ಮಂಗಳೂರು : ಮಂಗಳೂರಿನ ಗದ್ದೆಕೇರಿ ರಸ್ತೆಯಲ್ಲಿರುವ ಶ್ರೀ ಮಹಮ್ಮಾಯಿ ದೇವಸ್ಥಾನದ ಶ್ರೀ ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘ, ತನ್ನ 101 ನೆಯ ವರ್ಷದಲ್ಲಿ ‘ ಶ್ರೀ ರಾಮ ಚರಿತಾಮೃತ’ ಎನ್ನುವ ಶ್ರೀ ರಾಮನ ಕಥಾನಕವನ್ನು ವರ್ಷ ಪೂರ್ತಿ ಪ್ರತಿ ಭಾನುವಾರ ವಿಶೇಷ ಕೂಟಗಳ ಮೂಲಕ ಪ್ರಸ್ತುತಪಡಿಸಿ ಈಗ ಶಿವ ಪುರಾಣದ ಕಥೆಗಳನ್ನು ಆಯ್ದುಕೊಂಡು ತನ್ನ 102 ನೆಯ ವರ್ಷದ ಯಕ್ಷಗಾನ ಸೇವೆಯಲ್ಲಿ ತೊಡಗಿಸಿಕೊಂಡಿದೆ.
ಈ ಸರಣಿ ಕಾರ್ಯಕ್ರಮದ ಅಂಗವಾಗಿ ದಿನಾಂಕ 30.07.2023ರಂದು ಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ ‘ತ್ರಿಪುರ ಮಥನ’ ಯಕ್ಷಗಾನ ತಾಳಮದ್ದಳೆ ಜರಗಿತು. ಕಾರ್ಯಕ್ರಮದಲ್ಲಿ ಭಾಗವತರಾಗಿ ಅಶೋಕ್ ಬೋಳೂರು ಹಾಗೂ ಶೋಭಾ ಐತಾಳ್, ಮದ್ದಳೆ ವಾದನದಲ್ಲಿ ಸಂಜಯ ಕುಮಾರ್, ಚೆಂಡೆ ವಾದನದಲ್ಲಿ ಶಿವಪ್ರಸಾದ್ ಪ್ರಭು, ಅರ್ಥಧಾರಿಗಳಾಗಿ ಶಿವಾನಂದ ಪೆರ್ಲಗುರಿ, ಪ್ರಭಾಕರ ಕಾಮತ್, ರಮೇಶ ಆಚಾರ್ಯ, ಸಂಜಯ ಕುಮಾರ್ ಮತ್ತು ಶ್ರೇಯಸ್ ಪಾಲ್ಗೊಂಡರು.
Subscribe to Updates
Get the latest creative news from FooBar about art, design and business.