ಮಂಗಳೂರು : 17-4-2023ರಂದು ಸೋಮವಾರ ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಕೇಂದ್ರದಲ್ಲಿ ಕೇಂದ್ರ ಸರ್ಕಾರದ ‘ಆಜಾದಿ ಕಾ ಅಮೃತ್ ಮಹೋತ್ಸವ್’ದ ಅಂಗವಾಗಿ ಒಂದು ದಿನದ ಕಾರ್ಯಾಗಾರದಲ್ಲಿ ಉತ್ತರ ವಲಯದ ಶಿಕ್ಷಕರಿಂದ ರಾಷ್ಟ್ರ ಜಾಗೃತಿಯ ಯಕ್ಷಗಾನ ತಾಳಮದ್ದಳೆ ‘ಕ್ರಾಂತಿ ಕಹಳೆ’ ನಡೆಯಿತು. ಈ ಪ್ರಸಂಗದ ಪರಿಕಲ್ಪನೆ ಮತ್ತು ಕಥಾ ಸಂಯೋಜನೆ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ. ಭಾರತ ಸ್ವಾತಂತ್ರ್ಯ ಸಂಗ್ರಾಮ ಹೋರಾಟದ ಚಿತ್ರಗಳನ್ನು ಈ ಯಕ್ಷಗಾನಕ್ಕೆ ಅಳವಡಿಸಲಾಗಿದೆ. ಇದರ ನಿರ್ದೇಶನ ಮಾಡಿದವರು ಮಂಜುಳಾ ಶೆಟ್ಟಿ. ಕಥಾ ಸಂಯೋಜನೆಗೆ ಪೂರಕವಾಗಿ ಪ್ರಸಂಗದ ಪದ್ಯ ರಚನೆಯನ್ನು ಮಾಡಿದವರು ಡಾ. ದಿನಕರ ಎಸ್. ಪಚ್ಚನಾಡಿ. ಸುಮಾರು 1 ಗಂಟೆ 10 ನಿಮಿಷದ ಅವಧಿಯ ತಾಳಮದ್ದಳೆಯ ಈ ಕಾರ್ಯಕ್ರಮ ‘ಕ್ರಾಂತಿ ಕಹಳೆ’ ಚೆನ್ನಾಗಿ ಪ್ರಸ್ತುತಿಗೊಂಡಿತು. ಹಿಮ್ಮೇಳದಲ್ಲಿ – ಭಾಗವತಿಕೆ ಸೂಡ ಶ್ರೀ ಹರೀಶ್ ಶೆಟ್ಟಿ, ಮದ್ದಳೆಯಲ್ಲಿ – ಶ್ರೀ ಸ್ಕಂದ ಕೊನ್ನಾರ್, ಚೆಂಡೆಯಲ್ಲಿ – ಶ್ರೀ ಲಕ್ಷ್ಮೀನಾರಾಯಣ ಹೊಳ್ಳ.
ಮುಮ್ಮೇಳದಲ್ಲಿ ಭಾಗವಹಿಸಿದ ಉತ್ತರ ವಲಯದ ಶಿಕ್ಷಕರು – ಉಳ್ಳಾಲ ಅಬ್ಬಕ್ಕ – ನಾಗರಾಜ ಖಾರ್ವಿ, ತಿಮ್ಮಪ್ಪನಾಯಕ ಮತ್ತು ದಿವಾನ್ ಪೂರ್ಣಯ್ಯ – ಕೃಪಾ, ಪೊರ್ಚುಗೀಸ್ ಕುಟಿನ್ನೊ – ಪ್ರಮೀಳಾ, ಝಾನ್ಸಿರಾಣಿ – ಚಿತ್ರಾಶ್ರೀ ಕೆ.ಎಸ್., ನಾನಾಸಾಹೆಬ್ – ವಿನೋದಾ ಅಮೀನ್, ಲಾರ್ಡ್ ಕಾರ್ನವಾಲಿಸ್, ಹ್ಯೂರೋಜ ಮತ್ತು ಆಂಗ್ಲಾಧಿಕಾರಿ – ಹರಿಪ್ರಸಾದ್ ಶೆಟ್ಟಿ, ಟಿಪ್ಪು ಮತ್ತು ಲಾಲಾ ಲಜಪತರಾಯ್ – ವಸಂತ ಪಾಲನ್, ಬಾಲ ಗಂಗಾಧರ ತಿಲಕ್ – ಗೀತಾ ಎಸ್, ಭಗತ್ ಸಿಂಗ್ – ಪ್ರೇಮನಾಥ್ ಮರ್ಣೆ, ಚಂದ್ರಶೇಖರ ಆಜಾದ್ – ವೀಣಾ, ವಿದ್ಯಾವತಿ – ಡಾ. ಮಂಜುಳಾ ಶೆಟ್ಟಿ.
