ಮಂಗಳೂರು : ಭರತಾಂಜಲಿ (ರಿ.) ಕೊಟ್ಟಾರ ಮಂಗಳೂರು ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ನಗರದ ಪುರಭವನದಲ್ಲಿ ಇದೇ ದಿನಾಂಕ 27-01-2024 ಶನಿವಾರ ಸಂಜೆ ಗಂಟೆ 5.15ಕ್ಕೆ ‘ನೃತ್ಯಾಮೃತಂ 2024’ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತಾರೆ.
ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರತಿಷ್ಠಿತ ನೃತ್ಯ ಸಂಸ್ಥೆಗಳಾದ ನಾಟ್ಯ ನಿಕೇತನ (ರಿ) ಕೊಲ್ಯ, ಸನಾತನ ನಾಟ್ಯಾಲಯ (ರಿ) ಮಂಗಳೂರು, ಕಲಾನಿಕೇತನ ಡ್ಯಾನ್ಸ್ ಫೌಂಡೇಶನ್ (ರಿ) ಕಲ್ಲಡ್ಕ, ನೃತ್ಯ ಸುಧಾ (ರಿ) ಮೇರಿಹಿಲ್ ಮತ್ತು ನೃತ್ಯೋಪಾಸನಾ ಕಲಾ ಅಕಾಡೆಮಿ (ರಿ) ಪುತ್ತೂರು ಸಂಸ್ಥೆಗಳ ಕಲಾವಿದರುಗಳಿಂದ ಸಮೂಹ ನೃತ್ಯ ಪ್ರದರ್ಶನಗಳನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷರಾದ ಪಿ.ಬಿ. ಹರೀಶ್ ರೈ ಮಾಡಲಿದ್ದು, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀ ರಾಜೇಶ್ ಜಿ.ಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು ಎಂದು ಭರತಾಂಜಲಿಯ ನೃತ್ಯ ಗುರುಗಳಾದ ವಿದುಷಿ ಪ್ರತಿಮಾ ಶ್ರೀಧರ್ ತಿಳಿಸಿರುತ್ತಾರೆ.