ಉಡುಪಿ : ಶ್ರೀ ಮಹಾಗಣಪತಿ ದೇವಸ್ಥಾನ ಉಡುಪಿ ಮತ್ತು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ (ರಿ.) ಅರ್ಪಿಸುವ ‘ಮೌಲ್ಯ ಸುಧಾ -50’ ಸುವರ್ಣ ಮಾಲಿಕೆಯ ವಿಶೇಷ ಕಾರ್ಯಕ್ರಮವನ್ನು ದಿನಾಂಕ 11 ಜುಲೈ 2026ರಂದು ಸಂಜೆ 6-30 ಗಂಟೆಗೆ ಉಡುಪಿ ಜಿಲ್ಲೆಯ ಕಾರ್ಕಳ ಗಣಿತ ನಗರ, ಜ್ಞಾನಸುಧಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಷ್ಟ್ರದೇವೋಭಾವ ಖ್ಯಾತಿಯ ಮಂಗಳೂರಿನ ಸನಾತನ ನಾಟ್ಯಾಲಯ ಪ್ರಸ್ತುತ ಪಡಿಸುವ ‘ಸನಾತನ ರಾಷ್ಟ್ರಾಂಜಲಿ’ ಭರತನಾಟ್ಯ ಪ್ರದರ್ಶನ ನಡೆಯಲಿದೆ.