ಸಿ.ಸಿ.ಆರ್.ಟಿ.ಯವರ ವತಿಯಿಂದ ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾಗಿರುವ ವಿಲ್ಮಾ ಕ್ರಾಸ್ತರವರ ನೇತೃತ್ವದಲ್ಲಿ ಈ ಕಾರ್ಯಗಾರವು ನಡೆಯಿತು. ನಮ್ಮ ದೇಶದ ಸ್ವಾತಂತ್ರ್ಯಕ್ಕೋಸ್ಕರ ಹೋರಾಡಿದ ವೀರರ ಬಗ್ಗೆ ಅಧ್ಯಯನ ಮಾಡಿ ಅವರ ಹೋರಾಟದ ಕಥೆಯನ್ನು ಹೊರತರುವುದೇ ಈ ಕಾರ್ಯಾಗಾರದ ಮುಖ್ಯ ಉದ್ದೇಶ.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಡಿಡಿಪಿಐ ಶ್ರೀ ದಯಾನಂದ ನಾಯಕ್ ಮತ್ತು ಯುವ ಲೇಖಕರಾದ ಶ್ರೀ ಅನಿಂದಿದ್ ಗೌಡ ಉಪಸ್ಥಿತರಿದ್ಡರು. ದೆಹಲಿಯಿಂದ ಆಗಮಿಸಿರುವ ಸಿ.ಸಿ.ಆರ್.ಟಿ.ಯ ಉಪ ನಿರ್ದೇಶಕರಾದ ಶ್ರೀ ರಾಹುಲ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಕಾರ್ಯಾಗಾರದಲ್ಲಿ 98 ಮಂದಿ ಮಂದಿ ಪಾಲ್ಗೊಂಡಿದ್ದರು. ಅವರಲ್ಲಿ ಕೆಲವು ಶಿಕ್ಷಕರೂ, ಕೆಲವು ಕವಿ ಹಾಗೂ ಲೇಖಕರು, ಕಲಾವಿದರು, ವಿದ್ವಾಂಸರು, ಎನ್.ಜಿ.ಒ. ಅವರೂ ಪಾಲ್ಗೊಂಡಿದ್ದರು. ಶ್ರೀಮತಿ ವಿಲ್ಮಾ ಕ್ರಾಸ್ತಾರವರು ಕಾರ್ಯಕ್ರಮವನ್ನು ನಿರೂಪಿಸಿದರು. ಡಯಟ್ ನ ಪ್ರಿನ್ಸಿಪಲ್ ಶ್ರೀಮತಿ ರಾಜಲಕ್ಷ್ಮಿ ಸ್ವಾಗತಿಸಿ, ದೆಹಲಿಯ ಶ್ರೀ ವಿಮಲ್ ಧನ್ಯವಾದ ಸಮರ್ಪಿಸಿದರು. ಸಿ.ಸಿ.ಆರ್.ಟಿ.ಯ ಈ ಡಿ.ಡಿ.ಆರ್. ಕಾರ್ಯಾಗಾರವು ತುಂಬಾ ಯಶಸ್ವಿಯಾಗಿ ಮುಕ್ತಾಯಗೊಂಡಿತು.