ಮಂಗಳೂರು : ಭಾರತೀಯ ವಿದ್ಯಾಭವನ ಮತ್ತು ರಾಮಕೃಷ್ಣಮಠದ ಸಹಯೋಗದೊಂದಿಗೆ ಸಂಗೀತ ಪರಿಷತ್ ಮಂಗಳೂರು ಆಯೋಜಿಸುವ ಸಂಗೀತ ವಿದ್ವಾನ್ ಎನ್. ಗೋಪಾಲಕೃಷ್ಣ ಐಯ್ಯರ್ ಸ್ಮರಣಾರ್ಥ ಸಂಗೀತ ಕಛೇರಿಯು ದಿನಾಂಕ 07-04-2024ರಂದು ಮಂಗಳೂರಿನ ಮಂಗಳಾದೇವಿಯಲ್ಲಿರುವ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ನಡೆಯಲಿದೆ.
ಸಂಜೆ 3.30ಕ್ಕೆ ಉಡುಪಿಯ ಕಡಿಯಾಳಿ ಸಹೋದರರಾದ ಪ್ರಭವ್ ಉಪಾಧ್ಯ ಮತ್ತು ಸೌರವ್ ಉಪಾಧ್ಯ ಅವರಿಂದ ಕೊಳಲು ವಾದನ ಕಛೇರಿಯು ನಡೆಯಲಿದ್ದು, ಧನಶ್ರೀ ಶಬರಾಯ ವಯೋಲಿನ್ ನಲ್ಲಿ ಹಾಗೂ ಪ್ರಣವ್ ಸುಬ್ರಹ್ಮಣ್ಯ ಮೃದಂಗದಲ್ಲಿ ಸಹಕರಿಸಲಿದ್ದಾರೆ.
ಬಳಿಕ ಬಾಲ ಪ್ರತಿಭೆ ಗಂಗಾ ಶಶಿಧರನ್ ಹಾಗೂ ಅವರ ಗುರುಗಳಾದ ಸಿ. ಎಸ್. ಅನುರೂಪ್ ಅವರಿಂದ ವಯೋಲಿನ್ ಕಚೇರಿ ನಡೆಯಲಿದ್ದು, ಕೆ. ಬಿ. ಗಣೇಶ್ ಮೃದಂಗದಲ್ಲಿ, ತ್ರಿಪುಣಿತ್ತುರ ಸಿ. ಎಚ್. ಶ್ರೀಕುಮಾರ್ ತವಿಲ್ ನಲ್ಲಿ , ವೆಲ್ಲಂತಂಜೂರ್ ಶ್ರೀಜಿತ್ ಘಟಂನಲ್ಲಿ ಸಹಕಾರ ನೀಡಲಿದ್ದಾರೆ.