ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘ ಬೊಳುವಾರು ಪುತ್ತೂರು ಇವರ ಸಂಯೋಜನೆಯಲ್ಲಿ ದಿನಾಂಕ 18 ಫೆಬ್ರವರಿ 2025ರ ಮಂಗಳವಾರ ಶ್ರೀ ಬಲಮುರಿ ವಿದ್ಯಾಗಣಪತಿ ದೇವಸ್ಥಾನದಲ್ಲಿ ತಿಂಗಳ ತಾಳಮದ್ದಲೆ ಕವಿ ದೇವಿದಾಸ ವಿರಚಿತ ‘ಭೀಷ್ಮ ಸೇನಾಧಿಪತ್ಯ’ ಆಖ್ಯಾನದೊಂದಿಗೆ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಬಟ್ಯಮೂಲೆ ಲಕ್ಷ್ಮೀ ನಾರಾಯಣ ಭಟ್, ನಿತೀಶ್ ಕುಮಾರ್ ಎಂಕಣ್ಣಮೂಲೆ ಹಾಗೂ ಚೆಂಡೆ ಮದ್ದಲೆಗಳಲ್ಲಿ ಟಿ.ಡಿ. ಗೋಪಾಲಕೃಷ್ಣ ಭಟ್ ಮತ್ತು ಮುರಲೀಧರ ಕಲ್ಲೂರಾಯ ಭಾಗವಹಿಸಿದರು. ಭೀಷ್ಮನಾಗಿ ಗುಡ್ಡಪ್ಪ ಬಲ್ಯ, ಕೌರವನಾಗಿ ವಿ.ಕೆ. ಶರ್ಮ ಅಳಿಕೆ, ದ್ರೋಣನಾಗಿ ಶಾರದಾ ಅರಸ್ ಹಾಗೂ ಕರ್ಣನಾಗಿ ಮಾಂಬಾಡಿ ವೇಣುಗೋಪಾಲ ಭಟ್ ಪಾತ್ರಗಳನ್ನು ಪೋಷಿಸಿದರು. ಭಾಸ್ಕರ ಬಾರ್ಯರ ಸಂಯೋಜನೆಯಲ್ಲಿ ನಡೆದ ಕಾರ್ಯಕ್ರಮವನ್ನು ವಿಜಯಶ್ರೀ ಶಾಮಿಯಾನದ ಮಾಲಕರಾದ ಮಂಜುನಾಥ ಭಟ್ ಪ್ರಾಯೋಜಿಸಿದರು. ವೇಣುಗೋಪಾಲ ಭಟ್ ಸ್ವಾಗತಿಸಿ, ದೇವಳದ ಮೇನೇಜರ್ ಸುಬ್ರಹ್ಮಣ್ಯ ಭಟ್ ವಂದಿಸಿದರು.