ಮೈಸೂರು : ರಾಷ್ಟ್ರಕವಿ ಕುವೆಂಪುರವರ ಜನ್ಮ ದಿನದ ಪ್ರಯುಕ್ತ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಶ್ರೀ ಕೊಟ್ಟೂರು ಬಸವೇಶ್ವರ ಸೇವಾ ಟ್ರಸ್ಟ್ ಇವುಗಳ ಸಂಯುಕ್ತಾಶ್ರಯದಲ್ಲಿ ಮತ್ತು ಸ್ವರ್ಣಭೂಮಿ ಫೌಂಡೇಷನ್ ಕರ್ನಾಟಕ ಇದರ ಸಹಕಾರದಲ್ಲಿ ‘ವಿಶ್ವಮಾನವ ಕುವೆಂಪು ಜನ್ಮದಿನಾಚರಣೆ’ಯನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಕಾರ್ಯಕ್ರಮವು ಮೈಸೂರಿನ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ದಿನಾಂಕ 29-12-2023ರಂದು ನಡೆಯಿತು.
ಇದೇ ಸಂದರ್ಭದಲ್ಲಿ ಕಾಸರಗೋಡು ನುಳ್ಳಿಪ್ಪಾಡಿ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಗ್ರಂಥಾಲಯದ ರೂವಾರಿಗಳಾದ ವಾಮನ್ ರಾವ್ ಬೇಕಲ್ ಮತ್ತು ಸಂಧ್ಯಾರಾಣಿ ಟೀಚರ್ ದಂಪತಿಗಳಿಗೆ ‘ಕುವೆಂಪು ವಿಶ್ವಮಾನವ ಕನ್ನಡರತ್ನ ಪ್ರಶಸ್ತಿ’ಯನ್ನು ಆದರ್ಶ ಕನ್ನಡ ದಂಪತಿಗಳು ಶೀರ್ಷಿಕೆಯಲ್ಲಿ ನೀಡಿ ಗೌರವಿಸಲಾಯಿತು.
ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಕೆ. ಚಿದಾನಂದ ಗೌಡ, ಮೈಸೂರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಡ್ಡೀಕೆರೆ ಗೋಪಾಲ್, ಪಂಪ ಪ್ರಶಸ್ತಿ ಪುರಸೃತ ವಿದ್ವಾಂಸ ಡಾ. ಸಿ.ಪಿ.ಕೃಷ್ಣ ಕುಮಾರ್ (ಸಿ.ಪಿ.ಕೆ), ಕಾರ್ಯಕ್ರಮದ ರೂವಾರಿಯಾದ ಟಿ. ಶಿವಕುಮಾರ್ ಕೋಲಾರ, ಟಿ. ಸತೀಶ್ ಜವರೇ ಗೌಡ, ಶ್ರೀಮತಿ ಎನ್. ಶಾರದಮ್ಮ, ಡಾ. ಟಿ. ತ್ಯಾಗರಾಜ್, ರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿ ಸುರೇಂದ್ರ ಸಮಗಾರ್, ಕೃಷ್ಣೇ ಗೌಡ, ಅಜಿತ್ ಹೊನ್ನಾಪುರ, ಮೈಸೂರು ವಿಜಯವಾಣಿ ಮುಖ್ಯವರದಿಗಾರರಾದ ಆರ್. ಕೃಷ್ಣ ಮುಂತಾದವರು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿದರು.