ಬೆಳಗಾವಿ : ಸಂಸ್ಕೃತಿ ಸಚಿವಾಲಯ ಭಾರತ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ, ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ ಸವದತ್ತಿ ಮತ್ತು ಕನ್ನಡ ಭವನ ಬೆಳಗಾವಿ ಇವರ ಆಶ್ರಯದಲ್ಲಿ ‘ನಾಟ್ಯಭೂಷಣ ಏಣಗಿ ಬಾಳಪ್ಪ ಸ್ಮರಣೋತ್ಸವ’ವನ್ನು ದಿನಾಂಕ 07ರಿಂದ 09 ನವೆಂಬರ್ 2025ರವರೆಗೆ ಪ್ರತಿದಿನ 6-30 ಗಂಟೆಗೆ ಬೆಳಗಾವಿಯ ರಾಮದೇವ ಹೊಟೇಲ್ ಹಿಂಭಾಗದಲ್ಲಿರುವ ಕನ್ನಡ ಭವನದಲ್ಲಿ ಆಯೋಜಿಸಲಾಗಿದೆ.
ದಿನಾಂಕ 07 ನವೆಂಬರ್ 2025ರಂದು ಬೆಳಗಾವಿಯ ರಂಗಸಂಪದ ಇವರಿಂದ ಸವಿತಾ ಭೈರಪ್ಪ ಇವರ ನಿರ್ದೇಶನದಲ್ಲಿ ‘ನಕ್ಷತ್ರ ಯಾತ್ರಿಕರು’, ದಿನಾಂಕ 08 ನವೆಂಬರ್ 2025ರಂದು ಸವದತ್ತಿಯ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆಯವರಿಂದ ಝಕೀರ ನದಾಫ ಇವರ ನಿರ್ದೇಶನದಲ್ಲಿ ‘ಹಾಲು ಬಟ್ಟಲದೊಳಗಿನ ಪಾಲು’ ಮತ್ತು ದಿನಾಂಕ 09 ನವೆಂಬರ್ 2025ರಂದು ಸವದತ್ತಿಯ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆಯವರಿಂದ ಝಕೀರ ನದಾಫ ಇವರ ನಿರ್ದೇಶನದಲ್ಲಿ ‘ನೆಲಮುಗಿಲು’ ನಾಟಕ ಪ್ರದರ್ಶನಗೊಳ್ಳಲಿದೆ.

									 
					