ಮಂಗಳೂರು : ಮಂಗಳೂರಿನ ಶ್ರೀ ಕಿಶೋರ್ ರೇವಲಾಲ್ ರಾಜ್ ಇವರ ಚೊಚ್ಚಲ ಕಾದಂಬರಿ ಕೃತಿ ‘ಮೇರಿ ಖಾಮೋಶಿ, ಮೇರಿ ಆವಾಜ್’ ಇದರ ಲೋಕರ್ಪಣಾ ಸಮಾರಂಭವು ದಿನಾಂಕ 24 ನವೆಂಬರ್ 2024ರ ಭಾನುವಾರದಂದು ಸಂಜೆ ಘಂಟೆ 5.00 ರಿಂದ ಮಂಗಳೂರಿನ ನವಭಾರತ ವೃತ್ತದ ಬಳಿಯಿರುವ ಹೊಟೇಲ್ ಓಷಿಯನ್ ಪರ್ಲ್ ಇದರ ಪೆಸಿಫಿಕ್ 4 ಸಭಾಂಗಣದಲ್ಲಿ ನಡೆಯಲಿದೆ.
ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಈ ಕಾದಂಬರಿಯ ಲೋಕರ್ಪಣಾ ಸಮಾರಂಭದಲ್ಲಿ ‘ಸೇ ಗುಡ್ ಬೈ ಟು ಬೋರಿಂಗ್ ಲೈಫ್’ ಕೃತಿಯ ಲೇಖಕರಾದ ಶ್ರೀ ಗೋಕುಲ್ ರೂಪಾರೆಲಿಯ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

