ಠಿತ ಅಂತಾರಾಜ್ಯ ಪ್ರಶಸ್ತಿಯಾದ ‘ಕನ್ನಡ ಪಯಸ್ವಿನಿ ಪ್ರಶಸ್ತಿ 2024’ ಕರ್ನಾಟಕ ರಾಜ್ಯದವರಾದ ಶ್ರೀ ವಿ. ಲಕ್ಷ್ಮಯ್ಯ ಬಂಗಾರಪೇಟೆ, ಶ್ರೀ ಟಿ. ಸುಬ್ಬರಾಮಯ್ಯ ಕೋಲಾರ, ಡಾ. ಶರಣಪ್ಪ ಗಬ್ಬೂರು, ಡಾ. ಬಿ. ಹೇಮಂತ್ ಕುಮಾರ್ ಬೇಲೂರ್, ಶ್ರೀ ಕೆ. ವೇಣುಗೋಪಾಲ್ ಶ್ರೀನಿವಾಸಪುರ, ಶ್ರೀ ವಿ. ರಾಜಕುಮಾರ್ ಮುಳಬಾಗಿಲು, ಶ್ರೀ ಎಂ. ಆನಂದ ರೆಡ್ಡಿ ಕೋಲಾರ ಇವರುಗಳಿಗೆ ನೀಡಲಾಗುವುದು.
ಇದೇ ಸಂದರ್ಭದಲ್ಲಿ ಡಾ. ಇಂಚರ ನಾರಾಯಣ ಸ್ವಾಮಿ ಕೋಲಾರ ಇವರ ‘ಚುಮುಕಿ ಜುಮುಕಿ’ ಶಿಶುಗೀತೆಗಳ ಕೃತಿ ಬಿಡುಗಡೆ, ಶ್ರೀ ವಿರಾಜ್ ಅಡೂರು ಇವರ ಅಧ್ಯಕ್ಷತೆಯಲ್ಲಿ ‘ಅಂತಾರಾಜ್ಯ ಕವಿಗೋಷ್ಠಿ’, ಕೃಷ್ಣಿಮಾ ಭುವನೇಶ್ ಇವರಿಂದ ಭರತನಾಟ್ಯ, ಅಭಿ. . . ಕರಂದಕ್ಕಾಡ್ – ಯೋಗ ನೃತ್ಯ, ಸೋನುಶ್ರೀಯವರಿಂದ ಯೋಗ ಪ್ರದರ್ಶನ ಹಾಗೂ ವಸಂತ ಬಾರಡ್ಕ ಸಾರತ್ಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.