06 ಏಪ್ರಿಲ್ 2023, ಬ್ರಹ್ಮಾವರ: ಮಂದಾರ (ರಿ.) ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಇದರ 3ನೇ ದಿನದ ರಂಗೋತ್ಸವದಲ್ಲಿ ಹುಬಾಶಿಕ ಕೊರಗರ ಯುವ ಕಲಾವೇದಿಕೆ (ರಿ.) ಬಾರ್ಕೂರು ಇವರಿಂದ ಡೋಲು ವಾದನ-ಕುಣಿತ ಕಲಾಪ್ರಕಾರ ಸೋಮವಾರ 03-04-2023ರಂದು ಪ್ರದರ್ಶನಗೊಂಡಿತು. ನಂತರ ಅತಿಥಿಯಾಗಿ ರಥಬೀದಿ ಗೆಳೆಯರು ಉಡುಪಿ ಇದರ ನಾಟಕ ವಿಭಾಗದ ಸಂಚಾಲಕರಾದ ಸಂತೋಶ್ ಶೆಟ್ಟಿ ಹಿರಿಯಡ್ಕ ಜೊತೆಗಿದ್ದು ಮಾತನಾಡಿ ಬದುಕಿನ ಸತ್ಯವನ್ನ ಅನಾವರಣಗೊಳಿಸುವಲ್ಲಿ ರಂಗಭೂಮಿ ಯಾವತ್ತೂ ಪ್ರಭುತ್ವದ ವಿರೋಧಿ ಎಂದರು. ರಂಗಭೂಮಿಯ ಆಶಯಗಳಿಗೆ ಬದ್ಧವಾಗಿ ಕೆಲಸ ಮಾಡುವ ತಂಡಗಳಲ್ಲಿ ಮಂದಾರವೂ ಒಂದು ಎಂದು ಶ್ಲಾಘಿಸಿದರು.ಇದೇ ವೇಳೆ ಮಂದಾರ (ರಿ.)ದ ತಂಡದ ‘ಕೊಳ್ಳಿ’ ನಾಟಕಕ್ಕೆ ಸಂಗೀತ ನೀಡಿ ಪ್ರಶಸ್ತಿ ತಂದುಕೊಟ್ಟಿದ್ದಕ್ಕೆ ಹಾಗೂ ಸದಾ ಮಂದಾರದ ಜೊತೆಯಾಗಿದ್ದಕ್ಕೆ ಶ್ರೀ ವಾಸುದೇವ ಗಂಗೇರ ಇವರಿಗೆ ಮಂದಾರದ ಪರವಾಗಿ ರಂಗ ಗೌರವ ಸಲ್ಲಿಸಲಾಯಿತು.
ತದನಂತರ ಮಂದಾರ ತಂಡವೇ ಅಭಿನಯಿಸಿದ ರೋಹಿತ್ ಎಸ್. ಬೈಕಾಡಿ ನಿರ್ದೇಶನದ ‘ದೂತ ಘಟೋತ್ಕಚ’ ನಾಟಕ ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.