ಕಾಸರಗೋಡು : ದ್ರಾವಿಡ ಭಾಷಾ ಅನುವಾದಕರ ಸಂಘ (ರಿ.), ವೈಟ್ ಫೀಲ್ಡ್ ಬೆಂಗಳೂರು ಮತ್ತು ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ (ರಿ.) ನುಳ್ಳಿಪ್ಪಾಡಿ ಕಾಸರಗೋಡು ಇವುಗಳ ಸಂಯುಕ್ತಾಶ್ರಯದಲ್ಲಿ ಒಂದು ದಿನದ ‘ಮಲಯಾಳಂ – ಕನ್ನಡ ಅನುವಾದ ಕಾರ್ಯಾಗಾರ’ವನ್ನು ದಿನಾಂಕ 09 ಮಾರ್ಚ್ 2025ರಂದು ಕಾಸರಗೋಡಿನ ಕನ್ನಡ ಭವನ ಗ್ರಂಥಾಲಯದಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಾಗಾರದ ಉದ್ಘಾಟನೆಯನ್ನು ಹಿರಿಯ ಸಾಹಿತಿ ರಾಧಾಕೃಷ್ಣ ಕೆ. ಉಳಿಯತಡ್ಕ ಇವರ ಅಧ್ಯಕ್ಷತೆಯಲ್ಲಿ ದ್ರಾವಿಡ ಭಾಷಾ ಅನುವಾದಕರ ಸಂಘದ ಅಧ್ಯಕ್ಷರಾದ ಡಾ. ಸುಷ್ಮಾ ಶಂಕರ್ ಇವರು ನಿರ್ವಹಿಸಲಿದ್ದಾರೆ. ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಕೆ.ವಿ. ಕುಮಾರನ್ ಮತ್ತು ದ್ರಾವಿಡ ಭಾಷಾ ಅನುವಾದಕರ ಸಂಘದ ಉಪಾಧ್ಯಕ್ಷರಾದ ಡಾ. ಬಿ.ಎಸ್. ಶಿವಕುಮಾರ್ ಇವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.