Subscribe to Updates

    Get the latest creative news from FooBar about art, design and business.

    What's Hot

    ಸೋಮವಾರಪೇಟೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ರಾಷ್ಟ್ರಕವಿ ಕುವೆಂಪು ಪುತ್ಥಳಿ ಅನಾವರಣ

    October 25, 2025

    ಶ್ರೀ ವೀರಾಂನೇಯ ಸ್ವಾಮಿ ದೇವಸ್ಥಾನದಲ್ಲಿ ‘ದೀಪಾವಳಿ ಕುಟುಂಬ ಮಿಲನ’ | ಅಕ್ಟೋಬರ್ 31

    October 25, 2025

    ಉಪ್ಪಿನಂಗಡಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ‘ಕನ್ನಡ ಕಲರವ -3’ | ನವೆಂಬರ್ 01

    October 25, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಸಂಗೀತ ವಿಮರ್ಶೆ | ಮಳೆರಾಗಗಳ ‘ರಿಮ್‌ಜಿಮ್’ ಸಂಗೀತ ಕಾರ್ಯಕ್ರಮ
    Article

    ಸಂಗೀತ ವಿಮರ್ಶೆ | ಮಳೆರಾಗಗಳ ‘ರಿಮ್‌ಜಿಮ್’ ಸಂಗೀತ ಕಾರ್ಯಕ್ರಮ

    September 3, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಶ್ರಾವಣದ ಸಂಜೆ. ಧೋ ಎಂದು ಸುರಿದ ಮಳೆ ಕೆಲವೇ ನಿಮಿಷಗಳಲ್ಲಿ ಗತಿ ಬದಲಿಸಿ ಸೋನೆಯಾಗಿ ಜಿನುಗತೊಡಗಿತ್ತು. ಅಷ್ಟರಲ್ಲಿ ಮೋಡ ಕಪ್ಪಿಟ್ಟು ಮತ್ತೊಂದು ಜಲಧಾರೆಗೆ ಸಿದ್ಧತೆ ನಡೆಸಿತ್ತು. ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನ ಫಾದರ್ ಎಲ್.ಎಫ್.ರಸ್ಕಿನ್ಹ ಸಭಾಂಗಣದಲ್ಲಿ ಮೋಹಕ ಆಲಾಪವು ‘ಜೋಡ್‌’ನಲ್ಲಿ ಲಯವನ್ನು ಸಂಧಿಸಿ ‘ಜಾಲಾ’ದತ್ತ ಜಾರಿತ್ತು. ತಾಳದ ಜಾಡು ಹಿಡಿಯಲು ಸಜ್ಜಾಗಿದ್ದ ಶ್ರೋತೃಗಳು ರಸಯಾತ್ರೆಗೆ ಮನಸನ್ನು ಶ್ರುತಿಗೊಳಿಸುತ್ತಿದ್ದರು.

    ಮಂಗಳೂರಿನಲ್ಲಿ ದಿನಾಂಕ 25 ಆಗಸ್ಟ್ 2024ರಂದು ನಡೆದ ‘ರಿಮ್‌ಜಿಮ್’ ಸಂಗೀತ ಕಾರ್ಯಕ್ರಮ ಸಂಗೀತ ಪ್ರೇಮಿಗಳ ಮನಸೂರೆಗೊಂಡಿತು. ಮುಂಬೈಯ ಸತ್ಯೇಂದ್ರಸಿಂಗ್ ಅವರ ಸಂತೂ‌ರ್ ವಾದನ ಮತ್ತು ಧಾರವಾಡದ ಸುಜಯೀಂದ್ರ ಅವರ ಗಾಯನ ಮಳೆ ರಾಗಗಳ ರಸ ಉಣಿಸಿತು.

    ಮಂಗಳೂರಿನ ಸಂಗೀತ ಭಾರತಿ ಪ್ರತಿಷ್ಠಾನ ಆಯೋಜಿಸಿದ್ದ ವಾದನ ಮತ್ತು ಗಾಯನ ಕಾರ್ಯಕ್ರಮ ‘ರಿಮ್‌ಜಿಮ್’ ತಣ್ಣಗಿನ ಸಂಜೆಯಲ್ಲಿ ಮಳೆರಾಗಗಳ ಬಿಸುಪು ನೀಡಿ ರಸಿಕರನ್ನು ಪುಳಕಗೊಳಿಸಿತು. ಸಂತೂರ್‌ನಲ್ಲಿ ಮುಂಬೈಯ ಸತ್ಯೇಂದ್ರ ಸಿಂಗ್ ಅವರು ‘ರಾಗ್ ಮೇಫ್’ ನುಡಿಸಿ ಕೋಮಲ ಶುದ್ಧ ಸ್ವರಗಳ ಲಾಲಿತ್ಯ ಪರಿಚಯಿಸಿದರು. ಗಾಯನ ಪ್ರಸ್ತುತಪಡಿಸಿದ ಹುಬ್ಬಳ್ಳಿಯ ಸುಜಯೀಂದ್ರ ಕುಲಕರ್ಣಿಯವರು ಮಿಯಾ ಮಲ್ಹಾರ್ ಹಾಡಿ ಶುದ್ಧ ನಿಶಾದದಲ್ಲಿ ಮೂಡುವ ಚೆಲುವನ್ನು ಬಿಂಬಿಸಿದರು.

