ಮಂಗಳೂರು : ಸಂಗೀತ ಪರಿಷತ್ ಮಂಗಳೂರು ಇದರ ವತಿಯಿಂದ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಭಾರತೀಯ ವಿದ್ಯಾಭವನ ಮತ್ತು ರಾಮಕೃಷ್ಣ ಮಠ ಇವುಗಳ ಸಹಯೋಗದೊಂದಿಗೆ ಪ್ರಸ್ತುತ ಪಡಿಸುವ ‘ಮಂಗಳೂರು ಸಂಗೀತೋತ್ಸವ 2024’ವನ್ನು ಮಂಗಳೂರಿನ ಮಂಗಳಾದೇವಿಯಲ್ಲಿರುವ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ದಿನಾಂಕ 29 ನವೆಂಬರ್ 2024ರಿಂದ 1 ಡಿಸೆಂಬರ್ 2024ರವರೆಗೆ ಆಯೋಜಿಸಲಾಗಿದೆ.
ದಿನಾಂಕ 29 ನವೆಂಬರ್ 2024ರಂದು ಸಂಜೆ 5-00 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಶ್ರೀ ಶರವು ಮಹಾ ಗಣಪತಿ ದೇವಸ್ಥಾನದ ಟ್ರಸ್ಟಿ ಶ್ರೀ ರಾಘವೇಂದ್ರ ಶಾಸ್ತ್ರಿ ಇವರು ದೀಪ ಪ್ರಜ್ವಲನೆ ಮಾಡಲಿರುವರು. ಶ್ರೀ ಚೇರ್ತಲ ಕೆ.ಎನ್. ರಂಗನಾಥ ಶರ್ಮ ಇವರಿಂದ ಹಾಡುಗಾರಿಕೆಗೆ ಅವನೇಶ್ವರಂ ಎಸ್.ಆರ್. ವಿನು ಇವರು ವಯೋಲಿನ್, ಶ್ರೀ ಮನ್ನಾರಗುಡಿ ಎ. ಈಶ್ವರನ್ ಮೃದಂಗ ಮತ್ತು ಶ್ರೀ ವೆಲ್ಲನ್ ತ್ತಂಜೂರ್ ಶ್ರೀಜಿತ್ ಘಟಂನಲ್ಲಿ ಸಹಕರಿಸಲಿದ್ದಾರೆ. ದಿನಾಂಕ 30 ನವೆಂಬರ್ 2024ರಂದು ಸಂಜೆ 5-00 ಗಂಟೆಗೆ ಶ್ರೀಮತಿ ಎನ್.ಜೆ. ನಂದಿನಿ ಇವರಿಂದ ಹಾಡುಗಾರಿಕೆಗೆ ಶ್ರೀ ವೈಭವ್ ರಮಣಿ ವಯೋಲಿನ್, ಶ್ರೀ ಬಾಲಕೃಷ್ಣ ಕಾಮತ್ ಮೃದಂಗ ಮತ್ತು ಶ್ರೀ ವಿಷ್ಣು ಕಾಮತ್ ಖಂಜೀರದಲ್ಲಿ ಸಹಕರಿಸಲಿದ್ದಾರೆ.
ದಿನಾಂಕ 01 ಡಿಸೆಂಬರ್ 2024ರಂದು ಬೆಳಿಗ್ಗೆ 10-00 ಗಂಟೆಗೆ ಶ್ರೀ ಕುನ್ನಕ್ಕುಡಿ ಯಂ. ಬಾಲ ಮುರಳೀಕೃಷ್ಣ ಇವರಿಂದ ಹಾಡುಗಾರಿಕೆಗೆ ಶ್ರೀ ಟ್ರಿವೆಂಡ್ರಮ್ ಸಂಪತ್ ವಯೋಲಿನ್, ಶ್ರೀ ತುಮಕೂರು ಬಿ. ರವಿಶಂಕರ್ ಮೃದಂಗ ಮತ್ತು ಶ್ರೀ ಶರತ್ ಕೌಶಿಕ್ ಘಟಂನಲ್ಲಿ ಸಹಕರಿಸಲಿದ್ದಾರೆ. ಮಧ್ಯಾಹ್ನ 2-00 ಗಂಟೆಗೆ ಕುಮಾರಿ ಪ್ರಾರ್ಥನಾ ಬಂಗಾರಡ್ಕ ಇವರಿಂದ ಹಾಡುಗಾರಿಕೆಗೆ ಕುಮಾರಿ ತನ್ಮಯೀ ಉಪ್ಪಂಗಳ ವಯೋಲಿನ್ ಹಾಗೂ ಶ್ರೀ ಅವಿನಾಶ್ ಬೆಳ್ಳಾರೆ ಇವರು ಮೃದಂಗದಲ್ಲಿ ಸಹಕರಿಸಲಿದ್ದಾರೆ. ಸಂಜೆ 4-00 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಸಂಗೀತ ಪರಿಷತ್ ಮಂಗಳೂರು ಇದರ ಅಧ್ಯಕ್ಷರಾದ ಎಂ.ವಿ. ಪ್ರದೀಪ್ ಇವರು ಅಧ್ಯಕ್ಷತೆ ವಹಿಸಲಿರುವರು. ಇದೇ ಸಂದರ್ಭದಲ್ಲಿ ಹರಿಹರಪುರದ ಮೃದಂಗ ವಿದ್ವಾಂಸರಾದ ಕರ್ನಾಟಕ ಕಲಾಶ್ರೀ ಶ್ರೀ ಸೂರಳಿ ಆರ್. ಗಣೇಶ್ ಮೂರ್ತಿ ಇವರಿಗೆ ‘ಸಂಗೀತೋತ್ಸವ 2024’ ಪ್ರಶಸ್ತಿ ಹಾಗೂ ಮಂಗಳೂರಿನ ಚಿ. ಸುಮುಖ ಕಾರಂತ ಮತ್ತು ಚಿ. ಗೌತಮ್ ಭಟ್ ಪಿ.ಜಿ. ಇವರುಗಳಿಗೆ ಯುವ ಪ್ರತಿಭಾ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಬಳಿಕ ಶ್ರೀ ಜೆ.ಎ. ಜಯಂತ್ ಇವರಿಂದ ನಡೆಯಲಿರುವ ಕೊಳಲು ವಾದನಕ್ಕೆ ಟ್ರಿವೆಂಡ್ರಮ್ ಸಂಪತ್ ವಯೋಲಿನ್, ಶ್ರೀ ಎನ್.ಸಿ. ಭಾರದ್ವಾಜ್ ಮೃದಂಗ ಮತ್ತು ಶ್ರೀ ಶರತ್ ಕೌಶಿಕ್ ಘಟಂನಲ್ಲಿ ಸಹಕರಿಸಲಿದ್ದಾರೆ.