ಮಂಗಳೂರು : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಭಾಗಿತ್ವದಲ್ಲಿ ಹಿರಿಯ ಸಾಹಿತಿ ಅಬ್ದುಲ್ ರಹಿಮಾನ್ ಕುತ್ತೆತ್ತೂರು ಅಧ್ಯಕ್ಷತೆಯಲ್ಲಿ ಮಂಗಳೂರು ತಾಲೂಕು ‘ಬ್ಯಾರಿ ಸಾಹಿತ್ಯ ಸಮ್ಮೇಳನ’ವು ದಿನಾಂಕ 04 ಜನವರಿ 2026ರಂದು ಕೈಕಂಬದ ಮೇಘಾ ಪ್ಲಾಝಾ ಸಭಾಂಗಣದಲ್ಲಿ ನಡೆಯಿತು.

ಗಾಯಕ ಶರೀಫ್ ನಿರ್ಮುಂಜೆ ಧ್ಯೇಯ ಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕ ರಾಜೇಶ್ ಸ್ವಾಗತಿಸಿ, ಯು.ಕೆ. ಖಾಲಿದ್ ಉಜಿರೆ ಕಾರ್ಯಕ್ರಮ ನಿರೂಪಿಸಿದರು. ಗುರುಪುರ ಕೈಕಂಬದ ಸಬೀಲುಲ್ ಹುದಾ ಅಲ್‌ಬಿರ್ ಶಾಲಾ ವಠಾರದಿಂದ ಸಭಾಂಗಣದವರೆಗೆ ಸಮ್ಮೇಳನಾಧ್ಯಕ್ಷ ಮೆರವಣಿಗೆ ನಡೆಯಿತು. ಸ್ವಾಗತ ಸಮಿತಿ ಗೌರವಾಧ್ಯಕ್ಷ ಎಂ.ಹೆಚ್. ಮೊಹಿದಿನ್ ಅಡ್ಡೂರು ಉದ್ಘಾಟಿಸಿದರು. ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಎಚ್. ಧ್ವಜಾರೋಹಣ ನೆರವೇರಿಸಿದರು. ಸಮ್ಮೇಳನಾಧ್ಯಕ್ಷರ ಭಾಷಣ ಮೇಲೆ ಚರ್ಚಾ ಗೋಷ್ಠಿ, ಬ್ಯಾರಿ ಕವಿಗೋಷ್ಠಿ, ದಫ್ ಮತ್ತು ಬ್ಯಾರಿ ಹಾಡುಗಳ ಸಂಭ್ರಮ ನಡೆದವು. ಸಮಾರೋಪದಲ್ಲಿ ನಾನಾ ಕ್ಷೇತ್ರದ ಗಣ್ಯರನ್ನು ಸನ್ಮಾನಿಸಲಾಯಿತು.





ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ತುಳು ಅಕಾಡೆಮಿ ಅಧ್ಯಕ್ಷ ತಾರಾನಾಥ ಕಾಪಿಕಾಡ್, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಪ್ಯಾನಿ ಆಳ್ವಾರಿಸ್, ಬ್ಯಾರಿ ಅಕಾಡೆಮಿ ಅಧ್ಯಕ್ಷ ಯು.ಎಚ್. ಉಮರ್, ಸ್ವಾಗತ ಸಮಿತಿ ಅಧ್ಯಕ್ಷ ಡಾ. ಇ.ಕೆ. ಸಿದ್ದೀಕ್ ಅದ್ದೂರ್, ಮೊಹಮ್ಮದ್ ಅಲಿ ಉಚ್ಚಿಲ್, ಯು.ಬಿ. ಇಬ್ರಾಹಿಂ ಅಡ್ಡೂರು, ಸಯ್ಯದ್ ಗಯಾಸುದ್ದೀನ್, ಅಬ್ದುಲ್ ಅಝೀಝ್, ಎಸ್.ಎಂ. ಅಬ್ದುಲ್ ಅಝೀಝ್, ಉಸ್ಮಾನ್, ಲೇಖಕರಾದ ಶಮೀಮಾ ಕಿತ್ತೂರ್, ಹಸೀನಾ ಮಲ್ನಾಡ್, ಎನ್.ಎಂ. ಹನೀಫ್ ನಂದರಬೆಟ್ಟು, ಬಶೀರ್ ಅಹ್ಮದ್ ಬೆಳ್ಳಾಯರು, ಹೈದರಲಿ ಕಾಟಿಪಳ್ಳ, ಅಕಾಡೆಮಿ ಸದಸ್ಯರಾದ ಸಮೀರಾ ಜಹಾನ್, ಬಿ.ಎಸ್. ಮೊಹಮ್ಮದ್, ಅಬೂಬಕರ್ ಅನಿಲಕಟ್ಟೆ, ಅನ್ಸಾರ್ ಕಾಟಿಪಳ್ಳ, ಸಂಚಾಲಕ ತಾಜುದ್ದೀನ್ ಉಪಸ್ಥಿತರಿದ್ದರು.




