24 ಫೆಬ್ರವರಿ 2023, ಬೆಂಗಳೂರು: ಮಹೇಶ್ ಎಸ್. ಪಲ್ಲಕ್ಕಿಯವರ ನಿರ್ದೇಶನದ ಸಂಸರ ಮೂಲ ರಚನೆಯಾದ ‘ಭಾವರಂಗ ತಂಡ’ದ ಅಭಿನಯದಲ್ಲಿ “ಬಿರುದಂತೆಂಬರ ಗಂಡ” ಕನ್ನಡ ನಾಟಕ, ನಟನಾ ರಂಗ ಶಾಲೆ ಮೈಸೂರಿನಲ್ಲಿ ಫೆಬ್ರವರಿ 26ಕ್ಕೆ ಸಂಜೆ 5 ಗಂಟೆಗೆ ಪ್ರದರ್ಶನ ಕಾಣಲಿದೆ.
ಬಿರುದಂತೆಂಬರಗಂಡ ನಾಟಕದ ಸಾರಾಂಶ
ಕನ್ನಡ ನಾಟಕ ಕ್ಷತ್ರದ ಶೇಕ್ಸ್ ಪಿಯರ್ ಯೆಂದು ಪ್ರಸಿದ್ದರಾದ ಸಂಸರವರು ಬರೆದಿರುವ ನಾಟಕ, ಬಿರುದಂತೆಂಬರಗಂಡ. ಈ ನಾಟಕ 1572-1575 ಇಸವಿಯ ಕಾಲಘಟ್ಟದಾಗಿದ್ದು,ಒಡೆಯರ್ ರಾಜವಂಶದಲ್ಲಿ ಮೊಟ್ಟಮೊದಲ ಬಾರಿಗೆ ರಾಜಪ್ರಭುತ್ವ ಸಾಧಿಸಿದ,ಶ್ರೀ ಇಮ್ಮಡಿ ತಿಮ್ಮರಾಜ ಒಡೆಯರ್ ಅವರ ಕಥೆಯಾಗಿದೆ. ಕೇವಲ ವ್ಯಾಪಾರಿಯಾಗಿದ್ದ ರಾಜನ ಭಕ್ತ, ಇನ್ನೊಂದು ರಾಜ್ಯದ ರಾಜನ ಮೇಲೆ ಯುದ್ಧಕ್ಕೆ ಹೋಗಿ,ಕೊನಗೆ ಆ ಊರಿನ ರಾಣಿಯ ಮುಂದೆ ಅವನು ಮಾಡಿದ ಉದ್ದತ್ತಿಕೆಯ ಉತ್ಸಾಹ ಮೆರವಣಿಗೆಗೆ ಅವನ ಮೊಣಕಾಲುಗಳ ಮೇಲೆ ನಿಂತು ಕ್ಷಮೆ ಬೇಡುವಂತಾಯಿತು. ಆದರೆ ಇದು ಯಾಕೆ ಸಂಭವಿಸಿತು? ರಾಜನ ಮರ್ಯಾದೆಯನ್ನು ರಕ್ಷಿಸುತ್ತಿರುವಾಗ ಕ್ಷಮೆಯನ್ನು ಬೇಡಲು ರಾಜನು ತನ್ನ ಅಪ್ಪಟ ಪ್ರಜೆಯನ್ನು ಏಕೆ ಶಿಕ್ಷೆಗೆ ಒಳಪಡೆಸಿದನು ಎಂಬುದು ಈ ನಾಟಕದ ಕಥೆಯಾಗಿದೆ.