Subscribe to Updates

    Get the latest creative news from FooBar about art, design and business.

    What's Hot

    ಮೈಸೂರಿನ ಕಿರು ರಂಗಮಂದಿರದಲ್ಲಿ ‘ನಿರಂತರ ರಂಗ ಉತ್ಸವ – 2025’ | ಡಿಸೆಂಬರ್ 17ರಿಂದ 21

    December 15, 2025

    ಕವನ | ಹೂ ಮನಸ್ಸು

    December 15, 2025

    ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯಿಂದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ

    December 15, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಂಗಳೂರು ವಿವಿಯಲ್ಲಿ ‘ಕನಕ ಪುರಸ್ಕಾರ’ ಕಾರ್ಯಕ್ರಮ
    News

    ಮಂಗಳೂರು ವಿವಿಯಲ್ಲಿ ‘ಕನಕ ಪುರಸ್ಕಾರ’ ಕಾರ್ಯಕ್ರಮ

    March 6, 2023Updated:August 19, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    6 ಮಾರ್ಚ್ 2023, ಮಂಗಳೂರು: ಗಾಯಕರು ಸಾಹಿತ್ಯಕ್ಕೆ ಗಮನಕೊಡಿ: ಶಶಿಧರ್ ಕೋಟೆ
    ಕಲಾವಿದನಾಗಲಿ ಗಾಯಕನಾಗಲಿ ಸಂಗೀತದ ಎಲ್ಲಾ ಪ್ರಕಾರಗಳನ್ನು ಒಂದೇ ರೀತಿ ಇಷ್ಟಪಡಬೇಕು. ಸಂಗೀತ ಕ್ಷೇತ್ರದಲ್ಲಿ ಸ್ವರಗಳ ಜ್ಞಾನ ಅರಿತುಕೊಂಡು ಬೆಳೆದರೆ ಯಶಸ್ಸು ಸಾಧ್ಯ. ಸಂಗೀತ ಮತ್ತು ಸಾಹಿತ್ಯ ಎನ್ನುವಂತದ್ದು ಸಾಗರ. ಅದರಲ್ಲಿಯೂ ಕನಕದಾಸರು ಹಾಗೂ ಪುರಂದರದಾಸರ ರಚನೆಗಳು ಅಪೂರ್ವ. ಗಾಯಕರು ಸಾಹಿತ್ಯಕ್ಕೆ ಗಮನಕೊಟ್ಟು ಹಾಡಿದರೆ ಅದರ ಚಂದವೇ ಬೇರೆ ಎಂದು ಬೆಂಗಳೂರಿನ ಖ್ಯಾತ ಗಾಯಕರಾದ ಗಾನ ಗಂಧರ್ವ ಶಶಿಧರ್ ಕೋಟೆ ಅವರು ಹೇಳಿದರು. ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಸಂಶೋಧನ ಕೇಂದ್ರದ ವತಿಯಿಂದ ಮಂಗಳಗಂಗೋತ್ರಿಯ ಡಾ. ಯು.ಆರ್. ರಾವ್ (ಹಳೆಯ ಸೆನೆಟ್) ಸಭಾಂಗಣದಲ್ಲಿ 03-03-2023 ಶುಕ್ರವಾರದಂದು ನಡೆದ ಕನಕ ಪುರಸ್ಕಾರ ಕಾರ್ಯಕ್ರಮದಲ್ಲಿ ‘ಕನಕದಾಸರ ಕೀರ್ತನೆಗಳಲ್ಲಿ ಸಂಗೀತಾಂಶಗಳು’ ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡಿದರು. ಭಾರತೀಯ ಸಂಸ್ಕೃತಿಗೆ ಮತ್ತು ಕನ್ನಡ ಸಂಸ್ಕೃತಿಗೆ ಹರಿದಾಸರು ನೀಡಿದ ಕೊಡುಗೆ ಭವ್ಯವಾದದ್ದು. ಆಧ್ಯಾತ್ಮದ ದರ್ಶನ, ಭಕ್ತಿಯ ಜಾಗೃತಿ, ಸಾಮಾಜಿಕ ಸುಧಾರಣೆ, ಮಾನವೀಯ ಮೌಲ್ಯಗಳು ಈ ಎಲ್ಲಾ ಅಂಶಗಳನ್ನು ಹರಿದಾಸರ ಕೀರ್ತನೆಗಳು ಒಳಗೊಂಡಿವೆ. ಭಕ್ತಿ ಶಕ್ತಿ ಅದರಿಂದಲೇ ಮುಕ್ತಿ ಎಂದು ಸಾರಿದವರು ಹರಿದಾಸರು. ಭಕ್ತಿಯ ಮೂಲಕ ಬದುಕಿನಲ್ಲಿ ಸಾರ್ಥಕತೆಯನ್ನು ಧನ್ಯತೆಯನ್ನು ಕನಕದಾಸರು ಕಂಡಿದ್ದಾರೆ ಎಂದರು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನಕ ಸಾಹಿತ್ಯದಲ್ಲಿ ಸತ್ವ ಇದೆ ಸತ್ಯ ಇದೆ. ಕಾರ್ಯಕ್ರಮ ನಮ್ಮ ಜ್ಞಾನವನ್ನು ವೃದ್ಧಿಗೊಳಿಸುವುದರ ಜೊತಗೆ ಆತ್ಮ ಸಂತೋಷಕ್ಕೆ‌ ಕಾರಣವಾಗುತ್ತದೆ ಎಂದರು.

    ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಶ್ರೀ ನಾರಾಯಣಗುರು ಅಧ್ಯಯನ ಪೀಠದ ಸಂಯೋಜಕ ಡಾ.ಗಣೇಶ್ ಅಮೀನ್ ಸಂಕಮಾರ್ ಕನಕದಾಸರು ಮತ್ತು ನಾರಾಯಣ ಗುರುಗಳ ಚಿಂತನೆಗಳಲ್ಲಿ ವಿಶ್ವ ಮಾನವತೆಯ ಆಶಯಗಳಿವೆ ಎಂದರು.

    ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕ ಡಾ.ಧನಂಜಯ ಕುಂಬ್ಳೆ ಸ್ವಾಗತಿಸಿ, ಆನಂದ ಎಂ ಕಿದೂರು ವಂದಿಸಿದರು. ಚಂದನ ಕೆ.ಎಸ್ ನಿರೂಪಿಸಿದರು. ಕನಕ ಪುರಸ್ಕಾರ’ವನ್ನು ಸ್ವೀಕರಿಸುವವರ ಹೆಸರುಗಳನ್ನು ವಿದ್ಯಾರ್ಥಿನಿ ರಶ್ಮಿ ವಾಚಿಸಿದರು

    ಪ್ರೌಢಶಾಲಾ ವಿಭಾಗದಲ್ಲಿ –
    ಮೇಧಾ ಉಡುಪ, 10ನೇ ತರಗತಿ, ಕೆನರಾ ಪ್ರೌಢ ಶಾಲೆ ಡೊಂಗರಕೇರಿ ಮಂಗಳೂರು.
    ಪಂಚಮಿ ಕೆ., 9ನೇ ತರಗತಿ, ಶ್ರೀ ಲಕ್ಷ್ಮಿ ನರಸಿಂಹ ಪೈ ವಿದ್ಯಾಲಯ, ಪಾಣೆ ಮಂಗಳೂರು.
    ತನ್ವಿ ಕಾವೂರು, 9ನೇ ತರಗತಿ, ಕೇಂದ್ರೀಯ ವಿದ್ಯಾಲಯ ಪಣಂಬೂರು.
    ಅನ್ವಿತ ಟಿ., 9ನೇ ತರಗತಿ, ಮಹಾಜನ್ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಸ್ಕೂಲ್, ನೀರ್ಚಾಲ್.

