Subscribe to Updates

    Get the latest creative news from FooBar about art, design and business.

    What's Hot

    ಮಂಗಳೂರಿನ ಸಂತ ಆಲೋಶಿಯಸ್ ಕಾಲೇಜಿನಲ್ಲಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ | ಫೆಬ್ರವರಿ 19

    February 18, 2026

    ಸಮ್ಮೇಳನದಲ್ಲಿ ಕೃತಿ ಬಿಡುಗಡೆಗೆ ಆಹ್ವಾನ | ಕೊನೆಯ ದಿನಾಂಕ ಫೆಬ್ರವರಿ 25

    February 18, 2026

    ಮುಂಬಯಿ ವಿಶ್ವವಿದ್ಯಾಲಯದಲ್ಲಿ ‘ಕಾಗೆ ಬಣ್ಣದ ಕವಿತೆ’ ಕವನ ಸಂಕಲನ ಬಿಡುಗಡೆ

    February 18, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪಕ್ಷಿಕೆರೆ ಪದ್ಮನಾಭರಿಗೆ ಮಸ್ಕತ್ ನಲ್ಲಿ ಸನ್ಮಾನ
    Yakshagana

    ಪಕ್ಷಿಕೆರೆ ಪದ್ಮನಾಭರಿಗೆ ಮಸ್ಕತ್ ನಲ್ಲಿ ಸನ್ಮಾನ

    May 24, 2023Updated:August 19, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಸ್ಕತ್: ಕಳೆದ ಮೂರು ದಶಕಗಳಿಂದ ಶನೀಶ್ವರ ಪೂಜಾ ಸಹಿತ ತಾಳಮದ್ದಳೆಯ ಹಿಮ್ಮೇಳ ಕಲಾವಿದರಾಗಿ, ಸಂಘಟಕರಾಗಿ ಪ್ರಸಿದ್ದಿ ಪಡೆದ ಪದ್ಮನಾಭ ಶೆಟ್ಟಿಗಾರ್ ಪಕ್ಷಿಕೆರೆ ಅವರನ್ನು ಓಮನ್ ಮಸ್ಕತ್ ನಲ್ಲಿ ಬಿರುವ ಜವನೆರ್ ಮಸ್ಕತ್ ನಲ್ಲಿ ಸನ್ಮಾನಿಸಿ ಗೌರವಿಸಿದರು.

    ಸಹೋದರ ನೋಣಯ್ಯ ಶೆಟ್ಟಿಗಾರ್ ಅವರಿಂದ ಬಾಲ ಪಾಠ, ಮುಂದೆ ದಿವಾಣ ಭೀಮ ಭಟ್ ಅವರಿಂದ ಚೆಂಡೆ ಮದ್ದಳೆ ಕಲಿತು ಹವ್ಯಾಸಿ ವಲಯದಲ್ಲಿ ಹಲವಾರು ಸಂಘಗಳಲ್ಲಿ ತಾಳಮದ್ದಳೆ, ಬಯಲಾಟಗಳಲ್ಲಿ ಹಿಮ್ಮೇಳ ವಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಶ್ರೀ ಶನೀಶ್ವರ ಭಕ್ತ ವೃಂದ, ಪಕ್ಷಿಕೆರೆ ಎಂಬ ತಂಡ ಕಟ್ಟಿ ಮಸ್ಕತ್, ದುಬೈ, ಅಬುದಾಬಿ, ಮುಂಬೈ ಹೀಗೆ ಊರು ಪರವೂರುಗಳಲ್ಲಿ ಶನಿ ಪೂಜೆ ತಾಳಮದ್ದಳೆ ಸಂಘಟಿಸಿದ್ದಾರೆ.

    ಎರಡನೇ ಸಲ ಮಸ್ಕತ್ ಗೆ ತಂಡ ಸಂಯೋಜಕರಾಗಿ ಆಗಮಿಸಿ ಸ್ವಾಮಿ ಕೊರಗಜ್ಜ, ಶ್ರೀ ಶನೀಶ್ವರ ಮಹಾತ್ಮೆ ತಾಳಮದ್ದಳೆ ನಡೆಸಿಕೊಟ್ಟ ಪದ್ಮನಾಭ ಅವರನ್ನು ಕದ್ರಿ ನವನೀತ ಶೆಟ್ಟಿ ಹಾಗೂ ದಯಾನಂದ ಜಿ. ಕತ್ತಲ್ ಸಾರ್ ಪರಿಚಯಿಸಿ ಅಭಿನಂದಿಸಿದರು.

    ಬಿರುವ ಜವನೆರ್ ಸಂಘಟನೆಯ ಗುರುಪ್ರಸಾದ್ ರಾಮ ಅಮೀನ್ ಸನಿಲ್, ನಿತಿನ್ ಕುಮಾರ್ ಹುಣಸೆಕಟ್ಟೆ, ಶಂಕರ್ ಉಪ್ಪೂರು, ಶ್ರೀಧರ ಅಮೀನ್ ಚಂದ್ರಕಾಂತ್ ಕೋಟ್ಯಾನ್, ದಾಮೋದರ ಕುಂದರ್, ಮಾಧುರಿ ಸುವರ್ಣ ಉಪಸ್ಥಿತರಿದ್ದರು. ಶ್ವೇತ ಸುವರ್ಣ ನಿರೂಪಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleನಾರಿ ಚಿನ್ನಾರಿಯ ಸರಣಿ ಕಾರ್ಯಕ್ರಮ – ‘ವೈಶಾಖ ಲಹರಿ’
    Next Article ಕನ್ನಡ ಸಾಹಿತ್ಯ ಪರಿಷತ್ತು – ‘ದತ್ತಿ ಉಪನ್ಯಾಸ’ ಕಾರ್ಯಕ್ರಮ
    roovari

    Add Comment Cancel Reply


    Related Posts

    ಉಮಾಮಹೇಶ್ವರ ಯಕ್ಷಗಾನ ಅಧ್ಯಯನ ಕೇಂದ್ರದ ವಾರ್ಷಿಕೋತ್ಸವ ಸಮಾರಂಭ

    February 18, 2026

    ಬನ್ನೂರಿನ ಶ್ರೀ ಬಲಮುರಿ ವಿದ್ಯಾ ಗಣಪತಿ ದೇವಸ್ಥಾನದಲ್ಲಿ ಮಾಸಿಕ ತಾಳಮದ್ದಲೆ

    February 18, 2026

    ಅತ್ತಾವರ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ‘ಯಕ್ಷ ಗಾನಾರ್ಚನೆ’

    February 17, 2026

    ಡಾ. ನಿತ್ಯಾನಂದ ಬಿ. ಶೆಟ್ಟಿ ಇವರ ‘ಅಳವು ಅರಿಯದ ಭಾಷೆ’ ಪುಸ್ತಕ ಲೋಕಾರ್ಪಣೆ

    February 16, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.