ತೆಕ್ಕಟ್ಟೆ : ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ ಸಂಸ್ಥೆಯು ತನ್ನ ಬೆಳ್ಳಿಹಬ್ಬದ ಅಂಗವಾಗಿ ಆಯೋಜಿಸಿದ ‘ಶ್ವೇತಯಾನ’ ಕಾರ್ಯಕ್ರಮದ 125ನೆಯ ಕಾರ್ಯಕ್ರಮವಾಗಿ ‘ಶ್ವೇತಯಾನ’ದ ಸಮಾರೋಪ ಸಮಾರಂಭ ‘ಮಧ್ಯಮಾವತಿ’ಯು ದಿನಾಂಕ 19 ಏಪ್ರಿಲ್ 2025ರಂದು ಸಂಜೆ ಘಂಟೆ 6.00ಕ್ಕೆ ತೆಕ್ಕಟ್ಟೆಯ ಕುವೆಂಪು ಶಾಲೆಯಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಮಾನಸಿ ಸುಧೀರ್ ನೇತೃತ್ವದ ನೃತ್ಯ ನಿಕೇತನ ಕೊಡವೂರು ತಂಡದಿಂದ ನೃತ್ಯೋಪಾಸನೆ ನಡೆಯಲಿದೆ.