    ಅಜ್ರಾಡ ಘರಾಣೆಯ ಕುಡಿ ಸತ್ಯೇಂದ್ರ ಸಿಂಗ್, ಹಿರಿಯ ಸಹೋದರ ರಾಮೇಂದ್ರ ಸಿಂಗ್ ಸೋಳಂಕಿ ಅವರ ತಬಲಾ ಸಾಥ್ ಕಛೇರಿಯ ರಂಗು ಹೆಚ್ಚಿಸಿತು. ಸುಜಯೀಂದ್ರ ಅವರಿಗೂ ರಾಮೇಂದ್ರ ಅವರದೇ ಸಾಥ್. ಹಾರ್ಮೋನಿಯಂನಲ್ಲಿ ಮೋಡಿ ಮಾಡಲು ತೇಜಸ್ ಕಾಟೋಟಿ ಇದ್ದರು. ನಾಲ್ವರು ಯುವ ಕಲಾವಿದರು ಅವಿಸ್ಮರಣೀಯವಾಗಿಸಿದ ಆ ಸಂಜೆ ಕೆಲಕಾಲ ಮೆಲುಕು ಹಾಕಲು ಸಂಗೀತಪ್ರಿಯರಿಗೆ ಲಭಿಸಿದ ಅಪರೂಪದ ಉಡುಗೊರೆ.

    ಒಂದು ತಾಸು ಸಂತೂರ್‌ನಲ್ಲಿ ಲಯಲಾಸ್ಯವಾಡಿದ ಸತ್ಯೇಂದ್ರ ಸಿಂಗ್ ಮೇಫರಾಗದ ರಸವನ್ನು ಸಂಪೂರ್ಣ ಮೊಗೆದುಕೊಟ್ಟರು. ಶತತಂತಿ ವೀಣೆ ಎಂದೇ ಹೆಸರಾಗಿರುವ ಸಂತೂರ್‌ನಲ್ಲಿ ಸ್ವರದಿಂದ ಸ್ವರಕ್ಕೆ ಜಾರುವ ಸಂದರ್ಭ ಅತ್ಯಂತ ಕ್ಲಿಷ್ಟ ಎಂಬುದು ಸಂಗೀತಜ್ಞರ ಅಭಿಪ್ರಾಯ. ಅದು ಶೋತೃಗಳ ಅನುಭವಕ್ಕೆ ಬಾರದಂತೆ ಶ್ರುತಿಯೊಂದಿಗೆ ಲೀನವಾಗಿ ಲಯಕಾರಿ ಶೈಲಿಯನ್ನು ನುಡಿಸಿದ ಸತ್ಯೇಂದ್ರ ಸಿಂಗ್‌ ಸಾಂಪ್ರದಾಯಿಕ ಆಲಾಪ್, ಜೋಡ್ ಮತ್ತು ಜಾಲಾದ ಮೂಲಕವೇ ಕೃತಿಗಳಿಗೆ ಪ್ರವೇಶ ಮಾಡಿದರು.

    ಆಲಾಪ್‌ನಲ್ಲಿ ಸೂಕ್ಷ್ಮ ನುಡಿಸಾಣಿಕೆಯ ಮೂಲಕ ಕಲ್ಪನಾ ಸ್ವರಗಳನ್ನು ವಿಸ್ತರಿಸಿ ಮಳೆಯ ಹನಿಗಳು ಜಿನುಗಿದಂಥ ಸನ್ನಿವೇಶ ಸೃಷ್ಟಿಸಿದ ಅವರು ಜಪ್ ತಾಳ್ ಮತ್ತು ತೀನ್ ತಾಲ್‌ನಲ್ಲಿ ಕೃತಿಗಳ ಪ್ರಸ್ತುತಿ ವೇಳೆ ತಂತಿಗಳ ಮೇಲೆ ಕಲಂ ಬೀಸುವಿಕೆಯ ನೈಪುಣ್ಯ ಪ್ರದರ್ಶಿಸಿ ಬಿರುಮಳೆ ಸುರಿದ ಅನುಭವ ನೀಡಿದರು.

