ಮುದ್ರಾಡಿ: ನಮ ತುಳುವೆರ್ ಕಲಾ ಸಂಘಟನೆ (ರಿ.) ನಾಟ್ಕದೂರು, ಮುದ್ರಾಡಿ ಯೋಜಿಸುವ 11ನೇ ವರ್ಷದ ‘ಮುದ್ರಾಡಿ ರಾಷ್ಟ್ರೀಯ ರಂಗೋತ್ಸವ’ ಕಾರ್ಯಕ್ರಮವು ದಿನಾಂಕ 03 ಏಪ್ರಿಲ್ 2025 ರಿಂದ 07 ಏಪ್ರಿಲ್ 2025ರ ವರೆಗೆ ಮುದ್ರಾಡಿಯ ಬಿ.ವಿ. ಕಾರಂತ ಬಯಲು ರಂಗಸ್ಥಳದಲ್ಲಿ ನಡೆಯಲಿದೆ.
ದಿನಾಂಕ 03 ಏಪ್ರಿಲ್ 2025ರಂದು ತೆಲುಗು ನಾಟಕ ‘ಮಾಯಾ ಬಜಾರ್’ ಪ್ರದರ್ಶನಗೊಳ್ಳಲಿದ್ದು, ದಿನಾಂಕ 04 ಏಪ್ರಿಲ್ 2025ಕ್ಕೆ ತೆಲುಗು ನಾಟಕ ‘ಪಾತಾಳ ಭೈರವಿ’ ಪ್ರದರ್ಶನಗೊಳ್ಳಲಿದೆ. ದಿನಾಂಕ 05 ಏಪ್ರಿಲ್ 2025ರಂದು ಕನ್ನಡದ ‘ಅಂಬೆ’ ನಾಟಕ ಪ್ರದರ್ಶನಗೊಳ್ಳಲಿದ್ದು, ದಿನಾಂಕ 06 ಏಪ್ರಿಲ್ 2025ರಂದು ತೆಲುಗು ನಾಟಕ ‘ಲವಕುಶ’ ಹಾಗೂ ದಿನಾಂಕ 07 ಏಪ್ರಿಲ್ 2025ರಂದು ತೆಲುಗು ನಾಟಕ ಭಕ್ತ ಪ್ರಹ್ಲಾದ ಪ್ರದರ್ಶನಗೊಳ್ಳಲಿದೆ ಎಂದು ನಮ ತುಳುವೆರ್ ಕಲಾ ಸಂಘಟನೆಯ ಅಧ್ಯಕ್ಷರಾದ ಶ್ರೀ ಸುಕುಮಾರ್ ಮೋಹನ್ ತಿಳಿಸಿದ್ದಾರೆ.

