ಮೂಡುಬಿದಿರೆ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಮಹಾವೀರ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಮಂಗಳೂರು ವಿ. ವಿ. ಮಟ್ಟದ ಸಾಂಸ್ಕೃತಿಕ ವೈಭವ ತುಳುನಾಡ ಸಿರಿ ‘ಮದಿಪು’ ಕಾರ್ಯಕ್ರಮವು ದಿನಾಂಕ 23 ಏಪ್ರಿಲ್ 2025ರ ಬುಧವಾರ ಮೂಡುಬಿದಿರೆಯ ಮಹಾವೀರ ಕಾಲೇಜಿನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ ಗಟ್ಟಿ ಕಾಪಿಕಾಡು ಮಾತನಾಡಿ “ತುಳು ಭಾಷೆ ಅನೇಕ ಸವಾಲುಗಳನ್ನು ಎದುರಿಸಿ ಬೆಳೆದು ಬಂದಿದೆ. ಅದು ನಮ್ಮ ನಿತ್ಯ ಬಳಕೆಯ ಭಾಷೆಯಾದಾಗ ವಿಸ್ತಾರವಾಗಿ ಬೆಳೆದು ಮುಂದಿನ ತಲೆಮಾರಿಗೆ ಹಸ್ತಾಂತರವಾಗಲು ಸಾಧ್ಯ . ಮಹಾವೀರ ಕಾಲೇಜಿನ ವಿದ್ಯಾರ್ಥಿಗಳು ಮೂಡುಬಿದಿರೆ ಸುತ್ತಮುತ್ತ ತುಳು ಸಾಹಿತ್ಯಕ್ಕೆ ಸಂಬಂಧಿಸಿದಂತೆ ಅಧ್ಯಯನ ಮಾಡುವುದಾದರೆ ಅದಕ್ಕೆ ತಗಲುವ ಖರ್ಚನ್ನು ಅಕಾಡೆಮಿ ವತಿಯಿಂದ ಭರಿಸಲಾಗುವುದು ಎಂದರು.
ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಅಭಯಚಂದ್ರ ಜೈನ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ . ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಹರೀಶ್ ಸ್ವಾಗತಿಸಿ, ಪದವಿ ಕಾಲೇಜಿನ ಪ್ರಾಚಾರ್ಯ ರಾಧಾಕೃಷ್ಣ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ. ಪೂ. ಕಾಲೇಜಿನ ಪ್ರಾಚಾರ್ಯ ಎಂ. ರಮೇಶ್ ಭಟ್, ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಸಂಪತ್ ಸಾಮ್ರಾಜ್ಯ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ನಾಗರಾಜ್, ಕಾರ್ಯಕ್ರಮ ಸಂಯೋಜಕರಾದ ಪೂರ್ಣಿಮಾ, ವಿಜಯಲಕ್ಷ್ಮಿ, ರಶ್ಮಿತಾ, ಶಾರದಾ, ಸಂದೀಪ್, ತುಳು ಸಂಘದ ಕಾರ್ಯದರ್ಶಿ ದೀಪಶ್ರೀ, ವಿದ್ಯಾರ್ಥಿ ಕ್ಷೇಮಪಾಲನಾ ಸಂಘದ ನಾಯಕಿ ಶೃತಿ ಎಸ್. ಪೇರಿ, ವಿದ್ಯಾರ್ಥಿ ಸಂಯೋಜಕರಾದ ರೋಸ್ಟಿನ್ ಪಿಂಟೊ, ಕಾರ್ತಿಕ್ ಶೆಟ್ಟಿ, ಸಚಿನ್, ಪ್ರಜ್ವಲ್, ಕಿರಣ್ ಭಾಗವಹಿಸಿದ್ದರು.