ಮೈಸೂರು : ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಅಂಗವಾಗಿ ಮೈಸೂರಿನ ಅರಮನೆ ಆವರಣದಲ್ಲಿ ದಿನಾಂಕ 02 ಅಕ್ಟೋಬರ್ 2025ರಂದು ನಡೆದ ಜಾಥಾ ಕಾರ್ಯಕ್ರಮದಲ್ಲಿ ಒತ್ತೋರ್ಮೇರ ಕೊಡವ ಕೂಟದ ಸದಸ್ಯರು ಕೊಡಗಿನ ಸಾಂಪ್ರದಾಯವನ್ನು ಪ್ರದರ್ಶಿಸುವ ಮೂಲಕ ಜನ ಮೆಚ್ಚುಗೆಗೆ ಪಾತ್ರರಾದರು.
ಅರಮನೆ ಮೈದಾನದಿಂದ ಬನ್ನಿ ಮಂಟಪದವರೆಗೆ ನಡೆದ ಮೆರವಣಿಗೆಯಲ್ಲಿ ಕೊಡವರ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ತಳಿಯತಕ್ಕಿ ದೀಪ ಹಿಡಿದು, ದುಡಿ ಕೊಟ್ಸ್ ದಾಟ್ ಜೊತೆಗೆ ಕೊಡವ ಸಂಸ್ಕೃತಿಯ ಅಂಗವಾದ ಒಡಿಕತ್ತಿ, ಬಿಲ್ಲು ಬಾಣ, ಬರ್ಜಿ ಹಿಡಿದು ವಾಟಕಪಾಟ್ ನೃತ್ಯ ಮಾಡುವ ಮೂಲಕ ಜಾಥಾ ನಡೆಸಲಾಯಿತು. ಕೊಡಗಿನ ವಾಲಗ ತಂಡದ ಪ್ರಾಯೋಜಕತ್ವವನ್ನು ಮುಖ್ಯಮಂತ್ರಿಗಳ ಕಾನೂರು ಸಲಹೆಗಾರರು ಹಾಗು ವಿರಾಜಬೇಟೆ ಕ್ಷೇತ್ರದ ಶಾಸಕ ಅಜ್ಜಿಕುಟೀರ ಪೊನ್ನಣ್ಣ ಅವರು ನೀಡಿದರು. ಕಾರ್ಯಕ್ರಮದಲ್ಲಿ ಒತ್ತೋರ್ಮೆರ ಕೊಡವ ಕೂಟದ ಸ್ಥಾಪಕ ಚೆಟ್ಟೋಳಿರ ಶರತ್ ಸೋಮಣ್ಣ, ಕಾರ್ಯಕ್ರಮ ಸಂಚಾಲಕ ಕಾಳಮಂಡ ಬಾಬಿನ್ ಅಚ್ಚಮ್ಮ,ಕಾರ್ಯಕ್ರಮ ಸಂಚಾಲಕ ಮಾಚಿಂಗ ಸಚಿನ್ ತಿಮ್ಮಯ್ಯ ಹಾಗೂ ಕಾಯಪಂಡ ಇಶಾನ್ ಪೂಣಚ್ಚ, ಪೊನ್ನೋಲತಂಡ ಶರಣು ತಮ್ಮಯ್ಯ, ಕೇಳಪ್ಪಂಡ ಲಿಂಕಿತ್ ತಿಮ್ಮಯ್ಯ, ಕಾಯಪಂದ ತ್ರಿಷ ಮುತ್ತಮ್ಮ, ಮಾತಂದ ಕುಶಿ ಉನ್ನತಿ, ಮಾಳೇಟಿರ ಯಶ್ಮ ಭೋಜಮ್ಮ, ಜೋಡುಮಾಡ ಪೂಜಾ ಪೊನ್ನಮ್ಮ, ಬಾರಮಾಡ ದೇಚಮ್ಮ, ಕರ್ನಂಡ ಧನುಶ್ರೀ, ಮಲ್ಲಮಾಡ ಸೋಮಣ್ಣ, ಪೊಕೋಂಡ ಶಾನ್ ನಾಣಯ್ಯ, ಮಾಚ೦ಗದ ಭೂಮಿಕಾ, ಚಪ್ಪಂಡ ಪೂರ್ವಿಕ್ ಬೆನ್ನಣ್ಣ, ಮುಕ್ಕಾಟರ ಧ್ಯಾನಿಕ ದೇಚಮ್ಮ, ನಡಿಕೇರಿಯಂಡ ದಿಯ ದೇಶಮ್ಮ, ನಡಿಕೇರಿಯಂಡ ಜೀಯಾ ಬೋಜಮ್ಮ, ಮಂಡೇಪಂಡ ಡೆನ್ ಕಾರ್ಯಪ್ಪ, ಕೊಟ್ಟಂಗಡ ಬಿಪಿನ್ ಬಿದ್ದಪ್ಪ, ಬಲ್ಯಾಂಡಮಾದ ನಿತಿಹ ನೀಲಮ್ಮ, ಕಾಯಪಂಡ ಸೋನಿಕ ದೇಶಮ್ಮ, ಮಾಚಂಗದ ಮಿಧುನ್ ಮುತ್ತಣ್ಣ ಮತ್ತು ತುಚಿಮಕೇರಿ ವಾಲಗೆ ತಂಡದ ಉದಯ, ಶ್ರೀಕಾಂತ್, ಮಂಜುನಾಥ, ವಿನೋಲ್, ಮೇಗನ್ ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Previous ArticleBook release program by Upasana at Bangalore