ಧಾರವಾಡ : ಉತ್ತರ ಕರ್ನಾಟಕದ ಜನಪ್ರಿಯ ರಂಗ ಸಂಸ್ಥೆಯಾದ ಅಭಿನಯ ಭಾರತಿ ತನ್ನ 44ನೇ ವರ್ಷದ ಆರಂಭವನ್ನು ಧಾರವಾಡದ ಸೃಜನಾ ರಂಗಮಂದಿರದಲ್ಲಿ ದಿನಾಂಕ 01-07-2024 ಮತ್ತು 02-07-2024ರಂದು ಸಂಜೆ 6-00 ಗಂಟೆಗೆ ‘ವಸಂತೋತ್ಸವ’ ಕಾರ್ಯಕ್ರಮದಲ್ಲಿ ಮೂರು ನಾಟಕಗಳ ಪ್ರದರ್ಶನವನ್ನು ಹಮ್ಮಿಕೊಂಡಿದೆ.
ಮೂರು ನಾಟಕಗಳ ವಿವರ ಹೀಗಿವೆ :
ದಿನಾಂಕ 01-07-2024ರಂದು ಸಂಜೆ ಗಂಟೆ 6ಕ್ಕೆ ಹಾಸ್ಯ ನಾಟಕ : “ನಾ ತುಕಾರಾಂ ಅಲ್ಲ”
ರಚನೆ : ಶ್ರೀ ಎನ್. ಸುರೇಂದ್ರನಾಥ
ನಿರ್ದೇಶಕರು : ಶ್ರೀ ಶ್ರೀಪತಿ ಮಂಜನಬೈಲ್
ಅವಧಿ : 100 ನಿಮಿಷ
ದಿನಾಂಕ 02-07-2024ರಂದು ಸಂಜೆ ಗಂಟೆ 6ಕ್ಕೆ ನಾಟಕ : “ಉರಿಯ ಉಯ್ಯಾಲೆ”
ರಚನೆ : ಡಾ. ಎಚ್.ಎಸ್. ವೆಂಕಟೇಶಮೂರ್ತಿ
ನಿರ್ದೇಶಕರು : ಶ್ರೀಪತಿ ಮಂಜನ ಬೈಲ್
ಅವಧಿ : 80 ನಿಮಿಷ
ದಿನಾಂಕ 02-07-2024ರಂದು ಸಂಜೆ ಗಂಟೆ 7.30ಕ್ಕೆ ನಾಟಕ : “ಎಸಿ ವರ್ಸಸ್ ಡಿಸಿ” (ಹಾಸ್ಯ + ವಿಜ್ಞಾನ ಪ್ರಾಮುಖ್ಯತೆ ಪಡೆದ ನಾಟಕ)
ರಚನೆ : ಡಾ. ಮೃತ್ಯುಂಜಯ ಕಪ್ಪಾಳಿ
ನಿರ್ದೇಶಕರು : ಡಾ. ಅರವಿಂದ ಕುಲಕರ್ಣಿ
ಅವಧಿ : 80 ನಿಮಿಷ
ಸಹೃದಯ ಪ್ರೇಕ್ಷಕರು ಅಭಿನಯ ಭಾರತಿ ಸಂಸ್ಥೆಯ ಸದಸ್ಯರಾಗುವ ಮೂಲಕ, ಪ್ರೋತ್ಸಾಹ ನೀಡಬೇಕೆಂದು ವಿನಂತಿಸಲಾಗಿದೆ. ಅಭಿನಯ ಭಾರತಿ ತನ್ನ ಸದಸ್ಯರಿಗೆ ಕನಿಷ್ಠ ನಾಲ್ಕು ನಾಟಕ ಮತ್ತು 12 ಉಪನ್ಯಾಸಗಳನ್ನು, ರಂಗ ಪ್ರಶಸ್ತಿ ಮತ್ತಿತರ ಹಲವು ಕಾರ್ಯಕ್ರಮ ನೀಡುತ್ತಾ ಬಂದಿದೆ. ಬರಲಿರುವ ನೂರು ದಿನಗಳಲ್ಲಿ, ಹಾಸ್ಯ ನಾಟಕ ರಚನಾ ಸ್ಪರ್ಧೆ, ಉತ್ಸವ (ಮೂರು ಅಥವಾ ಐದು ನಾಟಕಗಳು), ಸಾಮಾನ್ಯ ನಾಟಕ ಸ್ಪರ್ಧೆ, ಮೂರು ರಂಗ ತರಬೇತಿ ಕಮ್ಮಟಗಳು, ಖೋ ಮಾದರಿ ನಾಟಕ ರಚನೆಯ ವಾಚನ, ಇನ್ನೂ ವಿನೂತನವಾದ ರಾಷ್ಟ್ರೀಯ ಮಟ್ಟದಲ್ಲಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕೆಂದಿದೆ. ಈ ಎಲ್ಲಾ ನಾಟಕಗಳು ಅಭಿನಯ ಭಾರತಿ ಸದಸ್ಯರುಗಳಿಗೆ ಉಚಿತವಾಗಿವೆ. ಸದಸ್ಯತ್ವ ವಿವರ ಹೀಗಿವೆ. ವಾರ್ಷಿಕ ಸದಸ್ಯತ್ವ : 500/- ಮತ್ತು ಐದು ವರ್ಷ ಸದಸ್ಯತ್ವ : 2,000/-. ಹೆಚ್ಚಿನ ವಿವರಗಳಿಗಾಗಿ ಪ್ರೊ. ಅರವಿಂದ ಕುಲಕರ್ಣಿ (80734 79394) ಸಂಪರ್ಕ ಮಾಡಬಹುದು.