Subscribe to Updates

    Get the latest creative news from FooBar about art, design and business.

    What's Hot

    ಕದ್ರಿ ಯಕ್ಷ ಮಂಜುಳಾ ಮಹಿಳಾ ಬಳಗದವರಿಂದ ‘ಯಕ್ಷಗಾನ ತಾಳಮದ್ದಳೆ’ | ಫೆಬ್ರವರಿ 24

    February 21, 2026

    ಕೋಟ ‘ಅಹರ್ನಿಶ’ದಲ್ಲಿ ‘ಯಕ್ಷ ಗಾನ ವೈಭವ’

    February 21, 2026

    ‘ಮಲಬಾರ್ ವಿಶ್ವರಂಗ ಪುರಸ್ಕಾರ-2026’ಕ್ಕೆ ಐವರು ಹಿರಿಯ ರಂಗಕರ್ಮಿಗಳು

    February 21, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಂಗಳೂರು ಪುರಭವನದಲ್ಲಿ ‘ಬೋಲಾವ ವಿಠಲ’ ಸಂಗೀತ ಕಾರ್ಯಕ್ರಮ | ಜುಲೈ 1ರಂದು
    Music

    ಮಂಗಳೂರು ಪುರಭವನದಲ್ಲಿ ‘ಬೋಲಾವ ವಿಠಲ’ ಸಂಗೀತ ಕಾರ್ಯಕ್ರಮ | ಜುಲೈ 1ರಂದು

    June 29, 2023Updated:August 19, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ವಿಜಯ ಕರ್ನಾಟಕ ಮತ್ತು ಸಂಗೀತ ಭಾರತಿ ಪ್ರತಿಷ್ಠಾನವು ಕರಾವಳಿಯ ಸಂಗೀತಾಸಕ್ತರಿಗೆ ಮತ್ತೊಂದು ರಸದೌತಣವನ್ನು ದಿನಾಂಕ : 01-07-2023ರಂದು ಮಂಗಳೂರಿನ ಪುರಭವನದಲ್ಲಿ ಆಯೋಜಿಸಿದೆ. ನಾಲ್ಕು ಆವೃತ್ತಿಯಲ್ಲಿ ಯಶಸ್ವಿಯಾಗಿದ್ದ ‘ಬೋಲಾವ ವಿಠಲ’ ಸಂಗೀತ ಕಾರ್ಯಕ್ರಮಕ್ಕೆ ಮತ್ತೆ ವೇದಿಕೆ ಸಜ್ಜಾಗಿದೆ. ಸಂಜೆ 5 ಗಂಟೆಗೆ ಆರಂಭವಾಗುವ ಕಾರ್ಯಕ್ರಮದಲ್ಲಿ ಹಿಂದೂಸ್ತಾನಿ ಹಾಗೂ ಕರ್ಣಾಟಕ ಸಂಗೀತದ ಶ್ರೇಷ್ಠ ಕಲಾವಿದರಾದ ಪಂಡಿತ್‌ ಆನಂದ್ ಭಾಟೆ ಮತ್ತು ವಿದುಷಿ ಭಾಗ್ಯಶ್ರೀ ದೇಶಪಾಂಡೆ ಅವರ ಅಭಂಗ ರೂಪದಲ್ಲಿ ಹಾಡುಗಾರಿಕೆ ನಡೆಯಲಿದೆ.

