Subscribe to Updates

    Get the latest creative news from FooBar about art, design and business.

    What's Hot

    ಶ್ರೀ ಕ್ಷೇತ್ರ ಬಾರ್ಯದಲ್ಲಿ ‘ಜಾಂಬವತಿ ಕಲ್ಯಾಣ’ ತಾಳಮದ್ದಳೆ

    February 7, 2026

    ಕಾಂಚನದಲ್ಲಿ ಸಂಗೀತ ಸೇವೆಯೊಂದಿಗೆ ‘ಕಾಂಚನೋತ್ಸವ’ಕ್ಕೆ ಚಾಲನೆ

    February 7, 2026

    ಕುಂದಾಪುರ ಸರಕಾರಿ ಕಾಲೇಜಿನಲ್ಲಿ ‘ಪುಂಡಲೀಕ ಹಾಲಂಬಿ ದತ್ತಿ ಪ್ರಶಸ್ತಿ ಪ್ರದಾನ | ಫೆಬ್ರವರಿ 14

    February 7, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕೊಂಡೆವೂರಿನಲ್ಲಿ ರಂಗ ಚಿನ್ನಾರಿಯ ‘ಕನ್ನಡ ಹಬ್ಬ’
    Dance

    ಕೊಂಡೆವೂರಿನಲ್ಲಿ ರಂಗ ಚಿನ್ನಾರಿಯ ‘ಕನ್ನಡ ಹಬ್ಬ’

