10-03-2023,ಮಂಗಳೂರು: ಮಣಿ ಕೃಷ್ಣ ಸ್ವಾಮಿ ಅಕಾಡೆಮಿ(ರಿ ) ಮತ್ತು ನಾಗರಿಕ ಸಲಹಾ ಸಮಿತಿ (ರಿ ) ಸುರತ್ಕಲ್ ಇವರು ನಡೆಸಿಕೊಂಡು ಬಂದಿರುವ ‘ಉದಯರಾಗ’ ಸರಣಿ ಕಾರ್ಯಕ್ರಮದ ಈ ಬಾರಿಯ ಸಂಗೀತ ಕಛೇರಿಯು ಇದೆ ಬರುವ ದಿನಾಂಕ 12.03.2023ರ ಭಾನುವಾರದ ಬೆಳಿಗ್ಗೆ ಗಂ 6.00 ರಿಂದ 7.00 ರ ವರೆಗೆ ಸುರತ್ಕಲ್ ನಲ್ಲಿರುವ ಕೆನರಾ ಬ್ಯಾಂಕ್ ಅಡ್ಡರಸ್ತೆಯ ‘ಅನುಪಲ್ಲವಿ’ ಇಲ್ಲಿ ನಡೆಯಲಿದೆ. ಹಾಡುಗಾರಿಕೆಯಲ್ಲಿ ಪ್ರಣವ್ ಅಡಿಗ ಉಡುಪಿ ಇವರಿಗೆ ವಯಲಿನ್ ನಲ್ಲಿ ಧನಶ್ರೀ ಶಬರಾಯ ಮಂಗಳೂರು, ಮೃದಂಗದಲ್ಲಿ ಅಚಿಂತ್ಯಕೃಷ್ಣ ಪುತ್ತೂರು ಇವರು ಸಹಕರಿಸಲಿರುವರು.
ಪ್ರಣವ್ ಅಡಿಗ : ಅಂಬಲಪಾಡಿಯ ಶ್ರೀಮತಿ ವೀಣಾ ಹಾಗೂ ಪ್ರಕಾಶ್ ಅಡಿಗ ದಂಪತಿಗಳ ಪುತ್ರ ಚಿ| ಪ್ರಣವ್ ಅಡಿಗ ಪ್ರಸ್ತುತ ಆನಂದ ತೀರ್ಥ ವಿದ್ಯಾಲಯದಲ್ಲಿ ಆರನೇ ತರಗತಿಯಲ್ಲಿ ಓದುತ್ತಿದ್ದಾನೆ. ಕಳೆದ 6 ವರ್ಷಗಳಿಂದ ಕೊಳಲು ವಾದನ ಹಾಗೂ ಸಂಗೀತವನ್ನು ವಿದ್ವಾನ್ ಕೆ. ರಾಘವೇಂದ್ರ ರಾವ್ ಹಾಗೂ ವಿದ್ವಾನ್ ಕೆ. ರವಿಚಂದ್ರ ಕೂಳೂರು ಇವರಲ್ಲಿ ಕಲಿಯುತ್ತಿದ್ದಾನೆ ಹಾಗೂ ವಿದುಷಿ ಶ್ರೀಮತಿ ವಾರಿಜಾಕ್ಷಿ ಆರ್ ಭಟ್ ಇವರಲ್ಲಿ ಈ ಮೊದಲು ಅಭ್ಯಾಸ ಮಾಡಿರುತ್ತಾನೆ. ಈತನು ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಜನ್ಮಾಷ್ಟಮಿ ಪ್ರಯುಕ್ತ ನಡೆದ ಸ್ಪರ್ಧೆಯಲ್ಲಿ, ಅಲೆವೂರು ಗುಡ್ಡೆ ಅಂಗಡಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ನಡೆಸಿದ ಸಂಗೀತ ಸ್ಪರ್ಧೆಯಲ್ಲಿ, ವೀಣಾಧರಿ ಇನ್ಸ್ಟಿಟ್ಯೂಟ್ ಆಫ್ ಮ್ಯೂಸಿಕ್ ಇವರು ನಡೆಸಿದ ಆನ್ಲೈನ್ ಸಂಗೀತ ಸ್ಪರ್ಧೆಯಲ್ಲಿ, ತ್ರೀಚ್ಚೆ (ಕೇರಳ ) ಸಪ್ತ ಸ್ವರಂಗಳ್ ಇವರು ನಡೆಸಿದ ಸ್ಪರ್ಧೆಯಲ್ಲಿ, ‘ವಿದ್ಯೇಷ ನಾದ ವೈಭವಂ ‘ ಇವರು ನಡೆಸಿದ ಆನ್ಲೈನ್ ಸ್ಪರ್ಧೆಯಲ್ಲಿ, ಚಿನ್ಮಯ ನಾದ ಬಿಂದು ಪುಣೆ ಇವರ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ, ದಿ ಹಿಂದು ಮಾರ್ಗಳೀ ಸ್ಪರ್ಧೆ (ಚೆನ್ನೈ ), ಇಸ್ಕಾನ್ ಬೆಂಗಳೂರು ಪ್ರತಿಷ್ಠಾನ ಸ್ಪರ್ಧೆಯಲ್ಲಿ, ಆರ್ಟ್ ಆಫ್ ಲಿವಿಂಗ್ ಬೆಂಗಳೂರು ಆಶ್ರಯದಲ್ಲಿ ನಡೆದ ಕೊಳಲು ವಾದನ ಸ್ಪರ್ಧೆಯಲ್ಲಿ ಹೀಗೆ ಅನೇಕ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದಿರುತ್ತಾನೆ.