    ವಿದುಷಿ ಭಾಗ್ಯಶ್ರೀ ದೇಶಪಾಂಡೆ

    ಪಂಡಿತ್‌ ಆನಂದ್ ಭಾಟೆ

    ಬೋಲಾವ ವಿಠಲ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಚಿಸುವ ಕಲಾಸಕ್ತರು ನಗರದ ಎಂ.ಜಿ. ರಸ್ತೆಯಲ್ಲಿರುವ ಬಲ್ಲಾಳ್ ಬಾಗ್ ನ ಕಾಯರ್ ಮಂಚ್ ಕಟ್ಟಡದ ಎರಡನೇ ಮಹಡಿಯಲ್ಲಿರುವ ವಿಜಯ ಕರ್ನಾಟಕ ಅಥವಾ ಕೊಡಿಯಾಲ್‌ಬೈಲ್‌ನಲ್ಲಿರುವ ಎಕ್ಸ್ ಪರ್ಟ್ ಪದವಿ ಪೂರ್ವ ಕಾಲೇಜಿನಿಂದ ಪಾಸನ್ನು ಜೂನ್ 28ರಿಂದ ಪಡೆದುಕೊಳ್ಳಬಹುದು. ಪಾಸ್‌ ಹೊಂದಿರುವವರಿಗೆ ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಇರುತ್ತದೆ ಎಂದು ಸಂಗೀತ ಭಾರತಿ ಪ್ರತಿಷ್ಠಾನದ ಉಪಾಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ತಿಳಿಸಿದ್ದಾರೆ.
    ಮಂಗಳೂರಿನ ಇತಿಹಾಸದಲ್ಲೇ ಮೊದಲ ಬಾರಿಗೆ ಎಂಬಂತೆ 2018, 2019, 2021 ಮತ್ತು 2022 ರಲ್ಲಿ ನಗರದ ಪುರಭವನದಲ್ಲಿ ಕಿಕ್ಕಿರಿದ ಪ್ರೇಕ್ಷಕರ ನಡುವೆ ಪ್ರದರ್ಶನ ನಡೆದಿತ್ತು. ದೇಶದ ಹಲವು ಶ್ರೇಷ್ಠ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿರುವ ಮುಂಬಯಿನ ಪಂಚಮ್ ನಿಶಾದ್ ಸಂಸ್ಥೆಯ ಅಭೂತ ಪೂರ್ವ ಪರಿಕಲ್ಪನೆಯ ಕಾರ್ಯಕ್ರಮವಾಗಿರುವ ‘ಬೋಲಾವ ವಿಠಲ’ ಎಂಬ ವಿನೂತನ ಸಂತವಾಣಿ ಕಾರ್ಯಕ್ರಮ ಇದಾಗಿದೆ.

    ಪ್ರತಿ ವರ್ಷ ಆಷಾಢ ಮಾಸದಲ್ಲಿ ಪಂಚಮ್ ನಿಶಾದ್‌ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿದೆ. ಪಂಚಮ್ ನಿಶಾದ್ ಸಂಸ್ಥೆಯು ‘ಬೋಲಾವ ವಿಠಲ’ ಶೀರ್ಷಿಕೆಯಡಿ ಹಿಂದೆ ಪುಣೆ, ಮುಂಬಯಿ, ಹೊಸದಿಲ್ಲಿ, ಗೋವಾ, ಕೊಲ್ಕೊತ್ತಾ, ಬೆಂಗಳೂರು ಅಲ್ಲದೆ ದೇಶದ ನಾನಾ ಪ್ರಮುಖ ನಗರಗಳಲ್ಲಿ ಕಳೆದ ಹಲವು ದಶಕಗಳಿಂದ ಆಯೋಜಿಸಿಕೊಂಡು ಬರುತ್ತಿದೆ. ದೇಶದ ಪ್ರಮುಖ ನಗರಗಳ ನಿವಾಸಿಗಳಿಗೆ ಸಂಗೀತದ ಶ್ರೇಷ್ಠತೆಯನ್ನು ಪರಿಚಯಿಸಿದ ಬೋಲಾವ ವಿಠಲ್‌ ತಂಡವನ್ನು 2018ರಿಂದ ಮಂಗಳೂರಿಗೆ ವಿಜಯ ಕರ್ನಾಟಕ ದಿನ ಪತ್ರಿಕೆ ಹಾಗೂ ಸಂಗೀತ ಭಾರತಿ ಪ್ರತಿಷ್ಠಾನ ಪರಿಚಯ ಮಾಡಿಸಿತು. ಇದೀಗ ಮುಂದುವರಿದ ಭಾಗವಾಗಿ ಈ ವರ್ಷವೂ ಕಾರ್ಯಕ್ರಮ ಆಯೋಜಿಸುತ್ತಿದೆ.