    ಪದವಿ ಪೂರ್ವ ವಿಭಾಗದಲ್ಲಿ
    ಕೀರ್ತನ ನಾಯ್ಗ, ದ್ವಿತೀಯ ಪಿ.ಯು.ಸಿ., ಸೈಂಟ್ ಅಲೋಶಿಯಸ್ ಪಿ.ಯು. ಕಾಲೇಜು, ಮಂಗಳೂರು.
    ಸುಧೀಕ್ಷ ಆರ್‌., ಪ್ರಥಮ ಪಿ.ಯು.ಸಿ., ಗೋವಿಂದ ದಾಸ ಕಾಲೇಜ್, ಸುರತ್ಕಲ್.
    ಶ್ರೀರಕ್ಷ ಎಸ್.ಎಚ್.‌, ದ್ವಿತೀಯ ಪಿ.ಯು.ಸಿ., ಸೈoಟ್ ಆಗ್ನೆಸ್ ಕಾಲೇಜ್, ಮಂಗಳೂರು.

    ಪದವಿ ವಿಭಾಗದಲ್ಲಿ
    ಶರಣ್ಯ ಕೆ.ಎನ್‌., ಅಂತಿಮ ವರ್ಷದ ಇಂಜಿನಿಯರಿಂಗ್, ಎನ್.ಎಂ.ಎ.ಎಂ.ಐ.ಟಿ. ನಿಟ್ಟೆ.
    ವಿಭಾಶ್ರೀ ಎಂ.ಎಸ್., ತೃತೀಯ ವರ್ಷದ ಬಿ.ಸಿ.ಎ., ವಿವೇಕಾನಂದ ಕಾಲೇಜ್, ಪುತ್ತೂರು.
    ಸುಶಾನ್‌ ಸಾಲಿಯಾನ್‌, ಅಂತಿಮ ಇಂಜಿನಿಯರಿಂಗ್, ಸೈoಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜ್, ಮಂಗಳೂರು
    ರೋಹಿತ್‌ ಕಾಮತ್‌, ದ್ವಿತೀಯ ವರ್ಷದ ಇಂಜಿನಿಯರಿಂಗ್, ಎನ್.ಎಂ.ಎ.ಎಂ.ಐ.ಟಿ.ನಿಟ್ಟೆ.

    ಸ್ನಾತಕೋತ್ತರ ವಿಭಾಗದಲ್ಲಿ
    ಶರಣ್ಯ, ಪ್ರಥಮ ವರ್ಷದ ಎಂ.ಎಸ್ಸಿ., ವಿಶ್ವವಿದ್ಯಾನಿಲಯ ಮಂಗಳೂರು.
    ಅಭಿರಾಮ್‌ ಎನ್.ಜಿ., ಎಂ.ಎಸ್ಸಿ., ವಿಶ್ವವಿದ್ಯಾನಿಲಯ ಮಂಗಳೂರು.
    ಶ್ರಾವ್ಯ ಬಿ., ದ್ವಿತೀಯ ವರ್ಷದ ಎಂ.ಎಸ್ಪಿ., ವಿವೇಕಾನಂದ ಕಾಲೇಜ್, ಪುತ್ತೂರು.
    ಶ್ರೀವರದಾ ಪಿ., ಪ್ರಥಮ ವರ್ಷದ ಎಂ.ಎಸ್ಸಿ., ವಿಶ್ವವಿದ್ಯಾನಿಲಯ ಮಂಗಳೂರು.

    ಅಧ್ಯಾಪಕ-ಅಧ್ಯಾಪಕೇತರ ವಿಭಾಗದಲ್ಲಿ
    ಡಾ. ಅನಿತ ಎಸ್.‌, ಸಹಾಯಕ ಪ್ರಾಧ್ಯಾಪಕ, ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜು ಹಾಸ್ಪಿಟಲ್, ಸುಳ್ಯ.
    ಯಶವಂತ, ವಾಹನ ಚಾಲಕ, ವಿಶ್ವವಿದ್ಯಾನಿಲಯ ಮಂಗಳೂರು.
    ಸವಿತ, ಸಹಾಯಕ ಗ್ರಂಥಪಾಲಕಿ, ವಿಶ್ವವಿದ್ಯಾನಿಲಯ ಮಂಗಳೂರು.

    ಸಾರ್ವಜನಿಕ ವಿಭಾಗ (ಕನಕ ಸಮೂಹ ನೃತ್ಯ ಭಜನೆ)ದಲ್ಲಿ
    ಗೆಳೆಯರ ಬಳಗ, ಗ್ರಂಥಾಲಯ, ವಿಶ್ವವಿದ್ಯಾನಿಲಯ ಮಂಗಳೂರು.
    ಶ್ರೀ ರಾಮಾಂಜನೇಯ ಭಜನಾ ತಂಡ, ಗುಡ್ಡುಪಾಲ್‌, ಕೊಣಾಜೆ.
    ಸಂತ ಅಲೋಶಿಯಸ್‌ ಕಾಲೇಜು (ಸ್ವಾಯತ್ತ) ಮಂಗಳೂರು.
    ಬಾಲಿನಿ ಮತ್ತು ತಂಡ, ವಿಶ್ವವಿದ್ಯಾನಿಲಯ ಮಂಗಳೂರು.

    ಇವರೆಲ್ಲರಿಗೆ ನಗದು, ಕನಕ ಪುರಸ್ಕಾರ ಮತ್ತು ಪ್ರಮಾಣಪತ್ರವನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಗಾಯಕರಿಂದ ಕನಕ ಕೀರ್ತನ ಪ್ರಸ್ತುತಿ ನಡೆಯಿತು.

    Share. Facebook Twitter Pinterest LinkedIn Tumblr WhatsApp Email
    Previous Articleಟೊಳ್ಳು ಗಟ್ಟಿ (ಮಕ್ಳಿಸ್ಕೂಲ್ ಮನೇಲಲ್ವೆ) – ತುಮಕೂರಿನಲ್ಲಿ ನಾಟಕ ಪ್ರದರ್ಶನ
    Next Article ಬಳ್ಳಾರಿಯಲ್ಲಿ ನಿಮಗಾಗಿ ನಾವು ಸಂಸ್ಥೆಯ ‘ನಮ್ಮ ಶಾಲೆ ಹಬ್ಬ’
    roovari

    Add Comment Cancel Reply


    Related Posts

    ಮಣಿ ಕೃಷ್ಣಸ್ವಾಮಿ ಅಕಾಡೆಮಿಯಿಂದ ‘ರಾಗ ಸುಧಾರಸ 2025’ | ಡಿಸೆಂಬರ್ 13ರಿಂದ 20

    December 13, 2025

    ಸ್ವರ, ತಾಳ, ಲಯಗಳ ಮಿಲನವೇ ಸಂಗೀತ – ನಿವೃತ್ತ ಡಿವೈಎಸ್ಪಿ ಟಿ.ಪಿ. ರಂಜಿತ್

    November 27, 2025

    ನೃತ್ಯಾಂತರಂಗದಲ್ಲಿ ಅಮೇರಿಕಾದ ಕಲಾವಿದೆಯಿಂದ ಅದ್ಭುತ ಕೂಚಿಪುಡಿ ನೃತ್ಯ

    November 27, 2025

    ಖ್ಯಾತ ಯಕ್ಷಗಾನ ಪ್ರಸಂಗಕರ್ತ, ತಾಳಮದ್ದಳೆ ಅರ್ಥಧಾರಿ, ಹವ್ಯಾಸಿ ಸ್ತ್ರೀ ವೇಷದಾರಿ ಕಂದಾವನ ರಘುರಾಮ ಶೆಟ್ಟಿ ನಿಧನ

    November 27, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.