22 ಫೆಬ್ರವರಿ 2023, ಮೈಸೂರು: ಬಿರುಬೇಸಿಗೆಯ ಧಗೆಯಲ್ಲಿ ತೂರಿಬಂದ ಮಳೆಯ ತಿಳಿ ತಂಗಾಳಿಯ ಸಿಂಚನದಂತೆ ಮಕ್ಕಳ ನಗೆ, ಅದಕ್ಕೊಂದು ಕಲೆಯ ಚೌಕಟ್ಟು. ನಲಿವಿನಲ್ಲೇ ನಡೆವ ಕಲಿಕೆಯ ತಿಂಗಳ ಸಂಭ್ರಮ ‘ರಜಾಮಜಾ’.
ಎಪ್ರಿಲ್ 12ರಿಂದ ಮೇ 07ರವರೆಗೆ ನಡೆಯುವ ಮಕ್ಕಳ ಈ ಸಡಗರದ ಶಿಬಿರ. ನೂರಾರು ಮಕ್ಕಳ ವೈವಿಧ್ಯಮಯ ಕಲೆಯ ಮುಖಗಳನ್ನು ಅಪ್ಪ-ಅಮ್ಮಂದಿರಿಗೆ, ಬಂಧು-ಮಿತ್ರರಿಗೆ ಮತ್ತು ಬಾಳುವ ಈ ಸಮಾಜಕ್ಕೆ ಸರಳವಾಗಿ ದಾಖಲಿಸುತ್ತಾ ಹೋಗುತ್ತದೆ.
ನಮ್ಮ ಕನ್ನಡ ಜಾನಪದದ ಪ್ರಖರ ಶಕ್ತಿಯನ್ನು ಆಧುನಿಕ ರಂಗಭೂಮಿಗೆ ದಾಟಿಸುವ ಆರಂಭದ ಕಲಿಕೆಯ ಶಿಬಿರವಿದು.
ಎರಡು ದಶಕಗಳ ಸುದೀರ್ಘ ಯಾನದ ಅನುಭವವೂ ಇದರೊಂದಿಗಿದೆ. ತಿಂಗಳಿಡೀ ಮಕ್ಕಳು ಹಲವು ಸಾಧಕರೊಂದಿಗೆ, ಶ್ರೇಷ್ಠ ಸಂಪನ್ಮೂಲರೊಂದಿಗೆ , ಹೊಸ ಗೆಳೆಯ-ಗೆಳತಿಯರೊಂದಿಗೆ ಒಡನಾಡುತ್ತಾ, ಪರಸ್ಪರ ಸಂತೋಷವನ್ನು ಹಂಚಿಕೊಳ್ಳುತ್ತಾ ಸಾಗುವುದನ್ನು ಮತ್ತು ಅರಳುವುದನ್ನು ಗಮನಿಸುವುದೇ ಒಂದು ಚಂದ.
ವಿವರಗಳಿಗಾಗಿ ಸಂಪರ್ಕಿಸಿ: 9480468327, 7259537777, 9845595505, 0821- 2564455
Subscribe to Updates
Get the latest creative news from FooBar about art, design and business.
ಮೈಸೂರಿನಲ್ಲಿ ಮಂಡ್ಯ ರಮೇಶ್ ನೇತೃತ್ವದ ಮಕ್ಕಳ ಬೇಸಿಗೆ ಶಿಬಿರ “ರಜಾಮಜಾ – 2023”
Previous Articleವಿಭಿನ್ನ ಪರಿಕಲ್ಪನೆಯ “ನಾಟ್ಯಾಯನ” – ವಿಶಿಷ್ಟ ನೃತ್ಯ ಕಾರ್ಯಕ್ರಮ