ಗದಗ : ಇದು ಜಗತ್ಪ್ರಸಿದ್ಧ ಚಿತ್ರಕಲಾವಿದ ವ್ಯಾನ್ ಗೋ ನ ಜೀವನ ಚಿತ್ರ. ಪ್ರೀತಿಗಾಗಿ ಪ್ರೇಯಸಿಗೆ ಕಿವಿಗಳು ಪ್ರಿಯವೆಂದು ಅವುಗಳು ಅವಳ ಬಳಿ ಇರಲೆಂದು ತನ್ನ ಕಿವಿಯನ್ನು ಕತ್ತರಿಸಿಕೊಟ್ಟವನು. ಅವನ ಮಾತುಗಳು ಹೀಗಿವೆ; ‘ನನ್ನ ಬಗ್ಗೆ ನಿಮಗೆ ತಿಳಿದಿರಬಹುದು… ಬಹಳಷ್ಟು. ಕಿವಿ ಕತ್ತರಿಸಿ ಕೆಂಪು ದೀಪದ ಬಾಲೆಗೆ ಕೊಟ್ಟದ್ದು. ಬಸಿರು ಹೊತ್ತ ಸಿಡುಬು ಮುಖದ ವೇಶೈಯೊಡನೆ ಸಂಸಾರ ಹೂಡಿದ್ದು, ಇಂದು ಕೋಟಿಗಟ್ಟಲೆ ಡಾಲರ್‌ಗಳಿಗೆ ಮಾರಾಟವಾಗುವ ನನ್ನ ಚಿತ್ರಗಳು ಒಂದು ಹೊತ್ತಿನ ಊಟಕ್ಕೂ ಒದಗದಿದ್ದದ್ದು. ಅದುಮಿಟ್ಟ ಭಾವನೆಗಳು ಕ್ಯಾನ್‌ವಾಸ್ ಮೇಲೆ ಭುಗಿಲೆದ್ದ ಬಣ್ಣಗಳಾಗಿ ಸ್ಫೋಟಿಸಿದ್ದು. ದಾರಿದ್ರದ ಅಂಚಿನಲ್ಲಿ ಹುಚ್ಚಾಸ್ಪತ್ರೆಯ ಒಳ – ಹೊರಗೆ ಬದುಕು ತಾಕಲಾಡಿದ್ದು. ನನ್ನನ್ನು ನೀವು ಕಂಡಿರುವಿರಿ, ಕೆಂಪು, ಹಸಿರು, ನೀಲಿ ಬಣ್ಣಗಳಲ್ಲಿ, ವರ್ಣಗಳು ಸ್ಫೋಟಿಸುವ ನನ್ನ ಚಿತ್ರಗಳಲ್ಲಿ ಬಿರಿದ ಹಳದಿ ಸೂರ್ಯಕಾಂತಿಗಳಲ್ಲಿ, ಹೊಲ ಬಯಲುಗಳಲ್ಲಿ, ರಾತ್ರಿ ಆಗಸದ ಮಬ್ಬು ಚುಕ್ಕಿಗಳಲ್ಲಿ, ನೋವಿಗದ್ದಿದ ನನ್ನ ಕುಂಚದಲ್ಲಿ !”
ಇದು ವ್ಯಾನ್ ಗೋ ಬದುಕು ಚಿತ್ರಿಸಿದ ಜೀವನ ಚರಿತ್ರೆಯ ಪುಸ್ತಕ. ಓದುಗರ ಗಮನ ಸೆಳೆದ ನೇಮಿಚಂದ್ರ ಅವರ ಪುಸ್ತಕಗಳ ಹಾಗೆ ಇದು ಕೂಡ ಓದುಗನ ಗಮನ ಸೆಳೆದಿದ್ದ ಕೃತಿಯೇ. ಇದೀಗ ಎಷ್ಟೋ ವರ್ಷಗಳ ನಂತರ ಮರುಮುದ್ರಣ ಕಂಡಿದೆ.
ರೂ: 145/- 10% ರಿಯಾಯಿತಿ
ಪಾವತಿಸಬೇಕಾದ ಮೊತ್ತ 145-14=131+30= ರೂ.161/-
ಪುಸ್ತಕಕ್ಕಾಗಿ ಲಡಾಯಿ ಪ್ರಕಾಶನ : 9480286844
ವ್ಯಾಟ್ಸಫ ಗಾಗಿ ಮಾತ್ರ : 91138 86844