ಮಂಗಳೂರು : ಕೊಂಕಣಿ ಸಾಂಸ್ಕೃತಿಕ ಸಂಘ (ರಿ.) ಮಂಗಳೂರು ಇವರ ವತಿಯಿಂದ ‘ಕೊಂಕಣಿ ರಂಗಾಂತರಂಗ’ ರಂಗ ಕಾರ್ಯಾಗಾರವು ದಿನಾಂಕ 28 ಮತ್ತು 29 ಮಾರ್ಚ್ 2026ರಂದು ಮಂಗಳೂರು ವಿಠೋಭ ದೇವಸ್ಥಾನ ರಸ್ತೆಯಲ್ಲಿರುವ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ರಾಜ್ಯ ಪ್ರಶಸ್ತಿ ವಿಜೇತ ನಿರ್ದೇಶಕರಾದ ಕಾಸರಗೋಡು ಚಿನ್ನಾ ಇವರು ಈ ಕಾರ್ಯಾಗಾರವನ್ನು ನಡೆಸಿಕೊಡಲಿದ್ದಾರೆ.

