ಮಂಗಳೂರು : ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ.) ಮತ್ತು ಸುರತ್ಕಲ್ ನಾಗರಿಕ ಸಲಹಾ ಸಮಿತಿ ಸಂಸ್ಥೆಗಳ ಆಶ್ರಯದಲ್ಲಿ ದಿನಾಂಕ 01 ಫೆಬ್ರುವರಿ 2026ರಂದು ಭಾನುವಾರ ಸಂಜೆ 5-00 ಗಂಟೆಗೆ ಸುರತ್ಕಲ್‌ನ ಶ್ರೀ ವಿಶ್ವೇಶತೀರ್ಥ ಸಭಾಂಗಣದಲ್ಲಿ ಎರಡು ಸಂಗೀತ ಕಛೇರಿಯನ್ನು ಆಯೋಜಿಸಲಾಗಿದೆ.
ಅಭಿರಾಜ್ ಮಯ್ಯ ಮತ್ತು ಅಭಯರಾಜ್ ಮಯ್ಯ ಇವರಿಂದ ವಯಲಿನ್ ವಾದನ ನಡೆಯಲಿದ್ದು, ಇವರಿಗೆ ಕೃಷ್ಣ ಪವನ್ ಕುಮಾರ್ ಮೃದಂಗದಲ್ಲಿ ಸಹಕರಿಸುವರು. ಬಳಿಕ ಉಡುಪಿಯ ಪ್ರಜ್ಞಾ ಅಡಿಗ ಇವರ ಹಾಡುಗಾರಿಕೆಗೆ ಕಾರ್ಕಳದ ಮಹತೀ ಕೆ. ವಯಲಿನ್‌ನಲ್ಲಿ, ಮಂಗಳೂರಿನ ಸುನಾದಕೃಷ್ಣ ಅಮೈ ಮೃದಂಗದಲ್ಲಿ ಹಾಗೂ ಉಡುಪಿಯ ಕಾರ್ತಿಕ್ ಭಟ್ ಖಂಜೀರದಲ್ಲಿ ಸಹಕರಿಸುವರು. ಸಂಗೀತ ಗುರು ವಾರಿಜಾಕ್ಷಿ ಆರ್. ಭಟ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಸಂಗೀತ ಕಛೇರಿಗೆ ಮುಕ್ತ ಪ್ರವೇಶವಿದ್ದು ಆಸಕ್ತರು ಪಾಲ್ಗೊಳ್ಳುವಂತೆ ಅಕಾಡೆಮಿಯ ಕಾರ್ಯದರ್ಶಿ ಪಿ. ನಿತ್ಯಾನಂದ ರಾವ್ ತಿಳಿಸಿದ್ದಾರೆ.