    July 3, 2023Updated:August 19, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಾಸರಗೋಡು: ರಂಗ ಚಿನ್ನಾರಿ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆ (ರಿ) ಕಾಸರಗೋಡು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ನಡೆಸುವ ಕನ್ನಡ ಹಬ್ಬವು ದಿನಾಂಕ 29-06-2023 ರಂದು ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿತು.
    ರಂಗ ಚಿನ್ನಾರಿ ನಿರ್ದೇಶಕರಲ್ಲಿ ಓರ್ವರಾದ ಸತೀಶ್ಚಂದ್ರ ಭಂಡಾರಿ ಕೋಳಾರಿ ಉಪಸ್ಥಿತರಿದ್ದು ಸಂಸ್ಥೆಯ ಆರಂಭ ಮತ್ತು ಮುಂದೆ ನಡೆಸುವ ಅನೇಕ ಕನ್ನಡಪರ ಕಾರ್ಯಕ್ರಮಗಳ ಬೆಳಕು ಚೆಲ್ಲಿ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಸವಿವರವಾಗಿ ಮಾಹಿತಿಯನ್ನು ನೀಡಿದರು.
    ಕೊಂಡೆಯೂರು ಮಠದ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮಿಗಳು ಆಶೀರ್ವಚನ ನೀಡುತ್ತಾ ಕಾಸರಗೋಡಿನಲ್ಲಿ ಅವನತಿಯ ಅಂಚಿಗೆ ತಲುಪುವಂತಾದ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡುವ ರಂಗ ಚಿನ್ನಾರಿ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು. ಸಂಸ್ಥೆಯ ಹತ್ತು ಹಲವು ಕಾರ್ಯಗಳಲ್ಲಿ ನಾವು ಕೈ ಜೋಡಿಸಿ ಮುಂದಿನ ಪೀಳಿಗೆಗೆ ಕನ್ನಡದ ಕಂಪನ್ನು ಪಸರಿಸುವ ಕಾಯಕದಲ್ಲಿ ಜೊತೆಯಾಗೋಣ ಎಂದು ನುಡಿದರು.
    ಮಠದ ಭಕ್ತರಾಗಿರುವ ಮೋಹನ್ ದಾಸರು ಅತಿಥಿಯಾಗಿ ಭಾಗವಹಿಸಿದ್ದು ಗಾಯತ್ರಿ ಮತ್ತು ಶ್ರಾವಣ್ಯ ಪ್ರಾರ್ಥನೆ ಹಾಡಿದರು.
    ಕಾರ್ಯಕ್ರಮದ ನಿರೂಪಣೆ ಮತ್ತು ಧನ್ಯವಾದವನ್ನು ಮಠದ ವ್ಯವಸ್ಥಾಪಕರಲ್ಲಿ ಒಬ್ಬರಾದ ಸದಾಶಿವ ಭಟ್ ನೆರವೇರಿಸಿದರು. ಬಳಿಕ ವಿದುಷಿ ಶ್ರೀಮತಿ ಉಷಾ ಈಶ್ವರ್ ಭಟ್ ಅವರಿಂದ ಶಾಸ್ತ್ರೀಯ ಸಂಗೀತ ಹಾಗೂ ಶ್ರೀ ದುರ್ಗಾಪರಮೇಶ್ವರಿ ಭಜನಾ ಸಂಘ ಕಂಬಾರು ಇವರಿಂದ ಭಜನೆ, ಕುಣಿತ ಭಜನೆಯು ಅತ್ಯಂತ ಯಶಸ್ವಿಯಾಗಿ ನೆರವೇರಿತು.. ಕಾರ್ಯಕ್ರಮದ ಕೊನೆಯಲ್ಲಿ ಜಯಪ್ರಕಾಶ್ ತೊಟ್ಟೆತ್ತೋಡಿ ಮತ್ತು ರಂಗ ಚಿನ್ನಾರಿ ಸಂಸ್ಥೆಯ ನಿರ್ದೇಶಕರೂ, ಸಂಯೋಜಕರೂ ಆಗಿರುವ ನಟ ನಿರ್ದೇಶಕರಾದ ಕಾಸರಗೋಡು ಚಿನ್ನಾ ಅವರು ಸ್ಮರಣಿಕೆ ನೀಡಿದರು.ಮತ್ತು ಕುಣಿತ ಭಜನೆಯ ಎಲ್ಲಾ ಭಜಕರಿಗೆ ಪೂಜ್ಯ ಶ್ರೀಗಳು ಶಾಲು ನೀಡಿ ಗೌರವಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಪರಿಚಯ ಲೇಖನ | ವಿಶ್ವ ಕನ್ನಡ ಕಣ್ಮಣಿ ಪ್ರಶಸ್ತಿ ಪುರಸ್ಕೃತ ಕಲಾವಿದ ನವೀನ ಎನ್. ಜೆ.
    Next Article ಬೈಂದೂರಿನಲ್ಲಿ ‘ವಾಚಕ್ನವೀ’ ಮತ್ತು ‘ಜಿತ್ವರೀ – ಇದು ಕಾಶಿ’ ಕೃತಿಗಳ ಲೋಕಾರ್ಪಣೆ | ಜುಲೈ 9ರಂದು
    roovari

    Add Comment Cancel Reply


    Related Posts

    ಕಾಂಚನದಲ್ಲಿ ಸಂಗೀತ ಸೇವೆಯೊಂದಿಗೆ ‘ಕಾಂಚನೋತ್ಸವ’ಕ್ಕೆ ಚಾಲನೆ

    February 7, 2026

    ಐಗೂರಿನಲ್ಲಿ ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ | ಫೆಬ್ರವರಿ 09

    February 7, 2026

    ‘ಜಾನಪದ ಲೋಕ ಪ್ರಶಸ್ತಿ’ ಪುರಸ್ಕೃತರ ಪಟ್ಟಿ ಪ್ರಕಟ

    February 6, 2026

    ನೃತ್ಯ ವಿಮರ್ಶೆ | ಬಾಲ ಗಂಧರ್ವೆಯ ಮನಮೋಹಕ ನಾಟ್ಯ ಸೊಬಗು- ‘ಆದ್ಯ’ ವೈಶಿಷ್ಟ್ಯ

    February 6, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.