ಉಡುಪಿ : ಇತ್ತೀಚೆಗೆ ನಿಧನರಾದ ಜಾನಪದ, ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದ ಸಾಧಕರಾದ ಕುದಿ ವಸಂತ ಶೆಟ್ಟಿ ಇವರಿಗೆ ನುಡಿನಮನ ಕಾರ್ಯಕ್ರಮವು ದಿನಾಂಕ 24 ನವೆಂಬರ್ 2024ರ ರವಿವಾರದಂದು ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಆಡಿಟೋರಿಯಂನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಧಾರ್ಮಿಕ ಮುಖಂಡ ನಟರಾಜ್ ಹೆಗ್ಡೆ ಮಾತನಾಡಿ “ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡುವ ಮೂಲಕ ಸಾವಿರಾರು ಸಂಸ್ಕಾರವಂತ ವಿದ್ಯಾರ್ಥಿಗಳನ್ನು ರೂಪಿಸುವಲ್ಲಿ ಕಾರಣೀಭೂತರಾಗಿದ್ದ ಕುದಿ ವಸಂತ ಶೆಟ್ಟಿಯವರು ಜಾನಪದ, ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಹೆಚ್ಚಿನ ಪರಿಣತಿ ಹೊಂದಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಅವರು ಎಲ್ಲರಿಗೂ ಬೇಕಾದವರಾಗಿದ್ದರು. ಹಾಗಾಗಿ ಅವರು ಒಬ್ಬ ವ್ಯಕ್ತಿಯಾಗಿರದೆ ಸಮಾಜದ ಶಕ್ತಿಯಾಗಿದ್ದರು.” ಎಂದು ಹೇಳಿದರು.
ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಹರಿಪ್ರಸನ್ನ ಶೆಟ್ಟಿ, ಶಾಲಾಡಳಿತ ಮಂಡಳಿ ಅಧ್ಯಕ್ಷರಾದ ನ್ಯಾಯವಾದಿ ಸತೀಶ್ ಪೂಜಾರಿ, ನಿವೃತ್ತ ಮುಖ್ಯ ಶಿಕ್ಷಕ ರಾಮಕೃಷ್ಣ ನಾಯಕ್, ಡಯಟ್ ಇದರ ಪ್ರಾಂಶುಪಾಲ ಅಶೋಕ್ ಕಾಮತ್ ಮೊದಲಾದವರು ನುಡಿನಮನ ಸಲ್ಲಿಸಿದರು. ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಮಾಜಿ ಶಾಸಕರಾದ ಲಾಲಾಜಿ ಮೆಂಡನ್, ಕೆ. ರಘುಪತಿ ಭಟ್, ಕುಟುಂಬದ ಹಿರಿಯರಾದ ಸತೀಶ್ ಶೋಭಾ ಶೆಟ್ಟಿ, ಸವಿತಾ ಎಲ್. ಡಿ. ಶೆಟ್ಟಿ, ಉಮಾ ಸದಾಶಿವ ಶೆಟ್ಟಿ, ಗೀತಾ ಅಶೋಕ್ ಶೆಟ್ಟಿ, ಹೇಮಾ ಸುಧಾಕರ ಶೆಟ್ಟಿ, ಡಾ. ಆಶಾ ಸುಧಾಕರ ಶೆಟ್ಟಿ, ರೇಷ್ಮಾ ಸಂತೋಷ್ ಶೆಟ್ಟಿ, ಡಾ. ಮಹಿಮಾ ಶೆಟ್ಟಿ, ಡಾ. ತ್ರಿಶಾ ಎಸ್. ಎಸ್. ಶೆಟ್ಟಿ, ಕುದಿ ಚೈತ್ರಾ ಮುಟ್ಟಿಕಲ್ಲು ಮತ್ತು ನಿಂಜೂರು ಚೈತ್ರಬೈಲು ನಡಿಮನೆ ಕುಟುಂಬಿಕರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಸಂತೋಷ್ ಶೆಟ್ಟಿ ಹಿರಿಯಡಕ ನಿರೂಪಿಸಿ, ಸುಧಾಕರ ಶೆಟ್ಟಿ ವಂದಿಸಿದರು. ಸಮಾರಂಭದಲ್ಲಿ ಕುದಿ ವಸಂತ ಶೆಟ್ಟಿ ಬದುಕಿನ ಕುರಿತು – ಸಾಕ್ಷ್ಯಚಿತ್ರ ಪ್ರದರ್ಶನ ಮತ್ತು ರಾಗಗಾನ ನಡೆಯಿತು.