ಬೆಂಗಳೂರು : ಕನ್ನಡ ಗೆಳೆಯರ ಬಳಗ ಮತ್ತು ಕರ್ಣಾಟಕ ವಿಕಾಸ ರಂಗ ಇವುಗಳ ವತಿಯಿಂದ ಕನ್ನಡ ಬಾವುಟ ಹರಿಸಿದವರು ನೆನಪಿನ ಮಾಲೆ 26 ಉಪನ್ಯಾಸ ಕಾರ್ಯಕ್ರಮವನ್ನು ದಿನಾಂಕ 29 ಜುಲೈ 2025ರಂದು ಬೆಳಗ್ಗೆ 11-00 ಗಂಟೆಗೆ ಬೆಂಗಳೂರು ಬಸವನಗುಡಿ ಬಿ.ಎಂ.ಶ್ರೀ ಪ್ರತಿಮೆ ಎದುರು ಆಯೋಜಿಸಲಾಗಿದೆ.
ಖ್ಯಾತ ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಇವರು ಡಾ. ಎಸ್.ಕೆ. ಕರೀಂಖಾನ್ ಇವರ ಬಗ್ಗೆ ಉಪನ್ಯಾಸ ನೀಡಲಿದ್ದು, ರಾ.ನಂ. ಚಂದ್ರಶೇಖರ ಇವರು ಆಶಯ ನುಡಿಗಳನ್ನಾಡಲಿದ್ದಾರೆ. ವ.ಚ. ಚೆನ್ನೇಗೌಡ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರತಿ ತಿಂಗಳೂ ಬಿ.ಎಂ.ಶ್ರೀ ಪ್ರತಿಮೆ ಮುಂಭಾಗ ನಾಡು-ನುಡಿಗೆ ದುಡಿದ ಹಿರಿಯರೊಬ್ಬರನ್ನು ಸ್ಮರಿಸಲಾಗುತ್ತದೆ.