ಬಂಟ್ವಾಳ : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಬಂಟ್ವಾಳ ವಲಯದ ಸಹಯೋಗದಲ್ಲಿ ಯುವ ಲೇಖಕರಿಗೆ ತರಬೇತಿ ಕರ‍್ಯಾಗಾರ ದಿನಾಂಕ 24 ನವೆಂಬರ್ 2024 ರಂದು ಮೊಡಂಕಾಪು ಕನ್ನಡ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ನಡೆಯಿತು.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಬಂಟ್ವಾಳ ವಲಯದ ಆಧ್ಯಾತ್ಮಿಕ ನಿರ್ದೇಶಕರಾದ ವಂ. ಫಾ. ವಲೇರಿಯನ್ ಡಿಸೋಜ, ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಬಂಟ್ವಾಳ ವಲಯದ ಅಧ್ಯಕ್ಷರಾದ ಶ್ರೀ ಜೋನ್ ಲಸ್ರಾದೊ, ಬಂಟ್ವಾಳ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮಿಣ ಅಭಿವೃದ್ದಿ ಬ್ಯಾಂಕ್ ಇದರ ಅಧ್ಯಕ್ಷರಾದ ಶ್ರೀ ಅರುಣ್ ರೋಶನ್ ಡಿಸೋಜ, ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಕೇಂದ್ರಿಯ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಸ್ಟ್ಯಾನಿ ಲೋಬೊ ಈ ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.
ತರಬೇತುದಾರರಾಗಿ ಆಗಮಿಸಿದ ಕವಯತ್ರಿಯಾದ ಶ್ರೀಮತಿ ಡಿಂಪಲ್ ಜೆನಿಫರ್ ಫರ‍್ನಾಂಡಿಸ್ ಇವರು ಕವಿತೆ ರಚನೆ ಹಾಗೂ ತಮ್ಮ ಅನುಭವದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು. ಕವನಗಳು ಹೇಗೆ ಉದ್ಬವಗೊಳ್ಳುತ್ತವೆ, ಯಾವ ರೀತಿ ಕವನ ಬರೆಯಬಹುದೆಂದು ಮಾಹಿತಿ ನೀಡಿದರು. ಯುವಕವಿ, ಕಥೆಗಾರರಾದ ಶ್ರೀ ಗ್ಲ್ಯಾನಿಷ್ ಮರ‍್ಟಿಸ್ ಯುವ ಲೇಖಕರಿಗೆ ಕಥೆ ಬರೆಯುವ ವಿಧಾನ ಹಾಗೂ ಹಂತಗಳ ಬಗ್ಗೆ ಮಾಹಿತಿ ನೀಡಿ, ಕಥೆ ಹೇಗೆ ಬರೆಯಬೇಕೆಂದು ತಿಳಿಸಿದರು.
ಶ್ರೀ ಸಮರ್ಥ ಭಟ್ ಇವರ ಸದಸ್ಯ ಸಂಚಾಲಕತ್ವದಲ್ಲಿ ಈ ಕಾರ್ಯಾಗಾರ ನಡೆಯಿತು, ಅಕಾಡೆಮಿ ಸದಸ್ಯರುಗಳಾದ ಶ್ರೀ ನವೀನ್ ಲೋಬೊ, ಶ್ರೀಮತಿ ಅಕ್ಷತಾ ಎಂ. ನಾಯಕ್ ಕಾರ್ಯಗಾರದಲ್ಲಿ ಭಾಗವಹಿಸಿದ್ದರು.