ಬೆಂಗಳೂರು: ಮಣೂರ ಪ್ರಕಾಶನ ಕಲಬುರಗಿ ಇವರ ವತಿಯಿಂದ ಮಕರ ಸಂಕ್ರಾ೦ತಿ ನಿಮಿತ್ತ ಚೆನ್ನಮ್ಮಾಜಿಯವರ ಐಕ್ಯ ಸ್ಥಳವಾದ ಬೈಲಹೊಂಗಲದಲ್ಲಿ 13 ಜನವರಿ 2024ರಂದು ರಾಜ್ಯಮಟ್ಟದ ಕವಿಗೋಷ್ಠಿ ಆಯೋಜಿಸಲಾಗಿದೆ.
ಈ ನಿಮಿತ್ತ ಉದಯೋನ್ಮುಖ ಹಾಗೂ ಪ್ರತಿಭಾವಂತ ಕವಿಗಳಿಂದ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ, ವೀರರಾಣಿ ಕಿತ್ತೂರು ಚನ್ನಮ್ಮ, ಸ್ವಾತಂತ್ರ‍್ಯ ಹೋರಾಟಗಾರರು, ಕನ್ನಡ ನಾಡು, ನುಡಿ, ಇತಿಹಾಸ, ಸಂಸ್ಕೃತಿ, ಪರಂಪರೆ, ಪರಿಸರ ಪ್ರೇಮ, ರಾಷ್ಟ್ರಪ್ರೇಮ, ಮಾನವೀಯ ಮೌಲ್ಯಗಳು ಇತ್ಯಾದಿ ವಿಷಯಗಳಿಗೆ ಸಂಬ೦ಧಿಸಿದ೦ತೆ ಕವನಗಳನ್ನು ಆಹ್ವಾನಿಸಲಾಗಿದೆ.
ಕವನವು 30 ಸಾಲುಗಳಿಗೆ ಮಿಕ್ಕದಂತೆ ಕಾಗದದ ಒಂದೇ ಮಗ್ಗುಲಲ್ಲಿ ಬರೆದು ಅಥವಾ ಡಿ. ಟಿ. ಪಿ. ಮಾಡಿಸಿರಬೇಕು. ಸ್ವವಿಳಾಸ, ಕಿರುಪರಿಚಯ, ಭಾವಚಿತ್ರ, ವಾಟ್ಸಪ್ ಮೊಬೈಲ್ ಸಂಖ್ಯೆಯೊ೦ದಿಗೆ 05 ಜನವರಿ 2025ರ ಒಳಗಾಗಿ ಮೋಹನ ಬಸನಗೌಡ ಪಾಟೀಲ, ಮಾಜಿ ಜಿಲ್ಲಾಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ‘ಬಸವ ನಿವಾಸ’, ಚನ್ನಮ್ಮನಗರ ಮೊದಲನೆಯ ಅಡ್ಡರಸ್ತೆ, ಬೈಲಹೊಂಗಲ- 591102, ಬೆಳಗಾವಿ ಜಿಲ್ಲೆ. ಈ ವಿಳಾಸಕ್ಕೆ ನೋಂದಾಯಿತ ಅಂಚೆ ಮೂಲಕ ಕಳಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ 94489 20888 ಸಂಪರ್ಕಿಸಬೇಕೆ೦ದು ಮಣೂರ ಪ್ರಕಾಶನದ ಮುಖ್ಯಸ್ಥರಾದ ಡಾ. ಫಾರೂಕ್ ಅಹಮ್ಮದ್ ತಿಳಿಸಿದ್ದಾರೆ.