Subscribe to Updates

    Get the latest creative news from FooBar about art, design and business.

    What's Hot

    ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ 17ನೇ ವಾರ್ಷಿಕೋತ್ಸವ | ಜುಲೈ 07

    June 30, 2025

    ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ‘ಯಕ್ಷಮಂಗಳ ಪ್ರಶಸ್ತಿ’ ಮತ್ತು ‘ಯಕ್ಷಮಂಗಳ ಕೃತಿ ಪ್ರಶಸ್ತಿ’ ಪ್ರದಾನ

    June 30, 2025

    ಉಪ್ಪಿನಂಗಡಿಯ ಶ್ರೀರಾಮ ಶಾಲೆಯಲ್ಲಿ ‘ಯಕ್ಷ ಶಿಕ್ಷಣ’ ಉಚಿತ ಯಕ್ಷಗಾನ ತರಬೇತಿ ಉದ್ಘಾಟನೆ

    June 30, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಸುರತ್ಕಲ್ ಗೋವಿಂದ ದಾಸ ಕಾಲೇಜಿನಲ್ಲಿ ಲೀಕ್ ಔಟ್’ – ಏಕವ್ಯಕ್ತ ನಾಟಕ ಪ್ರದರ್ಶನ 
    Drama

    ಸುರತ್ಕಲ್ ಗೋವಿಂದ ದಾಸ ಕಾಲೇಜಿನಲ್ಲಿ ಲೀಕ್ ಔಟ್’ – ಏಕವ್ಯಕ್ತ ನಾಟಕ ಪ್ರದರ್ಶನ 

    February 24, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email
    ಸುರತ್ಕಲ್ : ಗೋವಿಂದ ದಾಸ ಕಾಲೇಜಿನ ಯಕ್ಷಗಾನ ಮತ್ತು ಲಲಿತಕಲಾ ಅಧ್ಯಯನ ಕೇಂದ್ರ, ಕಲಾಬ್ಧಿ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಮಹಿಳಾ ವೇದಿಕೆಗಳ ಆಶ್ರಯದಲ್ಲಿ ನಟಿ ಅಕ್ಷತಾ ಪಾಂಡವಪುರ ಅವರ ಕಥೆ, ವಿನ್ಯಾಸ ಮತ್ತು ಅಭಿನಯದ ಸ್ತ್ರೀ ಸಂವೇದನೆಯ ಸೂಕ್ಷ್ಮ ಭಾವನೆಗಳನ್ನು ಅಭಿವ್ಯಕ್ತಿಸುವ ಆಪ್ತ ರಂಗಪ್ರಯೋಗ ‘ಲೀಕ್ ಔಟ್’ – ಏಕವ್ಯಕ್ತ ನಾಟಕ ಪ್ರದರ್ಶನವು ದಿನಾಂಕ 21-02-2024 ರಂದು ಸುರತ್ಕಲ್ಲಿನ ಗೋವಿಂದದಾಸ ಕಾಲೇಜಿನಲ್ಲಿ ನಡೆಯಿತು.
    ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಹಿರಿಯ ರಂಗಭೂಮಿ ಕಲಾವಿದೆ ಹಾಗೂ ನಿರ್ಮಾಪಕಿ ಗೀತಾ ಸುರತ್ಕಲ್ ಮಾತನಾಡಿ “ಆಧುನಿಕ ಜಗತ್ತಿನ ಹೊಸ ಸಮಸ್ಯೆಗಳನ್ನು ಅನುಸಂಧಾನ ಮಾಡುತ್ತಾ ಹೆಣ್ಣಿನ ಅಂತರಂಗದ ತಲ್ಲಣಗಳನ್ನು ಕಟ್ಟಿಕೊಡುವ ಅಕ್ಷತಾರ ರಂಗ ಪ್ರಯೋಗ ಅನನ್ಯವಾದುದು.” ಎಂದು ಹೇಳಿದರು. 
