ಮಂಗಳೂರು : ಸೋಮೇಶ್ವರ ಕೊಲ್ಯದಲ್ಲಿರುವ ನಾಟ್ಯನಿಕೇತನ (ರಿ.) ಅರ್ಪಿಸುವ ‘ಕರ್ನಾಟಕ ರಾಜ್ಯೋತ್ಸವ’, ‘ಶಾಂತಲಾ ನಾಟ್ಯ’ ಪ್ರಶಸ್ತಿ’ ಪುರಸ್ಕೃತ ನೃತ್ಯ ಗುರು ನಾಟ್ಯಾಚಾರ್ಯ ಶ್ರೀ ಉಳ್ಳಾಲ ಮೋಹನ್ ಕುಮಾರ್ ಇವರ 90ನೇ ವರ್ಷಾಚರಣೆಯ ಪ್ರಯುಕ್ತ ನೃತ್ಯ ಸರಣಿ-ಮಾಲಿಕೆ 23ರ ‘ನಾಟ್ಯಮೋಹನ ನವತ್ಯುತ್ಸಹ’ ಕಾರ್ಯಕ್ರಮವನ್ನು ದಿನಾಂಕ 21 ನವೆಂಬರ್ 2025ರಂದು ಸಂಜೆ 5-30 ಗಂಟೆಗೆ ಕೊಲ್ಯದ ನಾಟ್ಯನಿಕೇತನ ನೃತ್ಯಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ಕಲಾತಿಲಕ ನಾಟ್ಯಾಚಾರ್ಯ ಶ್ರೀ ಉಳ್ಳಾಲ್ ಮೋಹನ್ ಕುಮಾರ್ ಇವರಿಂದ ದೇವತಾ ದೀಪ ಪ್ರಜ್ವಲನೆಯೊಂದಿಗೆ ಪ್ರಾರಂಭವಾಗುವ ಈ ಕಾರ್ಯಕ್ರಮದಲ್ಲಿ ನಿವೃತ್ತ ಪ್ರೊಫೆಸರ್ ಡಾ. ಕೆ.ಎಂ. ಉಷಾ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಉತ್ತರ ಕನ್ನಡದ ವಿದುಷಿ ಚಿತ್ರಲೇಖಾ ಬೋಳಾರ ಮತ್ತು ವಿದುಷಿ ಅನಯ ವಸುಧಾ ಇವರು ನೃತ್ಯ ಪ್ರಸ್ತುತಿ ನೀಡಲಿದ್ದಾರೆ.

