ಮಂಗಳೂರು : ‘ಸಾಹಿತ್ಯ, ಸಂಸ್ಕೃತಿ, ಕಲೆ, ಸಂಘಟನೆ, ಸದ್ವಿಚಾರ’ ಎಂಬ ನೆಲೆಯಲ್ಲಿ ಸಾಹಿತ್ಯ ಪುಸ್ತಕಗಳ ಪ್ರಕಟಣೆ ಮತ್ತು ದೇಶ ವಿದೇಶಗಳಲ್ಲಿ ಸಾಹಿತ್ಯ ಪರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿರುವ ಕಲ್ಲಚ್ಚು ಪ್ರಕಾಶನ ಸಂಸ್ಥೆಯ ನೇತೃತ್ವದಲ್ಲಿ ಕರಾವಳಿಯ ಭಾಷ ಸೊಗಡಿನ ಕವಿಗೋಷ್ಠಿಯನ್ನು ದಿನಾಂಕ 17 ಡಿಸೆಂಬರ್ 2025ರಂದು ಮಂಗಳೂರಿನ ಕೊಟ್ಟಾರ ಕ್ರಾಸ್ ಇಲ್ಲಿರುವ ಟಿ.ಎಲ್.ಸಿ. ಕೆಫೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಬಹುಭಾಷಾ ಕವಿಗೋಷ್ಠಿಯಲ್ಲಿ ಏಳು ಮಂದಿ ಕವಿಗಳು ಭಾಗವಹಿಸಲಿದ್ದು, ದಕ್ಷಿಣ ಕನ್ನಡದ ಭಾಷಾ ಮತ್ತು ಸಾಂಸ್ಕೃತಿಕ ವೈವಿದ್ಯತೆಯನ್ನು ಆಚರಿಸುವ ಒಂದು ಸಂಜೆಯ ಕಾರ್ಯಕ್ರಮವಾಗಿದೆ.

