ಮುಂಬೈ: ವಾಮಂಜೂರು ತಿರುವೈಲಿನ ಶ್ರೀ ಅಮೃತೇಶ್ವರ ಯಕ್ಷಗಾನ ಪ್ರತಿಷ್ಠಾನವು ತನ್ನ 9ನೇ ವರ್ಷಾಚರಣೆಯ ಅಂಗವಾಗಿ ಜುಲೈ 01-07-2023ರಿಂದ 09-07-2023ರ ತನಕ ಮುಂಬೈ ಮಹಾನಗರದಲ್ಲಿ ‘ನವ ಯಕ್ಷ ಸಂಭ್ರಮ’ ಆಚರಿಸಲಿದ್ದು, ಪ್ರತಿದಿನ ಪ್ರತಿಷ್ಠಾನದ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಜು.01ರಂದು ಮುಂಬೈಯ ಘನ್ಸೋಲಿಯ ಶ್ರೀ ಮೂಕಾಂಬಿಕಾ ಮಂದಿರದಲ್ಲಿ,
ಜು.02ರಂದು ಡೊಂಬಿವಲಿಯ ನ೦ದಿ ಪ್ಯಾಲೇಸ್ ಹತ್ತಿರ ಇರುವ ಎಂಐಡಿಸಿನ ಹೊಟೇಲ್ ನಲ್ಲಿ
ಜು.03ರಂದು ಥಾಣೆಯ ಡಾ. ಕಾಶಿನಾಥ ಘಾನೆಕರ್ ನಾಟ್ಯಗೃಹದಲ್ಲಿ,
ಜು.04ರಂದು ಪನ್ವೇಲ್‌ನ ಭಗತ್ ವಾಡಿಯ ರಾಜೀವ್ ಗಾಂಧಿ ಮೈದಾನದ ಹತ್ತಿರ,
ಜು.05ರ೦ದು ನೆರೂಳ್ ನ ಶ್ರೀ ಶನಿ ಮಂದಿರದಲ್ಲಿ,
ಜು.06ರಂದು ಘನ್ಸೋಲಿಯ ಶ್ರೀ ಮೂಕಾಂಬಿಕಾ ಮಂದಿರದಲ್ಲಿ
ಜು.07ರಂದು ಮೀರಾ ರೋಡ್‌ನ ಸೈಂಟ್ ಥಾಮಸ್ ಚರ್ಚ್ ಸಭಾಗೃಹದಲ್ಲಿ,
ಜು.08ರಂದು ಐರೋಲಿಯ ಹೆಗ್ಡೆ ಭವನದಲ್ಲಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಜು.09ರ೦ದು ನವ ಮುಂಬೈಯ ಬಾಂಬೆ ಬಂಟ್ಸ್ ಅಸೋಸಿಯೇಶನ್‌ನಲ್ಲಿ ಯಕ್ಷಗಾನ ಹಾಗೂ ಸಮಾರೋಪ ಸಮಾರಂಭ ಜರುಗಲಿದೆ.
ಪ್ರತಿಷ್ಠಾನದ ಅಧ್ಯಕ್ಷ ದೀಪಕ್ ಶೆಟ್ಟಿ ಲಿಂಗಮಾರುಗುತ್ತು ತಮ್ಮೆಲ್ಲರಿಗೂ ಆತ್ಮೀಯ ಸ್ವಾಗತ ಕೋರಿದ್ದಾರೆ.