     ಹಿರಿಯ ನಟ ಡಾ. ಆರ್. ನರಸಿಂಹ ಮೂರ್ತಿ ಮಾತನಾಡಿ “ಆಪ್ತ ರಂಗಭೂಮಿ ಪ್ರಯೋಗಗಳಲ್ಲಿ ವಿಶಿಷ್ಟವಾಗಿ ಪ್ರೇಕ್ಷಕರನ್ನು ಪಾತ್ರಗಳನ್ನಾಗಿಸಿಕೊಂಡು ಸಮಸ್ಯೆಗಳ ಕುರಿತು ಸಂವಾದಿಸಲು ಪ್ರೇರೇಪಿಸುವ ರಂಗಭೂಮಿಗೆ ಹೊಸ ಆಯಾಮ ನೀಡುವ ಪ್ರಯೋಗ ಇದಾಗಿದೆ.” ಎಂದರು. ಕಾಲೇಜಿನ ಪ್ರಾಚಾರ್ಯ ಪ್ರೊ.ಪಿ. ಕೃಷ್ಣಮೂರ್ತಿ ಮಾತನಾಡಿ “ಸಾಂಪ್ರದಾಯಿಕ ಚೌಕಟ್ಟಿನ ಮನೋಭೂಮಿಕೆಯಿಂದ ಹೊರಬಂದು ಸವಾಲುಗಳನ್ನು ಎದುರಿಸಲು ಅವಕಾಶ ಕಲ್ಪಿಸುವ ಪ್ರಯೋಗ ಇದಾಗಿದ್ದು ಕಥೆಗಾರ್ತಿ ಹಾಗೂ ನಟಿಯಾಗಿ ಅಕ್ಷತಾ ಪಾಂಡವಪುರ ಯಶಸ್ಸು ಗಳಿಸಿದ್ದಾರೆ.” ಎಂದರು. ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಅಧ್ಯಕ್ಷೆ ಜ್ಯೋತಿ ಚೇಳಾಯ್ರು ಮಾತನಾಡಿ “ಹೆಣ್ಣಿನ ವಿವಿಧ ಸಂವೇದನೆಗಳನ್ನು ನಟಿ ಅಕ್ಷತಾ ಸೊಗಸಾಗಿ ತೆರೆದಿಡುತ್ತಾರೆ. ವಿದ್ಯಾರ್ಥಿನಿಯರು ಸಮಾಜದ ಕುರಿತು ಚಿಂತಿಸಲು ಅವಕಾಶ ಕಲ್ಪಿಸಿಕೊಡುವ ಪ್ರಯೋಗ ಇದಾಗಿದೆ.” ಎಂದರು.
    ಸಾಹಿತಿ ಮಹೇಶ್ ಆರ್. ನಾಯಕ್, ದೇವಿಕಾ ನಾಗೇಶ್, ಸ್ವರ್ಣ, ರಾ. ಸೇ. ಯೋಜನಾಧಿಕಾರಿ ಅಕ್ಷತಾ ವಿ., ಪ್ರಾಧ್ಯಾಪಕ ಕುಮಾರ ಮಾದರ, ರಾ. ಸೇ. ಯೋಜನೆಯ ಕಾರ್ಯದರ್ಶಿ ಹಿತಾ ಉಮೇಶ್ ಉಪಸ್ಥಿತರಿದ್ದರು. ಅಕ್ಷತಾ ಪಾಂಡವಪುರ ‘ಲೀಕ್ ಔಟ್’ ನಾಟಕ ಪ್ರಯೋಗವನ್ನು ನಡೆಸಿಕೊಟ್ಟರು. ರಂಗನಟ ಓಂಕಾರ್ ಮೇಗಳಾಪುರ ಸಹರಿಸಿದರು. ವಿನೋದ್ ಶೆಟ್ಟಿ ಕಾರ್ಯಕ್ರಮ ಸಂಯೋಜಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಪಡುಬೆಟ್ಟು ಶ್ರೀ ಬಾಲಸುಬ್ರಹ್ಮಣ್ಯ ಮಕ್ಕಳ ಯಕ್ಷಗಾನ ಮಂಡಳಿಯ ಉದ್ಘಾಟನೆ ಮತ್ತು ಮಕ್ಕಳ ರಂಗಪ್ರವೇಶ ಕಾರ್ಯಕ್ರಮ
    Next Article ಪುಸ್ತಕ ವಿಮರ್ಶೆ | ಜೋತಯ್ಯನ ಬಿದಿರು ಬುಟ್ಟಿ
    roovari

    Add Comment Cancel Reply


    Related Posts

    ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ 17ನೇ ವಾರ್ಷಿಕೋತ್ಸವ | ಜುಲೈ 07

    June 30, 2025

    ಬೆಳಗಾವಿಯ ಲೋಕಮಾನ್ಯ ರಂಗ ಮಂದಿರದಲ್ಲಿ ‘ಶರ್ಮಿಷ್ಠೆ’ ನಾಟಕ ಪ್ರದರ್ಶನ | ಜುಲೈ 05

    June 30, 2025

    ಮೈಸೂರಿನ ಕಿರುರಂಗಮಂದಿರದಲ್ಲಿ ‘ಪಂಚಗವ್ಯ’ ಪಂಚಕಾವ್ಯಗಳ ಅಭಿನಯಗುಚ್ಛ | ಜುಲೈ 05

    June 30, 2025

    ಮೂಡುಬಿದಿರೆ ಕನ್ನಡ ಭವನದಲ್ಲಿ ‘ಛತ್ರಪತಿ ಶಿವಾಜಿ’ ಅದ್ದೂರಿ ತುಳು ಚಾರಿತ್ರಿಕ ನಾಟಕ | ಜೂನ್ 29

    June 28, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.