Subscribe to Updates

    Get the latest creative news from FooBar about art, design and business.

    What's Hot

    ಕದ್ರಿ ಯಕ್ಷ ಮಂಜುಳಾ ಮಹಿಳಾ ಬಳಗದವರಿಂದ ‘ಯಕ್ಷಗಾನ ತಾಳಮದ್ದಳೆ’ | ಫೆಬ್ರವರಿ 24

    February 21, 2026

    ಕೋಟ ‘ಅಹರ್ನಿಶ’ದಲ್ಲಿ ‘ಯಕ್ಷ ಗಾನ ವೈಭವ’

    February 21, 2026

    ‘ಮಲಬಾರ್ ವಿಶ್ವರಂಗ ಪುರಸ್ಕಾರ-2026’ಕ್ಕೆ ಐವರು ಹಿರಿಯ ರಂಗಕರ್ಮಿಗಳು

    February 21, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಎಡ್ಡಿ ಸಿಕ್ವೇರಾ ವಿರಚಿತ ’ನವ್- ರಂಗ್’ ನಾಟಕ ಕೃತಿ ಲೋಕಾರ್ಪಣೆ | ಆಗಸ್ಟ್ 31
    Book Release

    ಎಡ್ಡಿ ಸಿಕ್ವೇರಾ ವಿರಚಿತ ’ನವ್- ರಂಗ್’ ನಾಟಕ ಕೃತಿ ಲೋಕಾರ್ಪಣೆ | ಆಗಸ್ಟ್ 31

    August 29, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಹಿರಿಯ ರಂಗಕರ್ಮಿ, ನಿರೂಪಕ ಮತ್ತು ಚಿತ್ರ ಕಲಾವಿದರಾದ ಎಡ್ಡಿ ಸಿಕ್ವೇರಾ ಇವರ ಸಮಗ್ರ ರಂಗ ಕೃತಿಗಳ ಸಂಗ್ರಹ ‘ನವ್ ರಂಗ್’ ಇದರ ಲೋಕಾರ್ಪಣಾ ಸಮಾರಂಭವು ದಿನಾಂಕ 31 ಆಗಸ್ಟ್ 2024ನೇ ಶನಿವಾರದಂದು ಇಳಿಹಗಲು ಘಂಟೆ 6-00ಕ್ಕೆ ಸಂತ ಅಲೋಶಿಯಸ್ ಕಾಲೇಜಿನ ಸಹೋದಯ ಸಭಾಂಗಣದಲ್ಲಿ ನಡೆಯಲಿದೆ.

    ಸಮಾರಂಭದಲ್ಲಿ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಉಪಕುಲಪತಿ ವಂದನೀಯ ಡಾ. ಪ್ರವೀಣ್ ಮಾರ್ಟಿಸ್ ಕೃತಿ ಲೋಕಾರ್ಪಣೆಗೊಳಿಸಲಿದ್ದು, ಮೈಕಲ್ ಡಿ’ಸೋಜಾ ಟ್ರಸ್ಟ್ ಇದರ ಸಲಹೆಗಾರರಾದ ಸ್ಟೀಫನ್ ಪಿಂಟೊ, ಕಿಟಾಳ್ ಅಂತರ್ಜಾಲ ಪತ್ರಿಕೆಯ ಸಂಪಾದಕ ಎಚ್.ಎಮ್. ಪೆರ್ನಾಲ್ ಗೌರವ ಅತಿಥಿಗಳಾಗಿ ಭಾಗವಹಿಸಲಿರುವರು. ಇದೇ ಸಂದರ್ಭದಲ್ಲಿ ಕೃತಿಕಾರ ಎಡ್ಡಿ ಸಿಕ್ವೇರಾ ಮತ್ತು ಖ್ಯಾತ ರಂಗ ಕಲಾವಿದೆ ಜೀನಾ ಡಿ’ಸೋಜಾ ಆಯ್ದ ನಾಟಕ ದೃಶ್ಯಗಳ ವಾಚನಾಭಿನಯ ಪ್ರಸ್ತುತ ಪಡಿಸಲಿರುವರು.

    ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಸಂತ ಅಲೋಶಿಯಸ್ ಪ್ರಕಾಶನವು ಪ್ರೊ. ಡಾ. ವಿದ್ಯಾ ವಿನುತ ಡಿ’ಸೋಜಾ ಇವರ ನೇತೃತ್ವದಲ್ಲಿ ’ನವ್ ರಂಗ್’ ಕೃತಿಯನ್ನು ವಿಶ್ವ ಕೊಂಕಣಿ ಕೇಂದ್ರದ ಮೈಕಲ್ ಡಿ’ಸೊಜಾ ವಿಶನ್ ಕೊಂಕಣಿ ಪುಸ್ತಕ ಅನುದಾನ ಯೋಜನೆಯಡಿ ಪ್ರಕಟಿಸಿದ್ದು, ಎಡ್ಡಿ ಸಿಕ್ವೇರಾ ಅವರ ಮೂರು ಪ್ರಶಸ್ತಿ ವಿಜೇತ ನಾಟಕ ಕೃತಿಗಳು, ನಾಲ್ಕು ಜನಪ್ರಿಯ ಕಿರು ನಾಟಕಗಳು ಮತ್ತು ಕೊಂಕಣಿ ನಾಟಕದ ಬಗ್ಗೆ ರಾಷ್ಟ್ರ‍ ಮಟ್ಟದ ವಿಚಾರ ಸಂಕಿರಣಗಳಲ್ಲಿ ಪ್ರಸ್ತುತಪಡಿಸಿದ ಎರಡು ಅಧ್ಯಯನ ಪ್ರಬಂಧಗಳನ್ನು ಒಳಗೊಂಡಿದೆ.

    160 ಪುಟಗಳ ಪುಸ್ತಕದ ಮುಖಬೆಲೆ ರೂ. 200/- ಆಗಿದ್ದು, ಬಿಡುಗಡೆಯ ದಿನ ರಿಯಾಯತಿ ದರದಲ್ಲಿ ಪುಸ್ತಕ ಮಾರಾಟಕ್ಕೆ ಲಭ್ಯವಿದೆ.

    Share. Facebook Twitter Pinterest LinkedIn Tumblr WhatsApp Email
    Previous Articleಹೆಬ್ರಿಯಲ್ಲಿ ವಚನ ಸಾಹಿತ್ಯ ಸಂಭ್ರಮ, ಸಂಸ್ಥಾಪನಾ ದಿನ ಮತ್ತು ವಚನ ಗಾಯನ
    Next Article ಅರಸಿನಮಕ್ಕಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕೊಕ್ಕಡ ಹೋಬಳಿ ಘಟಕಕ್ಕೆ ಚಾಲನೆ
    roovari

    Comments are closed.

    Related Posts

    ಕಡಂದಲೆಯಲ್ಲಿ ಮೂಡುಬಿದಿರೆ ತಾಲೂಕು ‘ಕನ್ನಡ ಸಾಹಿತ್ಯ ಸಮ್ಮೇಳನ’ | ಫೆಬ್ರವರಿ 21

    February 20, 2026

    ಕನ್ನಡ ಭವನದಲ್ಲಿ ‘ಕಾಸರಗೋಡು-ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ 2026’ | ಫೆಬ್ರವರಿ 22

    February 20, 2026

    ಪಿ.ವಿ. ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ‘ಕನ್ನಡ ಕಂಪು ಸರಣಿ -9’

    February 19, 2026

    ಸಮ್ಮೇಳನದಲ್ಲಿ ಕೃತಿ ಬಿಡುಗಡೆಗೆ ಆಹ್ವಾನ | ಕೊನೆಯ ದಿನಾಂಕ ಫೆಬ್ರವರಿ 25

    February 18, 2026

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.