ಕೋಣಾಜೆ : ಮಂಗಳೂರು ವಿಶ್ವವಿದ್ಯಾನಿಲಯ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ ಮಂಗಳಗಂಗೋತ್ರಿ ಇದರ ವತಿಯಿಂದ ‘ಕನ್ನಡ ಮಾಧ್ಯಮ ಕ್ಷೇತ್ರ ಅವಕಾಶಗಳು ಮತ್ತು ಕೌಶಲ್ಯಗಳು’ ರಾಷ್ಟ್ರೀಯ ಕಾರ್ಯಾಗಾರವನ್ನು ದಿನಾಂಕ 07, 08 ಮಾತು 09 ಮೇ 2025ರಂದು ಬೆಳಗ್ಗೆ 10-00 ಗಂಟೆಗೆ ಯು.ಆರ್. ರಾವ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 07 ಮೇ 2025ರಂದು ಈ ಕಾರ್ಯಾಗಾರವನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಪಿ.ಎಲ್. ಧರ್ಮ ಇವರ ಅಧ್ಯಕ್ಷತೆಯಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ನಿರಂಜನ ವಾನಳ್ಳಿ ಇವರು ಉದ್ಘಾಟನೆ ಮಾಡಲಿದ್ದಾರೆ. ‘ನುಡಿಚಿತ್ರ ಸ್ವರೂಪ ಮತ್ತು ಬರವಣಿಗೆ’ ಎಂಬ ವಿಷಯದ ಬಗ್ಗೆ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ನಿರಂಜನ ವಾನಳ್ಳಿ, ‘ಬರವಣಿಗೆಯ ಭಾಷೆ ಮತ್ತು ಸಂವೇದನೆ’ ಎಂಬ ವಿಷಯದ ಬಗ್ಗೆ ಪ್ರಸಿದ್ಧ ಅಂಕಣಕಾರ ಮತ್ತು ವಿಶ್ರಾಂತ ಪ್ರಾಧ್ಯಾಪಕರಾದ ಡಾ. ನರೇಂದ್ರ ರೈ ದೇರ್ಲ, ‘ಪತ್ರಿಕಾ ಛಾಯಾಗ್ರಹಣ ಇಂದಿನ ಸವಾಲುಗಳು’ ಎಂಬ ವಿಷಯದ ಬಗ್ಗೆ ಹಿರಿಯ ಪತ್ರಿಕಾ ಛಾಯಾಗ್ರಾಹಕರಾದ ಆಸ್ಟ್ರೋ ಮೋಹನ್ ಹಾಗೂ ‘ಪುಸ್ತಕ ಪ್ರಕಾಶನ ಸೌಲಭ್ಯ ಮತ್ತು ಸವಾಲುಗಳು’ ಎಂಬ ವಿಷಯದ ಬಗ್ಗೆ ಆಕೃತಿ ಆಶಯ ಪಬ್ಲಿಕೇಶನ್ಸ್ ಇದರ ಕಲ್ಲೂರು ನಾಗೇಶ ಇವರುಗಳು ವಿಷಯ ಮಂಡನೆ ಮಾಡಲಿರುವರು.
ದಿನಾಂಕ 08 ಮೇ 2025ರಂದು ‘ಪುರವಣಿ ಮತ್ತು ಸಂದರ್ಶನ ಬರವಣಿಗೆ’ ಎಂಬ ವಿಷಯದ ಬಗ್ಗೆ ಉಪಸಂಪಾದಕಿ ಕೋಡಿಬೆಟ್ಟು ರಾಜಲಕ್ಷ್ಮಿ, ‘ವರದಿ ತಯಾರಿ ಸ್ವರೂಪ ಮತ್ತು ವೈವಿಧ್ಯ’ ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷರಾದ ಪಿ.ಬಿ. ಹರೀಶ್ ರೈ, ‘ಮಾಧ್ಯಮ ಬಹು ಕೌಶಲ್ಯದ ಅಗತ್ಯ’ ಎಂಬ ವಿಷಯದ ಬಗ್ಗೆ ನಟ ಬಡೆಕ್ಕಿಲ ಪ್ರದೀಪ್, ‘ಆಕಾಶವಾಣಿ ಅವಕಾಶಗಳು’ ಎಂಬ ವಿಷಯದ ಬಗ್ಗೆ ಸಹಾಯಕ ನಿರ್ದೇಶಕರಾದ ಸೂರ್ಯ ನಾರಾಯಣ ಭಟ್ ಮತ್ತು ‘ಬಾನುಲಿ ಬರವಣಿಗೆಯ ವೈಶಿಷ್ಟ್ಯಗಳು’ ಎಂಬ ವಿಷಯದ ಬಗ್ಗೆ ಪ್ರಸಾರ ನಿರ್ವಾಹಕರಾದ ಲತೀಶ್ ಪಾಲ್ದನೆ ಇವರುಗಳು ವಿಷಯ ಮಂಡನೆ ಮಾಡಲಿರುವರು.
ದಿನಾಂಕ 09 ಮೇ 2025ರಂದು ‘ಡಿಜಿಟಲ್ ಮೀಡಿಯಾ’ ಇದರ ಬಗ್ಗೆ ಸಂಪಾದಕರಾದ ಡಿ.ಎಂ. ಘನಶ್ಯಾಮ, ‘ಗ್ರಾಮೀಣ ಪತ್ರಿಕೋದ್ಯಮದ ಸವಾಲುಗಳು ಮತ್ತು ಅವಕಾಶಗಳು’ ಎಂಬ ವಿಷಯದ ಬಗ್ಗೆ ಸುದ್ಧಿ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ. ಶಿವಾನಂದ, ‘ದೃಶ್ಯ ಮಾಧ್ಯಮ ಅವಕಾಶ ಮತ್ತು ತಯಾರಿ’ ಎಂಬ ವಿಷಯದ ಬಗ್ಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ ಗಟ್ಟಿ ಮತ್ತು ‘ಪತ್ರಿಕಾ ಲೇಖನ ಬರವಣಿಗೆಯ ಸೂಕ್ಷ್ಮಗಳು’ ಎಂಬ ವಿಷಯದ ಬಗ್ಗೆ ಮುಖ್ಯಸ್ಥರಾದ ಡಾ. ಸಿಬಂತಿ ಪದ್ಮನಾಭ ಇವರುಗಳು ವಿಷಯ ಮಂಡನೆ ಮಾಡಲಿರುವರು. ಸಂಜೆ 3-15 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.