ತುಮಕೂರು : ನಾಟಕ ಮನೆ ತುಮಕೂರು ಇವರು ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸುವ ಎರಡು ದಿನಗಳ ನಾಟಕೋತ್ಸವ ಕಾರ್ಯಕ್ರಮವು ದಿನಾಂಕ 13 ಮತ್ತು 14 ಫೆಬ್ರವರಿ 2925ರಂದು ತುಮಕೂರಿನ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ತಡೆಯಲಿದೆ.
ದಿನಾಂಕ 13 ಫೆಬ್ರವರಿ 2025ರ ಗುರುವಾರದಂದು ಮೇದೂರು ತೇಜ ರಚನೆ ಹಾಗೂ ಧೀಮಂತ್ ರಾಮ್ ನಿರ್ದೇಶನದದಲ್ಲಿ ಸರ್ಕಾರಿ ಕಲಾ ಕಾಲೇಜು ಚಿತ್ರದುರ್ಗ ಇಲ್ಲಿನ ವಿದ್ಯಾರ್ಥಿಗಳು ಅಭಿನಯಿಸುವ ದಯಾನದಿ ದಂಡೆಯ ಮೇಲೆ ನಾಟಕ ಪ್ರದರ್ಶನಗೊಳ್ಳಲಿದ್ದು, ದಿನಾಂಕ 14 ಫೆಬ್ರವರಿ 2025ರಂದು ಮಂಡ್ಯ ರಮೇಶ್ ಇವರ ಮರುರೂಪ, ವಿನ್ಯಾಸ ಮತ್ತು ನಿರ್ದೇಶನದಲ್ಲಿ ‘ನಟನ’ ಮೈಸೂರು ಅಭಿನಯಿಸುವ ಚೋರ ಚರಣದಾಸ ನಾಟಕ ಪ್ರದರ್ಶನ ಗೊಳ್ಳಲಿದೆ.

