ಧಾರವಾಡ : ಗದಗ, 4ನೇ ಕ್ರಾಸ್, ಪಂಚಾಕ್ಷರಿ ನಗರದಲ್ಲಿರುವ ಕಲಾ ವಿಕಾಸ ಪರಿಷತ್ (ರಿ.) ಮತ್ತು ಶ್ರೀ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಮಿತಿ ಇದರ ಸಂಯುಕ್ತ ಆಶ್ರಯದಲ್ಲಿ ಕಲಾ ವಿಕಾಸ ಪರಿಷತ್ ನ 25 ನೆಯ ಕನ್ನಡ ರಾಜ್ಯೋತ್ಸವ ‘ನಾಡ ದೇವಿಗೆ ನಮನ’ ಕಾರ್ಯಕ್ರಮವನ್ನು ದಿನಾಂಕ 14 ಡಿಸೆಂಬರ್ 2025ರಂದು ಬೆಳಿಗ್ಗೆ 10-00 ಗಂಟೆಗೆ ಗದಗದ ಶ್ರೀ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಲಾಗಿದೆ. ಪ್ರಶಸ್ತಿ ಪ್ರದಾನ, ಸಂಗೀತ ಮತ್ತು ನೃತ್ಯ ನಮನ ಕಾರ್ಯಕ್ರಮ ನಡೆಯಲಿದೆ.
ಕಲಾ ವಿಕಾಸ ಪರಿಷತ್ ರಜತ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ವಿ.ಕೆ. ಗುರುಮಠ ಇವರ ಅಧ್ಯಕ್ಷತೆಯಲ್ಲಿ ಕಲಾಪೋಷಕರಾದ ಸದಾಶಿವಯ್ಯ ಎಸ್. ಮದರಿಮಠ ಇವರು ಈ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಗದಗ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷರಾದ ವಿವೇಕಾನಂದ ಗೌಡ ಪಾಟೀಲ ಇವರು ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಸಾಧಕರನ್ನು ಸನ್ಮಾನಿಸಲಾಗುವುದು ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ‘ಕನ್ನಡ ಸಿರಿ’, ‘ಶ್ರೇಷ್ಠ ಕೃತಿ ರತ್ನ’, ‘ಅಭಿನಂದನಾ ಪ್ರಶಸ್ತಿ’ ಮತ್ತು ‘ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು. ಸಂಜೆ 6-00 ಗಂಟೆಗೆ ವಿಶೇಷ ಸಂಗೀತ ಸಭೆ ನಡೆಯಲಿದ್ದು, ಪಂಡಿತ್ ವೆಂಕಟೇಶ ಆಲ್ಕೋಡ್ ಇವರ ಗಾಯನಕ್ಕೆ ಯುವ ಕಲಾವಿದ ರಾಘವೇಂದ್ರ ಕೃಷ್ಣಾಜಿ ಕ್ಷತ್ರಿಯ ಭಾನ್ಸುರಿಯಲ್ಲಿ ಸಹಕರಿಸಲಿದ್ದಾರೆ ಹಾಗೂ ಶ್ರೀಮತಿ ಸವಿತಾ ಗುಡ್ಡದ ಸುಗಮ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ.

