ಮಂಗಳೂರು : ನಂತೂರು ಶ್ರೀ ಭಾರತಿ ಕಾಲೇಜಿನ ಶಂಕರ ಶ್ರೀ ಸದನದಲ್ಲಿ ತುಳು ಕೂಟದ ವತಿಯಿಂದ ದಿನಾಂಕ : 18-06-2023ರಂದು ಆಯೋಜಿಸಲಾದ ‘ಕುಡ್ಲದ ಬಂಗಾರ್ ಪರ್ಬ’ದ, ಸರಣಿ ಕಾರ್ಯಕ್ರಮ ನಾಲ್ಕರಲ್ಲಿ ಪಾಲ್ಗೊಂಡ ತುಳು ವಿದ್ವಾಂಸ, ಕ.ತು. ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ದಯಾನಂದ ಜಿ. ಕತ್ತಲ್ಸಾರ್ ಅವರು ಮಾತನಾಡುತ್ತಾ “ತುಳು ಯಕ್ಷಗಾನದ ಪ್ರಸಂಗ ರಚನೆ ಬಹಳ ಸಾಹಿತ್ಯ ಪೂರ್ಣವಾದುದು. ತುಳು ಯಕ್ಷ ರಂಗಭೂಮಿ ಸಮೃದ್ಧವಾಗಲು ಇದು ಸಹಕಾರಿಯಾಗಿವೆ. ಅದೇ ನಿಟ್ಟಿನಲ್ಲಿ ಕಲಾವಿದರೂ ಕೂಡಾ ಉತ್ತಮ ಸಾಹಿತ್ಯಕ ಭಾಷಾ ಪದಗಳನ್ನೇ ಬಳಸಿ ಕಲೆಯನ್ನು ಶ್ರೀಮಂತಗೊಳಿಸಿದ್ದಾರೆ. ಇದರಲ್ಲಿ ಆಗಿ ಹೋದ ಪ್ರಸಂಗಕರ್ತರು ಮತ್ತು ಈಗಿರುವ ಪಸಂಗಕರ್ತರು ತುಳು ಭಾಷೆಯ ಪ್ರೌಢಿಮೆಯನ್ನು ಮೆರೆದಿದ್ದಾರೆ ಎಂಬುದೇ ನಮಗೆ ಹೆಮ್ಮೆ. ಇಂದಿನ ಯುವ ಪೀಳಿಗೆ ತಮ್ಮ ಶಿಕ್ಷಣದ ಜತೆ ಇದನ್ನೂ ಕಲಿತಾಗ ಅದು ಜೀವನಕ್ಕೆ ನೀಡುವಂತಾಗುತ್ತದೆ. ನಾವು ತುಳು ಭಾಷಿಕರೇ ಈ ಕಾರ್ಯವನ್ನು ಮಾಡಬೇಕು, ಅನ್ಯಭಾಷಾ ಹೊಡೆತಗಳ ಮಧ್ಯೆ ನಮ್ಮ ತೌಳವ ಬದುಕು ಸಾಹಿತ್ಯ, ಆಡುಭಾಷೆ ಸೊರಗಲು ನಾವು ಬಿಡಬಾರದು” ಎಂದು ಹೇಳಿದರು.
ತುಳು ಕೂಟದ ಅಧ್ಯಕ್ಷ ಮರೋಳಿ ದಾಮೋದರ ನಿಸರ್ಗ ಬಿ. ಮಾತನಾಡಿ, ನಮ್ಮ ಶ್ರೀಮಂತ ತುಳು ಭಾಷೆಯ ಏಳ್ಗೆಗಾಗಿ ನಾವೆಲ್ಲಾ ಒಂದಾಗಿ ದುಡಿಯೋಣ, ಮನೆ ಮನೆಯಲ್ಲಿ ‘ತುಳು ಉಚ್ಚಯ’ ನಡೆಯಲಿ ಎಂದರು. ಭಾರತೀ ಪ.ಪೂ. ಕಾಲೇಜಿನ ಪ್ರಾಂಶುಪಾಲೆ ಗಂಗಾರತ್ನ ಶುಭಕೋರಿ ತುಳುಕೂಟಕ್ಕೆ ಸದಾಶಯ ಬಯಸಿದರು.
ಕದ್ರಿ ನಗರದ ಗೋಸೇವಾ ಸಂಯೋಜಕ ಸರವು ರಮೇಶ್ ಭಟ್ ಮುಖ್ಯ ಅತಿಥಿಯಾಗಿದ್ದರು. ಪ್ರಧಾನ ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ ಸ್ವಾಗತಿಸಿ ತುಳುಕೂಟದ ಉಪಾಧ್ಯಕ್ಷ ಜೆ.ವಿ. ಶೆಟ್ಟಿ ಹಾಗೂ ಹೇಮಾ ನಿಸರ್ಗ ನಿರೂಪಿಸಿ, ಕಾಮಾಕ್ಷಿ ವಂದಿಸಿದರು.
ಚಂದ್ರಶೇಖರ ಸುವರ್ಣ, ಗೋಪಾಲ ಕೃಷ್ಣ ಪಿ., ದಿನೇಶ್ ಕುಂಪಲ, ವಸಂತಿ ಪೂಜಾರಿ, ಮಮತಾ ಪ್ರವೀಣ, ರಮೇಶ್ ಕುಲಾಲ್, ಬಾಯಾರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಲಕ್ಷ್ಮೀನಾರಾಯಣ ಹೊಳ್ಳ, ಸ್ಕಂದ ಕೊನ್ನಾರ್, ಮಧುಸೂದನ ಅಲೆವೂರಾಯ ವರ್ಕಾಡಿ, ಮಾಧವ ನಾವಡ ವರ್ಕಾಡಿ ಇವರ ಮುಮ್ಮೇಳ ಮತ್ತು ಹಿಮ್ಮೇಳದಲ್ಲಿ ‘ರವಿ ರತ್ನೊ’ ಎಂಬ ತುಳು ಯಕ್ಷಗಾನ ನಡೆಯಿತು.