ಮಂಗಳೂರು : ಉರ್ವದ ನಾಟ್ಯಾರಾಧನಾ ಕಲಾಕೇಂದ್ರದ ವತಿಯಿಂದ ‘ನಾಟ್ಯಾರಾಧನಾ ತ್ರಿಂಶೋತ್ಸವ’ದ ಸಮಾರೋಪ ಸಮಾರಂಭದಲ್ಲಿ ‘ನೃತ್ಯ ಸಂಭ್ರಮ’ ಹಾಗೂ ‘ಯಕ್ಷ ಭರತ ಸಂಗಮ’ ಕಾರ್ಯಕ್ರಮವನ್ನು ದಿನಾಂಕ 28 ಡಿಸೆಂಬರ್ 2024ರಂದು ಪುರಭವನದಲ್ಲಿ ಆಯೋಜಿಸಿಲಾಗಿತ್ತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಸರೆ ಚಾರಿಟೇಬಲ್ ಟ್ರಸ್ಟಿನ ಡಾ. ಆಶಾಜ್ಯೋತಿ ರೈ ಇವರ ವಹಿಸಿದ್ದರು. ಇದೇ ಸಂದರ್ಭದಲ್ಲಿ ನಾಟ್ಯಾರಾಧನಾ ಸಂಸ್ಥೆಗೆ ನಿಸ್ವಾರ್ಥವಾಗಿ ತೆರೆಮರೆಲ್ಲಿ ಆಧಾರವಾಗಿ ಸಹಕರಿಸಿದ ಹಿರಿಯ ಮೃದಂಗವಾದಕರಾದ ಶ್ರೀ ಬಿ. ರಮೇಶ್ ರಾವ್ ಸುರತ್ಕಲ್, ವರ್ಣಾಲಂಕಾರ ವಸ್ತ್ರಾಲಂಕಾರ ತಜ್ಞರಾದ ಶ್ರೀ ಎಚ್.ಯು. ಅನಂತಯ್ಯ ಹೊಸಬೆಟ್ಟು, ಶ್ರೀ ಎಚ್. ಧನಪಾಲ್ ಶೆಟ್ಟಿಗಾರ್, ಶ್ರೀ ದಿನೇಶ್ ಶೆಟ್ಟಿಗಾರ್ ಮಂಗಳೂರು ಹಾಗೂ ವಿದುಷಿ ಪ್ರಾರ್ಥನಾ ಜೆ. ಹೊಸಬೆಟ್ಟು ಇವರುಗಳನ್ನು ‘ತ್ರಿಂಶೋತ್ಸವ ಸನ್ಮಾನ’ದ ಮೂಲಕ ಗೌರವಿವಿ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು, ರಾಮನಗರದ ಡಿ.ವೈ.ಎಸ್.ಪಿ. ಶ್ರೀ ಪಿ. ದಿನಕರ್ ಶೆಟ್ಟಿ, ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೃಷ್ಣಮೂರ್ತಿ, ಯಕ್ಷಧ್ರುವ ಯಕ್ಷಶಿಕ್ಷಣದ ಪ್ರಧಾನ ಸಂಚಾಲಕರಾದ ಶ್ರೀ ಪಣಂಬೂರು ವಾಸುದೇವ ಐತಾಳ್, ಕಲಾಶ್ರೀ ಗುರು ಚಂದ್ರಶೇಖರ ನಾವಡ, ಪಣಂಬೂರು ವೆಂಕಟ್ರಾಯ ಐತಾಳ್, ಉಡುಪಿಯ ಸಾಂಸ್ಕೃತಿಕ ಪ್ರತಿಷ್ಠಾನದ ಸ್ಥಾಪಕಿ ಶ್ರೀಮತಿ ಗೋಪಿಕಾ ಸತೀಶ್ ಮಯ್ಯ, ನಾಟ್ಯಾರಾಧನಾ ತ್ರಿಂಶೋತ್ಸವದ ಉಪಾಧ್ಯಕ್ಷರಾದ ಬೈಕಾಡಿ ಶ್ರೀನಿವಾಸ ರಾವ್, ನಾಟ್ಯಾರಾಧನಾ ವಿದ್ಯಾರ್ಥಿ ಸಮಿತಿಯ ಅಧ್ಯಕ್ಷೆ ಶ್ರೀಮತಿ ಮೃಣಾಲ ರಾಘವೇಂದ್ರ ಬೆಂಗಳೂರು ಹಾಗೂ ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ ಅಮೆರಿಕಾದ ನೇಹಾ ಬಿ. ಮುಖ್ಯ ಅಭ್ಯಾಗತರಾಗಿ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗುರು ವಿದುಷಿ ಸುಮಂಗಲಾ ರತ್ನಾಕರ್ ರಾವ್ ಇವರ ಗುರುತ್ವ ಮತ್ತು ನಿರ್ದೇಶನದಲ್ಲಿ ಮಂಗಳೂರಿನ ಉರ್ವ ನಾಟ್ಯಾರಾಧನಾ ಕಲಾ ಕೇಂದ್ರ (ರಿ.) ಇದರ ವಿದ್ಯಾರ್ಥಿ ವೃಂದದಿಂದ ‘ನೃತ್ಯ ಸಂಭ್ರಮ’ ಮತ್ತು ‘ಯಕ್ಷ-ಭರತ ಸಂಗಮ’ದಲ್ಲಿ ‘ಭಸ್ಮಾಸುರ ಮೋಹಿನಿ’ ಎಂಬ ಆಖ್ಯಾನದಲ್ಲಿ ನಿರ್ಣಯಿಸಿದ್ದು ಭರತನಾಟ್ಯ ಮತ್ತು ಯಕ್ಷಗಾನ ಪ್ರಕಾರಗಳಲ್ಲಿ ಎರಡು ಹಿಮ್ಮೇಳಗಳ ಸಹಿತ ರಂಗ ಸಾಕ್ಷಾತ್ಕಾರಗೊಂಡಿತು. ಭರತನಾಟ್ಯ ಹಿಮ್ಮೇಳ ಕಲಾವಿದರಾಗಿ ವಿದುಷಿ ಸುಮಂಗಲಾ ರತ್ನಾಕರ್ ರಾವ್ ಮಂಗಳೂರು, ವಿದ್ವಾನ್ ಶ್ರೀ ಕೃಷ್ಣ ಆಚಾರ್ ಪಾಣೆಮಂಗಳೂರು, ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಮಂಗಳೂರು, ವಿದುಷಿ ಶರ್ಮಿಳಾ ರಾವ್ ಉಡುಪಿ ಹಾಗೂ ಯಕ್ಷಗಾನದ ಹಿಮ್ಮೇಳದಲ್ಲಿ ಧೀರಜ್ ರೈ ಸಂಪಾಜೆ, ಶಿತಿಕಂಠ ಭಟ್ ಉಜಿರೆ, ಶ್ರೀ ಕೌಶಿಕ್ ರಾವ್ ಪುತ್ತಿಗೆ ಹಾಗೂ ಶ್ರೀ ಸ್ವಸ್ತಿಕ್ ರಾವ್ ಕಾವೂರು ಸಹಕರಿಸಿದರು.