ಸುಳ್ಯ : ಸಂಧ್ಯಾರಶ್ಮಿ ಸಾಹಿತ್ಯ ಸಂಘ ಸುಳ್ಯ ಮತ್ತು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸುಳ್ಯ ಹೋಬಳಿ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಸಾಹಿತಿ ಡಾ. ರಮಾನಂದ ಬನಾರಿಯವರ ಬಗ್ಗೆ ‘ತಿಂಗಳ ಸಾಹಿತ್ಯ ಸಂವಾದ ಮಾಲಿಕೆ’ ಕಾರ್ಯಕ್ರಮವನ್ನು ದಿನಾಂಕ 22 ಮಾರ್ಚ್ 2025ರಂದು ಪೂರ್ವಾಹ್ನ 10-30 ಗಂಟೆಗೆ ಕುರಂಜಿ ಬಾಗ್ ಸಂಧ್ಯಾರಶ್ಮಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಂಧ್ಯಾರಶ್ಮಿ ಸಾಹಿತ್ಯ ಸಂಘ ಇದರ ಅಧ್ಯಕ್ಷರಾದ ಶ್ರೀಮತಿ ಲೀಲಾ ದಾಮೋದರ ಅಧ್ಯಕ್ಷತೆ ವಹಿಸಲಿದ್ದು, ಸುಳ್ಯದ ಪ್ರತಿಭಾ ವಿದ್ಯಾಲಯ ಪ್ರಾಚಾರ್ಯರಾದ ವೆಂಕಟ್ರಾಮ್ ಭಟ್ ‘ವ್ಯಕ್ತಿತ್ವ ಪರಿಚಯ’, ಸಾಹಿತಿ ಹಾಗೂ ಪತ್ರಕರ್ತರಾದ ವಿರಾಜ್ ಅಡೂರು ‘ಮತ್ತೆ ಮತ್ತೆ ಶ್ರೀಕೃಷ್ಣ’, ಸಾಹಿತಿ ಕುಮಾರಸ್ವಾಮಿ ತೆಕ್ಕುಂಜ ‘ಕಾವ್ಯದಲ್ಲಿ ವ್ಯಕ್ತಿ ಚಿತ್ರಣ’, ವೈದ್ಯರಾದ ಡಾ. ವೀಣಾ ಇವರಿಂದ ‘ಆರೋಗ್ಯ ಗೀತೆಗಳು’ ಮತ್ತು ಕೆ.ಆರ್. ಗೋಪಾಲಕೃಷ್ಣ ಇವರಿಂದ ಗೀತ ಗಾಯನ ನಡೆಯಲಿದೆ.