    ತಬಲಾ ಮತ್ತು ಗಿಟಾರ್ ಕಲಾವಿದರೂ ಆಗಿರುವ ಸುಜಯೀಂದ್ರ ಕುಲಕರ್ಣಿ ಪ್ಯೂಷನ್ ಸಂಗೀತದ ಮೂಲಕ ಗಮನ ಸೆಳೆದಿದ್ದಾರೆ. “ಈಗ ಸಂಪೂರ್ಣವಾಗಿ ಶಾಸ್ತ್ರೀಯ ಸಂಗೀತಕ್ಕೇ ಸಮಯ ಮೀಸಲಿಟ್ಟದ್ದೇನೆ” ಎಂದು ಅವರು, ಮಳೆರಾಗ ಮಿಯಾ ಮಲ್ಹಾರ್‌ನಲ್ಲಿ ಸಾಂಪ್ರದಾಯಿಕ ಶೈಲಿ ಮುರಿದು ಚೋಟಾ ಖ್ಯಾಲ್ ಮಾತ್ರ ಪ್ರಸ್ತುತಪಡಿಸಿದರು. ಮಧುರ ಆಲಾಪದಲ್ಲೇ ಶ್ರೋತೃಗಳ ಮೇಲೆ ರಾಗದ ಹನಿ ಚೆಲ್ಲಿದ ಅವರು ಧೃತ್ ಗತ್‌ನಲ್ಲಿ ಎರಡು ಕೃತಿಗಳನ್ನು ಪ್ರಸ್ತುತಪಡಿಸಿದರು. ತೀನ್ ತಾಳ್‌ನಲ್ಲಿ ಹಾಡಿದ ‘ಫರ್ ಅಯೇ ಬಾದರ್‌ವಾ…’ ಲಯಬದ್ಧವಾಗಿ ಸುರಿಯುವ ಮಳೆಯ ಅನುಭವ ನೀಡಿದರೆ ಅತಿಧ್ವತ್‌ನಲ್ಲಿದ್ದ ‘ಅತ ಧೂಮರೆ ಅತ ಆಯಿ ಬದರಿಯಾ…’ ಮತ್ತೊಮ್ಮೆ ಬಿರುಸು ಮಳೆಯಂತೆ ಆವರಿಸಿಕೊಂಡಿತು.

    ಸುಜಯೀಂದ್ರ ಅವರು ಮಾಲ್ಕೌನ್ಸ್ ಮತ್ತು ಭೈರವಿಯ ರಸಾನುಭವವನ್ನೂ ನೀಡಿದ್ದರು. ತಡರಾತ್ರಿಯ ರಾಗ ಮಾಲ್ಕೌನ್ಸ್ ನ ಪಾರಂಪರಿಕ ಬಂದಿಶ್ ‘ಪಗ್ ಲಾಗನ್ ದೆ…’ ಪ್ರಸ್ತುತಪಡಿಸಿದ ನಂತರ ಧೃತ್‌ ಗತ್‌ನಲ್ಲಿ ‘ಸೂರತ್ ಆಜ್…’ ಮತ್ತು ‘ಅಜ್ ಮೋರೆ ಫರ್ ಆಯೆ ನ ಬಲಮಾ…’ದ ಮೂಲಕ ಸಂಜೆಯಲ್ಲೂ ರಾತ್ರಿಯ ರಂಗು ಮೂಡಿಸಿದರು. ಭೈರವಿ ರಾಗದ ದಾಸರ ಪದದೊಂದಿಗೆ ಕಾರ್ಯಕ್ರಮಕ್ಕೆ ಸಾಂಪ್ರದಾಯಿಕವಾಗಿಯೇ ತೆರೆ ಎಳೆದರು.

    ವಿಕ್ರಂ ಕಾಂತಿಕೆರೆ
    ಹಿರಿಯ ಉಪಸಂಪಾದಕ

    Share. Facebook Twitter Pinterest LinkedIn Tumblr WhatsApp Email
    Previous Article2024ನೇ ಸಾಲಿನ ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿಗೆ ಹಸ್ತಪ್ರತಿಗಳ ಆಹ್ವಾನ | 25 ಅಕ್ಟೋಬರ್
    Next Article ಧಾರವಾಡದಲ್ಲಿ ರಂಗಾಸಕ್ತರೊಂದಿಗೆ ಸಂವಾದ ಕಾರ್ಯಕ್ರಮ
    roovari

    Comments are closed.

    Related Posts

    ಶ್ರೀ ವೀರಾಂನೇಯ ಸ್ವಾಮಿ ದೇವಸ್ಥಾನದಲ್ಲಿ ‘ದೀಪಾವಳಿ ಕುಟುಂಬ ಮಿಲನ’ | ಅಕ್ಟೋಬರ್ 31

    October 25, 2025

    ಶ್ರೀ ಎಡನೀರು ಮಠದಲ್ಲಿ ‘ಸಾವಿರದ ಗಾನಕೋಗಿಲೆಗೆ ಸಾವಿರದ ಗೌರವ’ | ಅಕ್ಟೋಬರ್ 28

    October 25, 2025

    ಪ್ರೇಕ್ಷಕರನ್ನು ಬೆರಗುಗೊಳಿಸಿದ ಗೋಕುಲಂ ಗೋಶಾಲಾ ಸಂಗೀತೋತ್ಸವ

    October 25, 2025

    ಸ್ವರಚಿನ್ನಾರಿಯಿಂದ ಪ್ರತಿಭಾನ್ವಿತ ಕರೋಕೆ ಗಾಯಕರ ಸಮ್ಮಿಲನ ‘ಅಂತರ್ಧ್ವನಿ -10’ | ಅಕ್ಟೋಬರ್ 26

    October 24, 2025

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.