ಬೆಂಗಳೂರು : ಶ್ರೀ ಮುರಳೀಧರ ಸಂಗೀತ ನೃತ್ಯ ಮಹಾವಿದ್ಯಾಲಯ (ರಿ.) ಹಾಗೂ ಮೋಹನ ತರಂಗಿಣಿ ಸಂಗೀತ ಸಭಾ ಇದರ ‘76ನೇ ವಾರ್ಷಿಕ ಸಂಗೀತ ನೃತ್ಯ ಸಂಭ್ರಮ ಹಾಗೂ ಶರಣ ನುಲಿಯ ಚಂದಯ್ಯ, ಬುದ್ಧ, ಬಸವ, ಡಾ. ಬಿ.ಆರ್. ಅಂಬೇಡ್ಕರ್ ಜಯಂತೋತ್ಸವದ ಪ್ರಯುಕ್ತ ದಿನಾಂಕ 13 ಮತ್ತು 14 ಏಪ್ರಿಲ್ 2025ರಂದು ಮಧ್ಯಾಹ್ನ 2-30 ಗಂಟೆಗೆ ವಿದ್ಯಾಲಯದ 2ನೇ ಮಹಡಿಯಲ್ಲಿ ‘ಅಮ್ಮನ ನೆನಪಿನಂಗಳದಲ್ಲಿ ಅಪ್ಪನ ಶತಮಾನೋತ್ಸವ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ದಿನಾಂಕ 13 ಏಪ್ರಿಲ್ 2025ರಂದು ಕೀರ್ತಿಶೇಷರಾದ ಶ್ರೀಮತಿ ಶಾರದಮ್ಮ ಗುರು ಕರ್ನಾಟಕ ಕಲಾಶ್ರೀ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿದ್ವಾನ್ ಗಾಮದ ಶ್ರೀ ಕೆ. ಮಂಜಪ್ಪರವರ ಸ್ಮರಣಾರ್ಥ ‘ಮಂಜುದಾಸ ರಾಜ್ಯ ಪ್ರಶಸ್ತಿ’ಯನ್ನು ಖ್ಯಾತ ಸಂಗೀತ ನಿರ್ದೇಶಕರು ಶ್ರೀ ವಿ. ಮನೋಹರ ಇವರಿಗೆ ಪ್ರದಾನ ಮಾಡಲಾಗುವುದು. ವಿದುಷಿ ಶ್ರೀಮತಿ ಕೆ.ಎಸ್. ದಾಕ್ಷಾಯಣಿ ರಾಜಕುಮಾರ, ವಿದುಷಿ ಶ್ರೀಮತಿ ಕೆ.ಎಸ್. ದಮಯಂತಿ ರಾಮಸ್ವಾಮಿ ಹಾಗೂ ವಿದ್ಯಾರ್ಥಿಗಳಿಂದ ದಾಸವಾಣಿ, ವಿದುಷಿ ಶ್ರೀಮತಿ ಲೀನಾ ದತ್ತಾತ್ರೇಯ ಫಡ್ನಾವಿಸ್ ಇವರ ಹಿಂದೂಸ್ಥಾನಿ ಗಾಯನಕ್ಕೆ ವಿದುಷಿ ಶ್ರೀಮತಿ ಮನೋರಮಾ ಹೆಗ್ಗಡೆ ಹಾರ್ಮೋನಿಯಂ ಮತ್ತು ವಿದ್ವಾನ್ ಶ್ರೀ ಶಶಾಂಕ್ ತಬಲ ಸಾಥ್ ನೀಡಲಿದ್ದಾರೆ. ಪ್ರಶಸ್ತಿ ಪುರಸ್ಕೃತ ಕಲಾವಿದರಾದ ಡಾ. ಹೆಚ್.ಆರ್. ಸ್ವಾಮಿ, ಡಾ. ಎ.ವಿ. ಪ್ರಸನ್ನ, ಡಾ. ಎನ್. ಸಂಧ್ಯ, ಪಂಡಿತ್ ಡಾ. ಸತೀಷ್ ಹಂಪಿಹೊಳಿ, ವಿದ್ವಾನ್ ಶ್ರೀ ಎಸ್.ವಿ. ನಾರಾಯಣಸ್ವಾಮಿ, ವಿದ್ವಾನ್ ಶ್ರೀ ಸಿ. ಮಧುಸೂದನ, ಶ್ರೀ ನರಹರಿ ದೀಕ್ಷಿತ್, ಶ್ರೀ ರವೀಂದ್ರ ನರಹರಿ ಇವರಿಂದ ಕಾರ್ಯಕ್ರಮ.
ದಿನಾಂಕ 14 ಏಪ್ರಿಲ್ 2025ರಂದು ಬೆಂಗಳೂರು ಕರ್ನಾಟಕ ಸಂಗಿತ ನೃತ್ಯ ಅಕಾಡಮಿಯ ಅಧ್ಯಕ್ಷರಾದ ಶ್ರೀಮತಿ ಶುಭ ಧನಂಜಯ, ಪ್ರಸಿದ್ಧ ಪಿಟೀಲು ವಿದ್ವಾಂಸರು ವಿದ್ವಾನ್ ಶ್ರೀ ಎಂ.ಎಸ್. ಗೋವಿಂದಸ್ವಾಮಿ ಮತ್ತು ಶ್ರೀ ಮುರಳೀಧರ ಸಂಗೀತ ವಿದ್ಯಾಲಯದ ಅಧ್ಯಕ್ಷರಾದ ವಿದುಷಿ ಶ್ರೀಮತಿ ಕೆ.ಎಸ್. ಹೇಮಾವತಿ ಇವರ ಉಪಸ್ಥಿತಿಯಲ್ಲಿ ಡಾ. ವಿದ್ಯಾಲಕ್ಷ್ಮಿ ಮತ್ತು ಕುಮಾರಿ ಗೌರಿ ಮನೋಹರಿ ಹಾಗೂ ಶ್ರೀರಂಗರಾಂ ಆರ್ಟ್ಸ್ ಫೌಂಡೇಷನ್ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ. ಪ್ರಶಸ್ತಿ ಪುರಸ್ಕೃತ ಕಲಾವಿದರಾದ ವಿದ್ವಾನ್ ಶ್ರೀ ಎಸ್.ಪಿ. ಪಳನಿವೇಲು, ವಿದುಷಿ ಶ್ರೀಮತಿ ಆರ್. ಪ್ರಭಾವತಿ, ವಿದ್ವಾನ್ ಶ್ರೀ ಟಿ.ಆರ್. ಶ್ರೀನಾಥ್, ವಿದ್ವಾನ್ ಶ್ರೀ ಆರ್.ಕೆ. ಶಂಕರ್, ವಿದ್ವಾನ್ ಶ್ರೀ ಶ್ರೀನಿವಾಸ ಅನಂತ ರಾಮಯ್ಯ, ವಿದ್ವಾನ್ ಡಾ. ಕೆ. ಕುಮಾರ, ಶ್ರೀ ರವಿ ಐತುಮನೆ, ವಿದ್ವಾನ್ ಡಾ. ಕೆ. ಸುರೇಶ ಇವರಿಂದ ಕಾರ್ಯಕ್ರಮ ಪ್ರಸ್ತುತಗೊಳ್ಳಲಿದೆ.