ಮಂಗಳೂರು : ಸಮತಾ ಮಹಿಳಾ ಬಳಗದಿಂದ ಜುಲೈ ತಿಂಗಳ ಯೋಜನೆಯ ಅಂಗವಾಗಿ ಭರತನಾಟ್ಯ ಕಲಾವಿದೆ ತನ್ವಿರಾವ್ ಅವರ ನೃತ್ಯ ಕಾರ್ಯಕ್ರಮ ದಿನಾಂಕ 15 ಜುಲೈ 2025ರಂದು ಮಂಗಳೂರಿನ ಸುಬ್ರಹ್ಮಣ್ಯ ಸದನದಲ್ಲಿ ನಡೆಯಿತು.
ಬಳಗದ ಅಧ್ಯಕ್ಷೆ ಕಾತ್ಯಾಯನಿ ಭಿಡೆಯವರು ಅಧ್ಯಕ್ಷತೆ ವಹಿಸಿದ್ದರು. ನೃತ್ಯದ ಬಳಿಕ ತನ್ವಿ ರಾವ್ ಇವರನ್ನು ಬಳಗದ ಪರವಾಗಿ ಸಮ್ಮಾನಿಸಲಾಯಿತು. ಈ ಸಂದರ್ಭ ತಿಂಡಿ ತಯಾರಿಯ ಸ್ಪರ್ಧೆಯಲ್ಲಿ ವಿಜೇತರಾದ ಭಾಗ್ಯ ಉಡುಪ, ಶೋಭಾ ಪೇಜಾವರ, ಸುಮಂಗಲಾ ಬಾಗೋಡಿ ಮತ್ತು ಸುಧಾ ರಾಜೇಂದ್ರ ಇವರಿಗೆ ಪಿ. ಶೋಭಾ ರಾವ್ ಪ್ರಾಯೋಜಿತ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶೋಭಾ ಜಗದೀಶ್, ಮಿತ್ರಾರಾವ್, ವಿಜಯಲಕ್ಷ್ಮಿ ರಾವ್, ವನಿತಾ ಎಲ್ಲೂರು, ಸುಮತಿ ಶೆಗ್ರಿತ್ತಾಯ, ಸಾವಿತ್ರಿ ಬಿ. ರಾವ್, ವಿಶಾಲಾ – ಕೇಶವ ಭಟ್, ಸರಳಾ ರಾವ್, ರೂಪಲಕ್ಷ್ಮೀ ಹರೀಶ್, ರಮ್ಯಾ ರಾವ್, ಹೇಮಾ ಸತೀಶ್ಚಂದ್ರ, ಬಿ. ಎಚ್. ಹರಿಪ್ರಸಾದ ರಾವ್, ಸ್ವರ್ಣ ಗೌರಿ, ವಿಜಯಲಕ್ಷ್ಮೀ ಭಟ್ ಉಳುವಾನ, ಹೇಮಾ ದಿನೇಶ್, ರಮಾಮಣಿ ಭಟ್ ಉಪಸ್ಥಿತರಿದ್ದರು. ಅನುಪಮಾ ಅನಂತಮೂರ್ತಿ ನಿರೂಪಿಸಿ, ಸೀಮಾ ರಜನೀಶ್ ವಂದಿಸಿದರು.