ಬೆಂಗಳೂರು : ಕರ್ಣಾಟಕ ಯಕ್ಷಧಾಮ ಪ್ರಸ್ತುತ ಪಡಿಸುವ ‘ನೃತ್ಯೋಲ್ಲಾಸ – ಯಕ್ಷವಿಲಾಸ’ದಲ್ಲಿ ಕೂಚುಪುಡಿ ನರ್ತನ, ಸಭಾವಂದನ ಮತ್ತು ಯಕ್ಷಗಾನ ಪ್ರದರ್ಶನವು ದಿನಾಂಕ 29-10-2023 ಭಾನುವಾರ ಸಂಜೆ ಗಂಟೆ 3ಕ್ಕೆ ಬೆಂಗಳೂರಿನ ಚಾಮರಾಜ ಪೇಟೆಯ ಉದಯಭಾನು ಕಲಾ ಸಂಘದಲ್ಲಿ ನಡೆಯಲಿದೆ.
ಸಭಾ ಕಾರ್ಯಕ್ರಮದಲ್ಲಿ ಡಾ. ಪಿ. ಸದಾನಂದ ಮಯ್ಯ, ನಾಗರಾಜ ಉಪಾಧ್ಯಾಯ ಬಿ., ಪಿ. ನಾರಾಯಣ ಹೇರ್ಳೆ, ಎಮ್. ಸುಧೀಂದ್ರ ಹೊಳ್ಳ, ಎಸ್. ಪ್ರದೀಪ ಕುಮಾರ ಕಲ್ಕೂರ, ಗೋಪಾಲಕೃಷ್ಣ ಸೋಮಯಾಜಿ, ಜಿ. ವೆಂಕಟರಮಣ ಸೋಮಯಾಜಿ, ಎಮ್. ಸುಂದರೇಶ ಹೊಳ್ಳ, ರತ್ನಾಕರ ಜೈನ್ ಮಂಗಳೂರು ಇವರ ಗೌರವ ಉಪಸ್ಥಿತಿಯಲ್ಲಿ ಶ್ರೀ ಕೃಷ್ಣಮೂರ್ತಿ ಐತಾಳ ದ್ವಾರಕ ಮತ್ತು ಶ್ರೀಮತಿ ಎಮ್. ರಾಜಶ್ರೀ ನಾಗರಾಜ ಹೊಳ್ಳ ಇವರನ್ನು ಸನ್ಮಾನಿಸಲಾಗುವುದು.
ಸಭಾ ಕಾರ್ಯಕ್ರಮದ ನಂತರ ಶ್ರೀಮತಿ ಎಮ್. ರಾಜಶ್ರೀ ನಾಗರಾಜ ಹೊಳ್ಳ ಇವರಿಂದ ಕೂಚುಪುಡಿ ನೃತ್ಯ ಪ್ರದರ್ಶನ ನಡೆಯಲಿದೆ. ಯಕ್ಷ ಕಣ್ಮಣಿಗಳಾದ ಸುಬ್ರಾಯ ಹೆಬ್ಬಾರ, ಅಕ್ಷಯ ಕುಮಾರ, ಶ್ರೀನಿವಾಸ ಪ್ರಭು, ಪ್ರಸನ್ನ ಶೆಟ್ಟಿಗಾರ, ಶಶಿಕಾಂತ ಶೆಟ್ಟಿ, ಸುಜಯೀಂದ್ರ ಹಂದೆ, ಅಜಿತ ಕಾರಂತ, ಜನಾರ್ದನ ಹಂದೆ, ರಾಮಕೃಷ್ಣ ಭಟ್, ಅಂಬರೀಷ ಭಟ್, ಲಕ್ಷ್ಮೀಪ್ರಸಾದ ಇವರಿಂದ ಪೌರಾಣಿಕ ಪ್ರಸಂಗ ‘ಸುಧನ್ವ ಕಾಳಗ’ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಮಾಧುರಿ ಶ್ರೀರಾಮ್, ವಿಶ್ವನಾಥ ಉರಾಳ, ರಘುಪ್ರಸಾದ, ಅಶೋಕ ಉಡುಪ, ಕುಮಾರಿ ನಿಧಿ, ಪೂರ್ಣಿಮ ಶಂಕರನಾರಾಯಣ ಇವರು ಸಹಕರಿಸಲಿದ್ದಾರೆ.