    ಪಾಂಡುರಂಗನಿಗೆ ಅಭಂಗ್ ರೂಪದಲ್ಲಿ ಆರಾಧನೆ ಶ್ರೇಷ್ಠ. ಪಂಡರಾಪುರದಲ್ಲಿ ಪ್ರತಿದಿನ ಇಂತಹ ಆರಾಧನೆಗಳು ನಡೆಯುತ್ತಿರುತ್ತವೆ. ಆದರೆ ಎಲ್ಲರಿಗೂ ಪಂಡರಾಪುರಕ್ಕೆ ಹೋಗಿ ಆರಾಧನೆ ಮಾಡಲು ಆಗುವುದಿಲ್ಲ ಎಂಬ ಕಾರಣಕ್ಕೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇಲ್ಲಿ ಭಕ್ತಿ ಒಂದೆಡೆಯಾದರೆ, ಇನ್ನೊಂದೆಡೆಯಿಂದ ಪ್ರತಿಭೆಯ ಅನಾವರಣ ಇರುತ್ತದೆ. ನಿಯಮಿತ ಕಾಲಮಿತಿಯನ್ನು ಇಬ್ಬರು ಕಲಾವಿದರು ತಮ್ಮ ವಿಶಿಷ್ಟತೆಯನ್ನು ಅನಾವರಣಗೊಳಿಸಲಿದ್ದಾರೆ. ಇದರಿಂದಾಗಿ ಈ ಕಾರ್ಯಕ್ರಮದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಭೂತ ಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಂಗೀತ ಪ್ರೀಯರಿಗೆ ವಿಭಿನ್ನ ಮಾದರಿಯ ಕಾರ್ಯಕ್ರಮ ಕೇಳಲು ಅವಕಾಶವಾಗಿದೆ ಎನ್ನುತ್ತಾರೆ ಸಂಗೀತ ಭಾರತಿ ಪ್ರತಿಷ್ಠಾನದ ಉಪಾಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್.

    Share. Facebook Twitter Pinterest LinkedIn Tumblr WhatsApp Email
    Previous Articleಗಾನ ನೃತ್ಯ ಅಕಾಡೆಮಿ ಮಂಗಳೂರು ವತಿಯಿಂದ ಸುಳ್ಯದಲ್ಲಿ ‘ಆರೋಹಣ 2023’
    Next Article ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಸ್ವರಕಂಠೀರವ’- ಡಾ| ರಾಜ್ ಸವಿನೆನಪು | ಜುಲೈ 1ರಂದು
    roovari

    Add Comment Cancel Reply


    Related Posts

    ಇನ್ನೊಂದು ಗಿನ್ನೆಸ್ ದಾಖಲೆಗೆ ಸಜ್ಜಾಗುತ್ತಿದೆ ಮಾಂಡ್ ಸೊಭಾಣ್

    February 21, 2026

    ಕಡಂದಲೆಯಲ್ಲಿ ಮೂಡುಬಿದಿರೆ ತಾಲೂಕು ‘ಕನ್ನಡ ಸಾಹಿತ್ಯ ಸಮ್ಮೇಳನ’ | ಫೆಬ್ರವರಿ 21

    February 20, 2026

    ಯಶಸ್ವಿಯಾಗಿ ಸಂಪನ್ನಗೊಂಡ ‘ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ’

    February 20, 2026

    ಕನ್ನಡ ಭವನದಲ್ಲಿ ‘ಕಾಸರಗೋಡು-ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ 2026’ | ಫೆಬ್ರವರಿ 22

    February 20, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.